ರಶ್ಮಿಕಾ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದ ರಶ್ಮಿಕಾ ತಂದೆ..!

rashmika mandanna father

ಸ್ಯಾಂಡಲ್‌ವುಡ್‌ ಕ್ರಶ್‌ ಸದ್ಯ ಸೌತ್‌ ಇಂಡಿಯನ್‌ ಸಿನಿಮಾದಲ್ಲಿ ಟಾಪ್‌ ನಟಿ, ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಾ ಇರೋ ರಶ್ಮಿಕಾ ಮಂದಣ್ಣ ಮೇಲೆ ಈಗ ಸ್ವತಃ ತಂದೆಯೇ ಬೇಸರ ವ್ಯಕ್ತಪಡಿಸಿದ್ದಾರೆ.

ಹೌದು ಕನ್ನಡ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿರೋ ರಶ್ಮಿಕಾ ಒಂದು ದಿನ ಕರ್ನಾಟಕದಲ್ಲಿ ಇದ್ದರೆ, ಇನ್ನೊಂದು ದಿನ ಚೆನ್ನೈ, ಮರುದಿನ ಹೈದರಬಾದ್‌ ಹೀಗೆ ದಿನಕ್ಕೊಂದು ರಾಜ್ಯದಲ್ಲಿ ಇರೋದ್ರಿಂದ ತನ್ನ ಕುಟುಂಬಕ್ಕೆ ರಶ್ಮಿಕಾ ಟೈಂ ಕೊಡಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ʻಮನೆಯ ಕಡೆಯೂ ಗಮನ ಕೊಡು ಮಗಳೇʼ ಎಂದು ತಂದೆ ಬೇಸರ ವ್ಯಕ್ತಪಡಿಸಿದ್ದು. ʻನಮ್ಮ ಮನೆಗೆ ನೀನೇ ಹಿರಿಯ ಮಗಳು, ಹೀಗಾಗಿ ಸ್ವಲ್ಪ ಮನೆಯ ಕಡೆಗೂ ಗಮನ ಕೊಡು ಮಗಳೇʼ ಎಂದು ತಂದೆ ಕೇಳಿಕೊಂಡಿದ್ದಾರೆ.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರೋ ರಶ್ಮಿಕಾ ಅವರ ತಾಯಿ ʻನಾನು ಯಾವಾಗಲೂ ರಶ್ಮಿಕಾ ಜೊತೆಯಲ್ಲಿಯೇ ಇರುತ್ತೇನೆ, ಹಾಗಾಗಿ ಆ ಫೀಲ್‌ ನನಗೆ ಅನಿಸುತ್ತಿಲ್ಲ, ಆದರೆ ಅವರ ತಂದೆ ಅವಳನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಾರೆ. ರಶ್ಮಿಕಾ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಾ ಇದ್ದಾಳೆ. ಮುಂದಿನ ವರ್ಷ ಎಲ್ಲಾ ಸಿನಿಮಾಗಳು ರಿಲೀಸ್‌ ಆಗಲಿವೆ, ಅವಳಿಗೆ ಮುಂದಿನ ವರ್ಷ ಅವಳಿಗೆ ತುಂಬಾ ಮುಖ್ಯ. ದೇವರ ಆಶೀರ್ವಾದದಿಂದ ಅವಳಿಗೆ ಉತ್ತಮ ಅವಕಾಶಗಳು ಸಿಗುತ್ತಿವೆ ಎಂದು ಖುಷಿಯನ್ನು ಸಹ ವ್ಯಕ್ತಪಡಿಸಿದರು.

ಇನ್ನು ರಶ್ಮಿಕಾ ಸದ್ಯ ಕನ್ನಡದಲ್ಲಿ ಪೊಗರು ಸಿನಿಮಾದಲ್ಲಿ ನಟಿಸ್ತಾ ಇದ್ದು, ತೆಲುಗಿನಲ್ಲಿ ಮಹೇಶ್‌ ಬಾಬು ಮತ್ತು ಅಲ್ಲು ಅರ್ಜುನ್‌ ಸಿನಿಮಾದಲ್ಲಿ ನಟಿಸ್ತಾ ಇದ್ದಾರೆ. ತಮಿಳಿನಲ್ಲಿ ಕಾರ್ತಿ ಜೊತೆಯಲ್ಲಿ ಸಿನಿಮಾದ ಶೂಟಿಂಗ್‌ನಲ್ಲೂ ಸಹ ರಶ್ಮಿಕಾ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top