RCBಗೆ ಮಾಡು ಇಲ್ಲವೇ ಮಡಿ ಪಂದ್ಯ, ಇವತ್ತು ಟೀಂನಲ್ಲಿ ಯಾರೆಲ್ಲಾ ಇರಬೇಕು

ಐಪಿಎಲ್‌ ಇದೀಗ ಕೊನೆ ಹಂತಕ್ಕೆ ತಲುಪಿದ್ದು, ಮುಂಬೈ ಹೊರತು ಪಡಿಸಿ ಇನ್ಯಾವ ತಂಡಗಳು ಸಹ ಪ್ಲೇ ಆಫ್‌ ಎಂಟ್ರಿಯನ್ನು ಅಧಿಕೃತ ಪಡಿಸಿಕೊಂಡಿಲ್ಲ, ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ತಂಡಗಳು ಸೆಣೆಸಾಡಲಿದ್ದು, ಇಂದಿನ ಪಂದ್ಯ ಎರಡು ತಂಡಗಳಿಗೂ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಎರಡು ತಂಡಗಳು ಅಂಕಪಟ್ಟಿಯಲ್ಲಿ 14ಅಂಕಗಳೊಂದಿಗೆ ಇದ್ದು ರನ್‌ರೇಟ್‌ನಲ್ಲಿ ಆರ್‌ಸಿಬಿ ಕೊಂಚ ಮೇಲಿದ್ದರು ಇಂದಿನ ಪಂದ್ಯ ಗೆಲ್ಲಲೇ ಬೇಕಾಗಿದೆ, ಈಗಾಗಲೇ ಕೊನೆಯ ಹಂತದಲ್ಲಿ ಆರ್‌ಸಿಬಿ ಸತತ ಮೂರು ಸೋಲುಗಳನ್ನು ಕಂಡಿದ್ದರೆ, ಇತ್ತ ಡೆಲ್ಲಿ ಸತತ ನಾಲ್ಕು ಸೋಲುಗಳನ್ನು ಕಾಣುವ ಮೂಲಕ ಆತಂಕದಲ್ಲಿದೆ.

ಇಂದಿನ ಪಂದ್ಯ ಈ ಎರಡು ತಂಡಗಳಿಗೂ ಪ್ರಮುಖವಾಗಿದ್ದು, ಯಾರು ಗೆಲ್ಲುತ್ತಾರೋ ಅವರು ನೇರವಾಗಿ ಪ್ಲೇ ಆಫ್‌ ಹಂತಕ್ಕೆ ತಲುಪಿದ್ರೆ, ಉಳಿದ ತಂಡ ನಾಳೆ ನಡೆಯಲಿರೋ ಮುಂಬೈ ಮತ್ತು ಹೈದರಬಾದ್‌ ತಂಡದ ನಡುವಿನ ಪಂದ್ಯದ ಮೇಲೆ ನಿಂತಿರುತ್ತದೆ. ಹೌದು ಇಲ್ಲಿ ಮುಂಬೈ ವಿರುದ್ಧ ಹೈದರಬಾದ್‌ ಗೆಲುವನ್ನು ಸಾಧಿಸಿದ್ದೇ ಆದಲ್ಲಿ ಡೆಲ್ಲಿ ಮತ್ತು ಆರ್‌ಸಿಬಿ ಪಂದ್ಯದಲ್ಲಿ ಸೋಲುಕಂಡ ತಂಡಕ್ಕೆ ರನ್‌ರೇಟ್‌ ನಿರ್ಣಾಯಕವಾಗುತ್ತದೆ.

ಇನ್ನು ಮುಂಬೈ ವಿರುದ್ಧ ಹೈದರಬಾದ್‌ ಗೆದ್ದರೆ ಇಂದಿನ ಪಂದ್ಯದಲ್ಲಿ ಸೋತ ತಂಡವೂ, ಕೋಲ್ಕತ್ತಾ ಮತ್ತು ಹೈದರಾಬಾದ್‌ ತಂಡದ ಜೊತೆ ಪಾಯಿಂಟ್‌ ಸಮನಾಗಿಸಿಕೊಳ್ಳಲಿದೆ. ಇನ್ನು ಈಗಾಗಲೇ ಕೆಕೆಆರ್‌ ತಂಡದ ಪಂದ್ಯಗಳು ಮುಗಿದ್ದಿದ್ದು ನೆಟ್‌ರನ್‌ರೇಟ್‌ನಲ್ಲಿ -0.244 ಇರುವುದರಿಂದ ಇದರಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಇನ್ನು ಹೈದರಬಾದ್‌ ಮುಂಬೈರ ವಿರುದ್ಧ ಉತ್ತಮ ರನ್‌ರೇಟ್‌ನೊಂದಿಗೆ ಪ್ಲೇ ಆಫ್‌ ಹಂತಕ್ಕೆ ತಲುಪುವ ಅವಕಾಶ ಇರುವುದರಿಂದಾಗಿ, ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸೋ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಗಳಿಸೋ ಮೂಲಕ ಪ್ಲೇ ಆಫ್‌ ಹಂತಕ್ಕೆ ತಲುಪಬೇಕಾಗಿದೆ. ಹೀಗಾಗಿ ಅಂತಿಮ ಎರಡು ಪಂದ್ಯಗಳು ನಾಲ್ಕು ತಂಡಗಳಿಗೆ ಪ್ರಮುಖವಾದದ್ದಾಗಿದೆ.

ನಿಮ್ಮ ಪ್ರಕಾರ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಡೆಲ್ಲಿ ವಿರುದ್ಧ ಗೆದ್ದು ಬೀಗಲಿದ್ಯಾ, ಆ ಮೂಲಕ ಪ್ಲೇ ಆಫ್‌ ಹಂತಕ್ಕೆ ತಲುಲಿದ್ಯಾ, ಇಂದಿನ ಪಂದ್ಯದಲ್ಲಿ 11ರ ಬಳಗದಲ್ಲಿ ಯಾರೆಲ್ಲಾ ಸ್ಥಾನ ಪಡೆದುಕೊಳ್ಳ ಬೇಕು ಕಾಮೆಂಟ್‌ ಮಾಡಿ ತಿಳಿಸಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top