ಪ್ರೇಕ್ಷಕರ ಮೋಡಿ ಮಾಡ್ತಿದೆ ‘ರತ್ನಮಂಜರಿ’..!

ratnamanjari running successfully

ಒಂದು ನಿಗೂಢ ಸಾವನ್ನು ಬೆನ್ನತ್ತಿ ಹೋಗುವ ಸಸ್ಪೆನ್ಸ್, ಥ್ರಿಲ್ಲರ್, ಕುತೂಹಲ ಕೆರಳಿಸೋ ಹೊಸಬರ ರತ್ನಮಂಜರಿ ಪ್ರೇಕ್ಷಕರನ್ನು ರಂಜಿಸುವಲ್ಲಿ‌ ಯಶಸ್ವಿಯಾಗಿದೆ. ಬಿಡುಗಡೆಯಾದ ಎಲ್ಲಾ ಸೆಂಟರ್ ಗಳಲ್ಲೂ ಒಳ್ಳೆಯ ರೆಸ್ಪಾನ್ಸ್ ಪಡೆದು ಮುನ್ನುಗ್ಗುತ್ತಿರೋ ರತ್ನಮಂಜರಿ ಪ್ರೇಕ್ಷಕನನ್ನ ಪದೇ ಪದೇ ಚಿತ್ರಮಂದಿರದ ಕಡೆಗೆ ಸೆಳೆಯುತ್ತಿದೆ. ಯುವ ನಿರ್ದೇಶಕ ಪ್ರಸಿದ್ಧ್ ನಿರ್ದೇಶನದಲ್ಲಿ ಭರವಸೆ ಮೂಡಿಸಿದ್ದು, ಪ್ರತಿ ಬಾರಿಯೂ ಬರುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳಿಗಿಂತ ವಿಭಿನ್ನವಾದ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ತೆರೆಕಂಡ ಎಲ್ಲಾ ಚಿತ್ರಮಂದಿರದಲ್ಲೂ ಹೌಸ್ ಫುಲ್ ಪ್ರದರ್ಶನ ಕಾಣಿತ್ತಿದೆ, ಚಿತ್ರದ ಸಸ್ಪೆನ್ಸ್ ನ್ನು ಕೊನೆಯವರೆಗೂ ಕಾಯ್ದುಕೊಂಡು ಹೋದಂತಹ ರೀತಿ ಪ್ರತಿಯೊಬ್ಬ ವೀಕ್ಷಕನಿಗೂ ಇಷ್ಟ ಆಗುವಂತಹ ಅಂಶ.

ratnamanjari running successfully


ಬುಕ್ ಮೈ ಶೋ ನಲ್ಲಿ ಕೂಡ ಚಿತ್ರಕ್ಕೆ 85% ಗೂ ಅಧಿಕ ರೇಟಿಂಗ್ ಸಿಕ್ಕಿದೆ. ಹೊಸ ಪ್ರತಿಭೆಗಳಾದ ರಾಜ್ ಚರಣ್ ಮತ್ತು ಅಖಿಲಾ ಪ್ರಕಾಶ್ ತಮ್ಮ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಚಿತ್ರಕ್ಕೆ ಬಂಡವಾಳ ಹೂಡಿದ ಶರಾವತಿ ಫಿಲ್ಮ್ಸ್ ಹಾಗೂ ಎಸ್.ಎನ್.ಎಸ್ ಸಿನಿಮಾಸ್ ಯು.ಎಸ್.ಎ ಬ್ಯಾನರ್ ನಡಿಯಲ್ಲಿ ಹಾಗೂ ಎಸ್.ಸಂದೀಪ್ ಕುಮಾರ್ ಹಾಗೂ ನಟರಾಜ್ ಹಳೇಬೀಡು ಯು.ಎಸ್.ಎ. ಅವರಿಗೆ ಜೇಬು ತುಂಬಿಸಿದೆ. ಒಟ್ಟಿನಲ್ಲಿ ಒಂದೊಳ್ಳೇ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸ್ಯಾಂಡಲ್ವುಡ್ ಗೆ ದೊರೆತಿದ್ದು ಮಿಸ್ ಮಾಡ್ದೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ.
Read : ನಿನ್ನೆ ಬಳ್ಳಾರಿಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ಭಯಾನಕ ದೃಶ್ಯ!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top