
ಸ್ಯಾಂಡಲ್ವುಡ್ಗೆ ಮತ್ತೆ ಹ್ಯಾಡ್ಸಂ ಡ್ಯಾಡಿ ಎಂಟ್ರಿ ಕೊಟ್ಟಿದ್ದಾರೆ.. ಹೌದು ಇವ್ರು ಸಿನಿಮಾದಲ್ಲಿ ಇದ್ದಾರೆ ಅಂದ್ರೆ ಆ ಸಿನಿಮಾದ ಲುಕ್ಕೆ ಚೇಂಜ್ ಆಗಿ ಹೋಗುತ್ತೆ. ಆ ಸಿನಿಮಾದಲ್ಲಿ ಎನರ್ಜಿ ಜಾಸ್ತಿ ಆಗುತ್ತದೆ, ಹೌದು ಇವ್ರು ಮತ್ಯಾರು ಅಲ್ಲಾ..ಹ್ಯಾಡ್ಸಂ ಡ್ಯಾಡಿ ಅಂತಾನೇ ಬಿರುದು ಪಡೆದಿರೋ ಶರತ್ ಕುಮಾರ್, ಈಗಾಗ್ಲೇ ಕನ್ನಡದಲ್ಲಿ ದರ್ಶನ್ ಮತ್ತು ಪುನೀತ್ ರಾಜ್ ಕುಮಾರ್ ಗೆ ಸಾರಥಿ ಮತ್ತು ರಾಜಕುಮಾರ ಮತ್ತು ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಡ್ಯಾಡಿಯಾಗಿ ನಟಿಸಿದ್ದ ಶರತ್ ಕುಮಾರ್ ಈಗ ಪವನ್ ಒಡೆಯರ್ ನಿರ್ದೇಶನದ ರೇಮೊ ಚಿತ್ರದಲ್ಲಿ ಮತ್ತೆ ಹ್ಯಾಡ್ಸಂ ಡ್ಯಾಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಪವನ್ ಒಡೆಯರ್ ನಿರ್ದೇಶನದಲ್ಲಿ ಬರ್ತಾ ಇರೋ ರೇಮೊ ಚಿತ್ರಕ್ಕೆ ಇಶಾನ್ ನಾಯಕನಾಗಿದ್ದು, ಶರತ್ ಶ್ರೀ ದೇಶಪಾಂಡೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗ್ಲೇ ಶೂಟಿಂಗ್ ಸ್ಟಾರ್ಟ್ ಆಗಿದ್ದು ಸೆಟ್ ಗೆ ಎಂಟ್ರಿ ಕೊಟ್ಟಿರೋ ಶರತ್ ಕುಮಾರ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್ ನಲ್ಲಿ ಶ್ರೀಮಂತ ಬ್ಯುಸಿನೆಸ್ ಮ್ಯಾನ್ ಗೆಟಪ್ ನಲ್ಲಿ ಮಿಂಚಲಿದ್ದಾರೆ.

ಶರತ್ ಕುಮಾರ್ ಇಶಾನ್ ಅಪ್ಪ ಮಗ ಕಾಂಬಿನೇಶನ್ ನ ಒಂದಷ್ಟು ದೃಶ್ಯಗಳನ್ನ ನಿರ್ದೇಶಕ ಪವನ್ ಒಡೆಯರ್ ಸಖತ್ ಕಲರ್ ಫುಲ್ಲಾಗಿ ಚಿತ್ರಿಸಿದ್ದಾರೆ. ಅದ್ರ ಎಕ್ಸ್ ಕ್ಲ್ಯೂಸೀವ್ ಮೇಕಿಂಗ್ ಸ್ಟಿಲ್ಸ್ ಮತ್ತು ಅವ್ರ ಫೋಸ್ಟರ್ ನ ರಿಲೀಸ್ ಮಾಡೋ ಮೂಲಕ ಚಿತ್ರತಂಡ ಶರತ್ ಕುಮಾರ್ ಅವ್ರಿಗೆ ಆತ್ಮೀಯವಾಗಿ ಸ್ವಾಗತಿಸಿದೆ.

ಪವನ್ ಒಡೆಯರ್ ನಿರ್ದೇಶನದ ಈ ಚಿತ್ರವನ್ನ ಜೈಯಾದಿತ್ಯ ಫಿಲಂಸ್ ಬ್ಯಾನರ್ ನಲ್ಲಿ ಅದ್ಧೂರಿ ಚಿತ್ರಗಳ ಸರದಾರ ಸಿ.ಆರ್ ಮನೋಹರ್ ಮತ್ತು ಸಿ.ಆರ್ ಗೋಪಿ ದುಬಾರಿ ನಿರ್ಮಾಣದಲ್ಲಿ ತಯಾರಾಗ್ತಿದೆ. ರೋಗ್ ಖ್ಯಾತಿಯ ಇಶಾನ್ ಗೆ ಅಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ, ವೈದಿ ಛಾಯಾಗ್ರಹಣ ಚಿತ್ರಕ್ಕಿದೆ. ಲವ್ ಸಿನಿಮಾಗಳನ್ನ ಪ್ರಸೆಂಟ್ ಮಾಡೋದ್ರಲ್ಲಿ ನಿಪುಣರೆನ್ನಿಸಿಕೊಂಡಿರೋ ಪವನ್ ಒಡೆಯರ್ ರೇಮೊ ಚಿತ್ರವನ್ನ ಟ್ರೆಂಡಿಯಾಗಿ ಪ್ರಸೆಂಟ್ ಮಾಡಲು ಹೊರಟಿದ್ದು,

ಸಿನಿಮಾವನ್ನ ಎಲ್ಲಾ ಆಂಗಲ್ನಿಂದ್ಲೂ ರಿಚ್ ಆಗಿ ಕಟ್ಟಿಕೊಡೋ ಪ್ರಯತ್ನ ಮಾಡ್ತಿದ್ದಾರೆ. ಸದ್ಯ ಶರತ್ ಕುಮಾರ್ ಅವ್ರು ಟೀಮ್ ಗೆ ಸೇರಿಕೊಂಡಿದ್ದರ ಖುಷಿಯನ್ನ ಹಂಚಿಕೊಂಡಿರೋ ಚಿತ್ರತಂಡ ಇಷ್ಟರಲ್ಲೇ ಚಿತ್ರದ ಮತ್ತೊಂದು ವಿಶೇಷ ವಿಚಾರವನ್ನ ಹಂಚಿಕೊಳ್ಳಲು ತಯಾರಿ ನಡೆಸಿದೆ.
