ಟ್ರೋಲಿಗರಿಗೆ ಟವೆಲ್ ಸುತ್ತಿಕೊಂಡು ಹೊಡೆದ ರಶ್ಮಿಕಾ ಮಂದಣ್ಣ..!

ಬ್ಯೂಟಿ ಕ್ಯೂಟಿ ರಶ್ಮಿಕಾ ಮಂದಣ್ಣ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗ್ತಾನೆ ಇರ್ತಾರೆ.. ಇತ್ತಿಚೆಗೆ ಅವರದೇ ನಟನೆಯ ಸಿನಿಮಾ ಪೊಗರು ಚಿತ್ರದ ಡೈಲಾಗ್ ಟ್ರೈಲರ್ ರಿಲೀಸ್ ಆಗಿದ್ದು ಸದ್ಯ ಸಖತ್ ಸೌಂಡ್ ಮಾಡ್ತಾ ಇದೆ. ಇನ್ನು ಅದರಲ್ಲಿ ರಶ್ಮಿಕಾ ಇಂಗ್ಲೀಷ್ ಡೈಲಾಗ್ ಗೆ ಧ್ರುವಾ ಸರ್ಜಾ ‘ಮಾತೃಭಾಷೆ ಬಿಟ್ಟವರು ಮೂರುಬಿಟ್ಟವರಿಗಿಂತ ದೊಡ್ಡವರು’ ಅನ್ನೋ ಡೈಲಾಗ್ ಟ್ರೆಂಡ್ ಆಗಿದ್ದು ಈ ಡೈಲಾಗ್ ರಶ್ಮಿಕಾಗೆ ಹೇಳಿಮಾಡಿಸಿದ ರೀತಿ ಇದೆ ಎಂದು ಟ್ರೋಲ್ ಕೂಡ ಮಾಡಿ ರಶ್ಮಿಕಾ ಅವರನ್ನು ಕಾಲೆಳೆದಿದ್ರು, ಆದ್ರೆ ಈಗ ರಶ್ಮಿಕಾ ಖಡಕ್ ಆಗಿ ಉತ್ತರ ನೀಡಿದ್ದಾರೆ.

‘ಈ ಡೈಲಾಗ್ ಅನ್ನು ಯಾಕೆ ಹೇಳಿಸಿದ್ದಾರೆ ಎಂದು ನಾವು ಈಗ ಚರ್ಚೆ ಮಾಡುತ್ತಿದ್ದೇವೆ. ಅನೇಕರು ರಶ್ಮಿಕಾ ಮಂದಣ್ಣನ ಬಗ್ಗೆ ಒಳ್ಳೆಯದು ಅಥವಾ ಕೆಟ್ಟದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ರಶ್ಮಿಕಾ ಗೆದ್ದಿದ್ದಾಳೆ ಎಂದು ಅರ್ಥ. ನನ್ನ ಬಗ್ಗೆ ಯೋಚಿಸಲು ನಿಮ್ಮ ಸಮಯವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು” ಎಂದು ಟ್ವೀಟ್ ಮಾಡುವ ಮೂಲಕ ತನ್ನ ಬಗ್ಗೆ ಕಾಲೆಳೆದು ಮಾತನಾಡುತ್ತಿದ್ದವರಿಗೆ ರೊಚ್ಚಿಗೆದ್ದು ಉತ್ತರ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top