ರಶ್ಮಿಕಾ ಜೊತೆ ತೆಲುಗಿಗೆ ಹಾರಿದ ಧ್ರುವಾ ಸರ್ಜಾ..!

dhruva sarja telugu movie

ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಸದ್ಯ ಪೊಗರು ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ, ಬ್ಯಾಕ್ ಟು ಬ್ಯಾಕ್ ಮೂರು‌ ಹಿಟ್ ಸಿನಿಮಾಗಳನ್ನು ನೀಡಿರೋ ಧ್ರುವಾ ಸರ್ಜಾ ಎರಡು ವರ್ಷಗಳಾದ್ರು ಅಭಿಮಾನಿಗಳಿಗೆ ಯಾವುದೇ ಸಿನಿಮಾ ನೀಡಿಲ್ಲ, ಪೊಗರು ಸಿನಿಮಾಗಾಗಿ ಭರ್ಜರಿ ತಯಾರಿ ಮಾಡಿ ಬ್ಯುಸಿಯಾಗಿರೋ ಧ್ರುವಾ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಥ್ರಿಲ್ ಕೊಡಲು‌ ರೆಡಿಯಾಗ್ತಿದ್ದಾರೆ, ಇನ್ನು ಅಭಿಮಾನಿಗಳು ಸಹ‌ ತಮ್ಮ ಬಾಸ್ ಸಿನಿಮಾಗಾಗಿ ಕಾಯ್ತಾ ಇದ್ರೆ 24ರಂದು ಟ್ರೈಲರ್ ರಿಲೀಸ್ ಮಾಡೋ ಮೂಲಕ ಇನ್ನೊಂದು ಥ್ರಿಲ್ ನೀಡಲಿದ್ದಾರೆ, ಅದರ ಜೊತೆಯಲ್ಲಿಯೇ ಈಗ ಮತ್ತೊಂದು‌ ಸಿಹಿಸುದ್ದಿ ನೀಡಿದ್ದಾರೆ ಧ್ರುವಾ ಸರ್ಜಾ.

pogaru-telugu

ಹೌದು ಧ್ರುವಾ ಈಗ ಟಾಲಿವುಡ್ ನಲ್ಲೂ ಮಿಂಚಲು ರೆಡಿಯಾಗಿದ್ದಾರೆ, ಹೌದು ಪೊಗರು ಸಿನಿಮಾ ಹೇಳಿಕೇಳಿ ಮಾಸ್ ಸಿನಿಮಾ ಹಾಗಾಗಿ‌ ಕನ್ನಡದ ಜೊತೆ ತೆಲುಗಿನಲ್ಲೂ ಪೊಗರು ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ರೆಡಿಮಾಡಿಕೊಳ್ತಾ ಇದೆ, ಇದರೊಂದಿಗೆ ಅಭಿಮಾನಿಗಳಿಗೆ ಹೊಸ ಸುದ್ದಿಯೊಂದನ್ನು ನೀಡಿದ್ದಾರೆ. ಇ‌ನ್ನು ಪೊಗರು ಸಿನಿಮಾದಲ್ಲಿ ಧ್ರುವಾಗೆ ಜೋಡಿಯಾಗಿ‌ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ತಿದ್ದಾರೆ, ಈಗಾಗ್ಲೇ ರಶ್ಮಿಕಾ ತೆಲುಗಿನಲ್ಲಿ ಪೀಕ್ ನಲ್ಲಿ ಇದ್ದು ಇದರ ಅಡ್ವಂಟೇಚ್ ಪಡೆದುಕೊಳ್ಳೋ ಪ್ಲಾನ್ ನಲ್ಲಿದೆ ಚಿತ್ರತಂಡ ಒಟ್ಟಿನಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಭರ್ಜರಿ ಪ್ರದರ್ಶನ ನೀಡಿರೋ ಧ್ರುವಾ ಟಾಲಿವುಡ್ ನಲ್ಲಿ ಯಾವ ರೀತಿ ಪೊಗರು ತೋರಿಸ್ತಾರೆ ಕಾದುನೋಡಬೇಕು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top