ಬಿಗ್‍ಬಾಸ್‍ ಮನೆಯಿಂದ ಹೊರ ಬಂದ್ರ ರವಿಬೆಳಗೆರೆ..!

ravi belegare bigg boss

ಬಿಗ್‍ಬಾಸ್‍ ಶುರುವಾಗಿ ಇನ್ನು 24 ಗಂಟೆಯಾಗಿಲ್ಲ ಆಗಲೇ ಬಿಗ್ ಶಾಕ್ ಈಗ ಬಿಗ್‍ಬಾಸ್‍ಗೆ ಒಂದೊದಗಿದೆ…ಬಿಗ್‍ಬಾಸ್‍ಗೆ ಎಂಟ್ರಿಕೊಟ್ಟಿದ್ದ ಮೂರನೇ ಸ್ಪರ್ಧಿ ರವಿಬೆಳಗೆರೆ ಬಿಗ್‍ಬಾಸ್‍ ಅನುಮತಿ ಪಡೆದು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇದೆ.. ನಿನ್ನೆ ಬಿಗ್‍ಬಾಸ್‍ ಶುರುವಿನಲ್ಲಿ ಕಾಣಿಸಿಕೊಂಡಿದ್ದ ರವಿಬೆಳಗೆರೆ ನಂತರದ ಸಮಯದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.. ಮಾಹಿತಿಯ ಪ್ರಕಾರ ರವಿಬೆಳಗೆರೆಯವರಿಗೆ ಲೋ ಬೀಪಿ ಇದ್ದುದ್ದರಿಂದ ಕುಸಿದು ಬಿದ್ದರು ಆದ್ರೆ ದೊಡ್ಡ ಸಮಸ್ಯೆಯೇನಲ್ಲ ಹಾಗಾಗಿ ಅವರನ್ನು ಬಿಗ್‍ಬಾಸ್‍ ಅನುಮತಿ ಮೇರೆಗೆ ಹೊರಗೆ ಕರೆದುಕೊಂಡು ಬರಲಾಗಿದೆ ಎಂದು ರವಿಬೆಳಗೆರೆ ಮಗಳು ಭಾವನಾ ಬೆಳಗೆರೆ ಹೇಳಿಕೊಂಡಿದ್ದಾರಂತೆ..ಇನ್ನು ಈ ಬಗ್ಗೆ ಕಲರ್ಸ್ ಕನ್ನಡದ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಎಲ್ಲಾ ತಿಳಿಯಬೇಕಾದರೆ ಇವತ್ತಿನ ಎಪಿಸೋಡ್ ಬಂದ ನಂತರವೇ ಹೊರ ಬರಲಿದೆ. ಬಿಗ್‍ಬಾಸ್‍ನಿಂದ ಮೊದಲ ದಿನವೇ ನಾಮಿನೇಟ್‌ ಆದ್ರ ಕುರಿ ಪ್ರತಾಪ್‌.?

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top