ಅಕ್ರಮ ರೇಷನ್ ಕಾರ್ಡ್ ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗ್ಯಾರಂಟಿ..!

ನೀವೇನಾದ್ರೂ ಅಕ್ರಮ‌ ರೇಷನ್ ಕಾರ್ಡ್ ಹೊಂದಿದ್ದರೆ ನಿಮ್ಮ ಮೇಲೆ ಪಕ್ಕಾ ಕ್ರಿಮಿನಲ್ ಕೇಸ್ ಬೀಳೋದು ಗ್ಯಾರಂಟಿ. ಪಡಿತರ ಮೇಲಿನ ವೆಚ್ಚವನ್ನು ಮತ್ತು ಆಹಾರ ಭದ್ರತಾ ಕಾಯ್ದೆ ನಿಯಮವನ್ನು ಪಾಲಿಸಲು ಪಡಿತರ ಚೀಟಿ ಸಂಖ್ಯೆಯನ್ನು ಕಡಿಮೆ ಮಾಡಲು, ಅಕ್ರಮ ಪಡಿತರ ಚೀಟಿ ಹೊಂದಿದವರ ಮೇಲೆ ಭಾರೀ ದಂಡ ಅಥವಾ ಕ್ರಿಮಿನಲ್ ಕೇಸ್ ದಾಖಲು ಮಾಡಲು ಆಹಾರ ಮತ್ತು ನಾಗರಿಕ‌ ಸರಬರಾಜು ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದೆ, ಇನ್ನು ಪಡಿತರ ಚೀಟಿಗೆ ಆಧಾರ್ ಮತ್ತು ಫೋನ್ ನಂಬರ್ ಲಿಂಕ್ ಮಾಡಿದ ಸಂಧರ್ಭದಲ್ಲಿ ಹಲವು ಪಡಿತರ ಚೀಟಿಗಳು ರದ್ದಾಗಿವೆ. ಅದರ ಪರಿಣಾಮವಾಗಿ ಪ್ರತಿ ತಿಂಗಳು ಶೇ 9ರಷ್ಟು ಪಡಿತರ ಉಳಿತಾಯವಾಗುತ್ತಿದೆ. 2011ರ ಜನಗಣತಿಯ ಪ್ರಕಾರ ಮನೆಗಳ ಸಂಖ್ಯೆಗಿಂತ ಹೆಚ್ಚಾಗಿ ಪಡಿತರ ಚೀಟಿ ಸಂಖ್ಯೆ ಹೆಚ್ಚಾಗಿದ್ದು ಈ ಕಾರಣಕ್ಕಾಗಿ ಮನೆಗಿಂತ ಹೆಚ್ಚಾಗಿ ಇರುವ ಕಾರ್ಡ್ ಗಳನ್ನು ರದ್ದುಮಾಡಲು ಮುಂದಾಗಿದೆ, ಇನ್ನು ಇದಕ್ಕೆ ಆಗಸ್ಟ್ 31ರ ವರೆಗೂ ಕಡೆದಿನ ಕೊಟ್ಟಿದ್ದು ಕೆಲವು ತಾಲೂಕುಗಳಲ್ಲಿ ಈಗಾಗಲೇ ಈ ಕಾರ್ಯ ಆರಂಭವಾಗಿದೆ.

ಕಾರ್ಡ್ ರದ್ದತಿಗೆ ಆಧಾರ್ ಮತ್ತು ಫೋನ್ ನಂಬರ್ ಲಿಂಕ್ ಮಾಡುವುದನ್ನು ಮಾನದಂಡವನ್ನಾಗಿ ಮಾಡಲಾಗಿದೆ. ಅಕ್ರಮವಾಗಿ ಸರ್ಕಾರಿ,ಅರೆಸರ್ಕಾರಿ ನೌಕರರು, ಅನುದಾನಿತ ಸಂಸ್ಥೆಗಳ ನೌಕರರು, ತೆರಿಗೆ ಪಾವತಿಸುವವರು, 3 ಹೆಕ್ಟೇರ್ ಕೃಷಿ ಭೂಮಿ ಹೊಂದಿದವರು,1000 ಚದರ ಅಡಿಯ ಪಕ್ಕಾ ಮನೆ ಹೊಂದಿದವರು, ಜೀವನೋಪಾಯಕ್ಕೆ ಬಿಟ್ಟು ಟ್ರಾಕ್ಟರ್, ಕಾರು ಉಳ್ಳವರು, ವಾರ್ಷಿಕವಾಗಿ 1.20 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ಹೊಂದಿದವರು ರೇಷನ್ ಕಾರ್ಡ್ ಪಡೆದಿದ್ದರೆ ಅದು ಅಕ್ರಮ ಅಂತಹವರನ್ನು ಹುಡುಕಲಾಗುತ್ತಿದೆ.

ಈಗಾಗಲೇ ಕೆಲವು ಜಿಲ್ಲೆಗಳಲ್ಲಿ 1000-2000 ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರನ್ನು ಗುರುತಿಸಿ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ. ಆದಾಯ ಮತ್ತು ತೆರಿಗೆ ಪಾವತಿ ಆಧಾರದ ಮೇಲೆ ಅಕ್ರಮ ಪಡಿತರವನ್ನು ಪತ್ತೆ ಹಚ್ಚಲಾಗುತ್ತದೆ, ಈ ಕಾರಣಕ್ಕಾಗಿ ಕೇಂದ್ರ ಮತ್ತು ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಮಾಹಿತಿ ಪಡೆಯಲಾಗಿತ್ತಿದೆ, ಒಟ್ಟಿನಲ್ಲಿ ಅಕ್ರಮ ಪಡಿತರ ಚೀಟಿಗಳ ಕಡಿವಾಣ ಹಾಕಲು ದಿಟ್ಟ ನಿರ್ಧಾರವನ್ನು‌ ಇಲಾಖೆ ತೆಗೆದುಕೊಂಡಿದ್ದು ಶಿಕ್ಷೆ ಅನುಭವಿಸುವ ಮೊದಲೇ ನಿಮ್ಮ ಬಳಿ ಇರುವ ಅಕ್ರಮ ಪಡಿತರ‌ ಕಾರ್ಡ್ ಅನ್ನು ರದ್ದುಪಡಿಸಿಕೊಳ್ಳಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top