RCBಗೆ ಸೇಡು , KXIPಗೆ ಮಾಡು ಇಲ್ಲವೇ ಮಡಿ

ಐಪಿಎಲ್ 2020ಯ ಮ್ಯಾಚ್ ನಂಬರ್ 31 ಗುರುವಾರ ಆರ್‍ಸಿಬಿ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ನಡೀತಾ ಇದ್ದು, ಆರ್‍ಸಿಬಿ ಈಗಾಗಲೇ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಬಾರೀ ಅಂತರದಿಂದ ಸೋಲನ್ನು ಕಂಡಿದ್ದು, ಇದೀಗ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ. ಈಗಾಗಲೇ ಆರ್‍ಸಿಬಿ ಸೋಲಿನಿಂದ ಪಾಠಕಲಿತು ಬ್ಯಾಟಿಂಗ್,ಫೀಲ್ಡಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡೋ ಮೂಲಕ ಸತತ ಗೆಲುವಿನ ಮೂಲಕ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಗಳಿಸಿಕೊಂಡಿದೆ.

ಇನ್ನು ತಂಡಕ್ಕೆ ಕ್ರಿಸ್ ಮಾರಿಸ್ ಎಂಟ್ರಿ ಬಲತಂದುಕೊಟ್ಟಿದ್ದು, ಬೌಲಿಂಗ್‍ನಲ್ಲಿ ಕ್ರಿಸ್ ಮಾರಿಸ್ ಜೊತೆಯಲ್ಲಿ ನವದೀಪ್ ಶೈನಿ,ಉಡಾನರ ಬೌಲಿಂಗ್ ಸಾಥ್‍ನಿಂದ ತಂಡ ಮತ್ತಷ್ಟು ಬಲವಾಗಿದ್ದು, ಪಂಜಾಬ್ ವಿರುದ್ಧ ಪಂದ್ಯದಲ್ಲಿ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಮೂಲಕ ತನ್ನ ಗೆಲುವಿನ ನಾಗಲೋಟವನ್ನು ಮುಂದುವರೆಸುವ ತವಕದಲ್ಲಿದೆ.

ಇತ್ತ ಪಂಜಾಬ್ ಆರ್‍ಸಿಬಿ ವಿರುದ್ಧ ಗೆಲುವನ್ನು ಸಾಧಿಸಿದ್ದು ಬಿಟ್ಟರೇ ಸತತ ಸೋಲಿನಿಂದ ಈಗಾಗಲೇ ಕಂಗೆಟ್ಟಿದ್ದು, ಗೆಲುವಿಗಾಗಿ ಸತತ ಹೋರಾಟವನ್ನು ನಡೆಸುತ್ತಲೇ ಇದೆ. ಇನ್ನು ನಾಳಿನ ಪಂದ್ಯ ಪಂಜಾಬ್ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ನಾಳಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್ ಜೀವಂತವಾಗಿ ಇರಿಸಿಕೊಳ್ಳುವ ತವಕದಲ್ಲಿದೆ. ಇನ್ನು ಪಂಜಾಬ್ ತಂಡಕ್ಕೆ ಈ ಪಂದ್ಯದಲ್ಲಿ ಯೂನಿವರ್ಸಲ್ ಬಾಸ್ ಕ್ರಿಸ್‍ಗೇಲ್ ಎಂಟ್ರಿ ಆಗುವ ಮೂಲಕ ತಂಡಕ್ಕೆ ಬಲಪಡಿಸೋದಂತು ಗ್ಯಾರಂಟಿ.

ಗುರುವಾರ ಶಾರ್ಜಾದಲ್ಲಿ ನಡೆಯಲಿರೋ ಪಂದ್ಯದಲ್ಲಿ ಆರ್‍ಸಿಬಿ ಕಳೆದ ಪಂದ್ಯದ ಟೀಂ ಅನ್ನೇ ಮುಂದುವರೆಸುತ್ತಿದ್ರೆ,ಇತ್ತ ಪಂಜಾಬ್ ಕ್ರಿಸ್‍ಗೇಲ್ ಎಂಟ್ರಿ ಜೊತೆಯಲ್ಲಿ ತಂಡದಲ್ಲಿ ಕೆಲವು ಬದಲಾವಣೆಯೊಂದಿಗೆ ಆರ್‍ಸಿಬಿ ತಂಡವನ್ನು ಎದುರಿಸಲಿದೆ. ಒಟ್ಟಿನಲ್ಲಿ ಆರಂಭಿಕ ಪಂದ್ಯದಲ್ಲಿ ಸೋಲನುಭವಿಸಿದ ಆರ್‍ಸಿಬಿ ಶಾರ್ಜಾದಲ್ಲಿ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ರೆ, ಇತ್ತ ಪ್ಲೇ ಆಫ್ ಜೀವಂತವಾಗಿರಿಸಿಕೊಳ್ಳುವ ಸಲುವಾಗಿ ನಾಳಿನ ಪಂದ್ಯ ಪಂಜಾಬ್‍ಗೆ ಮಾಡು ಇಲ್ಲವೇ ಮಡಿಯಂತಾಗಿದೆ.

ನಿಮ್ಮ ಪ್ರಕಾರ ಆರ್‍ಸಿಬಿ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಯಾವ ತಂಡ ಗೆಲುವನ್ನು ಸಾಧಿಸಲಿದೆ. ನಿಮ್ಮ ಪ್ರಕಾರ ಯಾವುದು ಫೇವರಿಟ್ ತಂಡ, ನಾಳಿನ ಪಂದ್ಯದಲ್ಲಿ ಕ್ರಿಸ್‍ಗೇಲ್ ಕಮಾಲ್ ಮಾಡಲಿದ್ದಾರಾ..ಆರ್‍ಸಿಬಿ ಮತ್ತು ಪಂಜಾಬ್ ತಂಡದ 11 ಆಟಗಾರರ ಪಟ್ಟಿಯಲ್ಲಿ ಯಾರು ಸ್ಥಾನ ಪಡೆದುಕೊಳ್ಳಲಿದ್ದಾರೆ ಕಾಮೆಂಟ್ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top