ಅಫ್ಘಾನಿಸ್ತಾನ ವಿಶ್ವಕಪ್‌ ಗೆದ್ದ ಬಳಿಕ ಮದುವೆಯಾಗುತ್ತೇನೆ..! ಹೀಗೆ ಹೇಳಿದ್ದು ಯಾರು ಗೊತ್ತಾ..?

ಪ್ರತಿಯೊಬ್ಬರು ಜೀವನದಲ್ಲಿ ಒಂದಿಲ್ಲೊಂದು ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಒಬ್ಬರು ನಾನು ಜೀವನದಲ್ಲಿ ದುಡ್ಡು ಮಾಡಬೇಕು, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನೋ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವ್ರು ಜೀವನದಲ್ಲಿ ಸಂಸಾರ ಮತ್ತು ಸಾಧನೆ ಎರಡನ್ನು ಒಟ್ಟಿಗೆ ಮಾಡಕೊಂಡು ಹೋಗಬೇಕು ಅನ್ನೋ ತೀರ್ಮಾನಕ್ಕೆ ಬಂದಿರುತ್ತಾರೆ.


ಇನ್ನು ಜೀವನದಲ್ಲಿ ಮದುವೆ ವಿಚಾರಕ್ಕೆ ಬಂದ್ರೆ ಒಬ್ಬೊಬ್ಬರದ್ದು ಒನ್ನೊಂದು ಯೋಜನೆಗಳು ಇರ್ತಾವೆ, ಅದರಲ್ಲೂ ಮದುವೆ ವಯಸ್ಸಿಗೆ ಬಂದ ಹುಡುಗ ಹುಡುಗಿಯರಿಗೆ ಹಿರಿಯರು ಕೇಳುವ ಸಾಮಾನ್ಯ ಪ್ರಶ್ನೆ ಅಂದ್ರೆ ಅದು ಮದುವೆ ಯಾವಾಗಾ..? ಇನ್ನು ಈ ಪ್ರಶ್ನೇ ಹಿರಿಯರು ಕೇಳಿದ ಕೂಡಲೇ ಹುಡುಗ ಅಥವಾ ಹುಡುಗಿಯ ಕಡೆಯಿಂದ ಬರುವ ಉತ್ತರಗಳು ಸಹ ಡಿಫರೆಂಟ್‌ ಆಗಿಯೇ ಇರ್ತಾವೆ, ಕೆಲವ್ರು ನಾನಿನ್ನು ಓದಿ ಮುಗಿಸಿಲ್ಲ ಅಂದ್ರೆ, ಇನ್ನು ಕೆಲವ್ರು ಕೆಲಸ ಸಿಕ್ಕಿ ಸ್ವಲ್ಪ ಸೆಟೆಲ್‌ ಆಗ್ತೀನಿ ಆ ನಂತರ ಮದುವೆ ಅನ್ನೋ ಉತ್ತರಗಳನ್ನು ನೀಡ್ತಾರೆ.


ಅದರಲ್ಲೂ ಈ ರೀತಿ ಮದುವೆ ವಿಚಾರವಾಗಿ ಹೆಚ್ಚು ಪ್ರಶ್ನೆಗಳನ್ನು ಎದುರಿಸುವುದು ಸಿನಿಮಾ ಸ್ಟಾರ್‌ಗಳು ಅಥವಾ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಿರೋ ಸೆಲೆಬ್ರಿಟಿಗಳು. ಅದೇ ರೀತಿ ಈ ಸ್ಟಾರ್‌ ಕ್ರಿಕೆಟರ್‌ ಕೂಡ ಸದ್ಯ ಈ ರೀತಿಯ ಪ್ರಶ್ನೆಯನ್ನು ಎದುರಿಸುತ್ತಿದ್ದಾರೆ.

ಹೌದು ಸದ್ಯ ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಸ್ಟೈಲ್‌ನ ಬೌಲಿಂಗ್‌ ಮೂಲಕ ನಂಬರ್‌ ಒನ್‌ ಪಟ್ಟಕ್ಕೆ ಏರಿರೋ ಅಫ್ಘಾನಿಸ್ತಾನದ ಸ್ಪಿನರ್‌ ರಶೀದ್‌ ಖಾನ್‌ ನಿಮ್ಮ ಮದುವೆಯಾವಾಗ ಅನ್ನೋ ಪ್ರಶ್ನೆಯನ್ನು ಎದುರಿಸುತ್ತಿದ್ದಾರಂತೆ. ಹೌದು ಇತ್ತಿಚೆಗೆ ಕೆಲವು ನೇರ ಸಂದರ್ಶನದಲ್ಲಿ ರಶೀದ್‌ ಖಾನ್‌ ಅವರಿಗೆ ಮದುವೆ ವಿಚಾರವಾಗಿ ಹಲವರು ಪ್ರಶ್ನೆಗಳನ್ನು ಕೇಳಿದ್ದಾರೆ ಅದಕ್ಕೆ ರಶೀದ್‌ ಖಾನ್‌ ಕೂಡ ಸಖತ್‌ ಆಗೇ ಉತ್ತರವನ್ನು ನೀಡಿದ್ದಾರೆ.

ಹೌದು ಸದ್ಯ ಅಫ್ಘಾನಿಸ್ತಾನ ಕ್ರಿಕೆಟ್‌ ತಂಡ ವಿಶ್ವ ಕ್ರಿಕೆಟ್‌ನಲ್ಲಿ ಅಂಬೆಗಾಲು ಇಡುತ್ತಿರೋ ತಂಡ, ಈಗಾಗಲೇ ತಮ್ಮ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ. ಘಟಾನುಘಟಿ ಟೀಂಗಳಿಗೆ ಟಕ್ಕರ್‌ ಕೊಡೋ ಮೂಲಕ ಮುಂದೊಂದು ದಿನ ನಾವು ಬಲಿಷ್ಠ ಕ್ರಿಕೆಟ್‌ ಟೀಂ ಆಗಿ ಹೊರಹೊಮ್ಮುತ್ತೇವೆ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಅರೇ ರಶೀದ್‌ ಖಾನ್‌ಗೆ ಕೇಳುತ್ತಿರೋ ಪ್ರಶ್ನೆಗೂ ಅಫ್ಘಾನಿಸ್ತಾನ ಕ್ರಿಕೆಟ್‌ ಟೀಂಗೂ ಏನು ನಂಟು ಅನ್ನೋ ಅನುಮಾನ ನಿಮ್ಮಲ್ಲಿ ಮೂಡಿರಬಹುದು ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಸೋಶಿಯಲ್‌ ಮೀಡಿಯಾದಲ್ಲ ಮತ್ತು ರಶೀದ್‌ ಖಾನ್‌ ನೀಡಿರುವ ಸಂದರ್ಶನದಲ್ಲಿ ಕೇಳಿರುವ ಪ್ರಶ್ನೆ ಒಂದೇ ರಶೀದ್‌ ಖಾನ್‌ ಮದುವೆ ಯಾವಾಗ ಅನ್ನೋದು, ಇದಕ್ಕೆ ರಶೀದ್‌ ಖಾನ್‌ ನಾಜೂಕಾಗಿ ಉತ್ತರವನ್ನು ನೀಡಿದ್ದಾರೆ. ಹೌದು ರಶೀದ್‌ ಖಾನ್‌ ಪ್ರಕಾರ ʻಅಫ್ಘಾನಿಸ್ತಾನ ತಂಡ ವಿಶ್ವಕಪ್‌ ಗೆದ್ದ ಬಳಿಕ ಮದುವೆಯಾಗ್ತಾರಂತೆʼ ಹೌದು ಈ ರೀತಿಯ ಒಂದು ಹೇಳಿಕೆಯನ್ನು ನೀಡಿರೋ ರಶೀದ್‌ ಖಾನ್‌ ತಾನು ಅಫ್ಘಾನಿಸ್ತಾನ ವಿಶ್ವಕಪ್‌ ಗೆದ್ದ ಬಳಿಕ ನಾನು ಮದುವೆಯಾಗುತ್ತೇನೆ ಅಂತ ಹೇಳಿದ್ದು ಈಗ ಎಲ್ಲಾ ಕಡೆ ವೈರಲ್‌ ಆಗಿದೆ.

ಸದ್ಯ ಕ್ರಿಕೆಟ್‌ನಲ್ಲಿ ಈಗ ತಾನೇ ಬೆಳಕು ಕಾಣುತ್ತಿರೋ ಅಫ್ಘಾನಿಸ್ತಾನ ಅಷ್ಟು ಬೇಗ ವಿಶ್ವಕಪ್‌ ಗೆದ್ದು ಬಿಡುತ್ತಾ ಅನ್ನೋ ಮಾತುಗಳನ್ನು ಈಗ ಕೆಲವ್ರು ಆಡಿಕೊಳ್ತಾ ಇದ್ರೆ, ಇನ್ನುಕೆಲವ್ರು ಆದಷ್ಟು ಬೇಗ ವಿಶ್ವಕಪ್‌ ಗೆಲ್ಲಲಿ ರಶೀದ್‌ ಮದುವೆ ಆದಷ್ಟು ಬೇಗ ಆಗಲಿ ಅನ್ನೋ ಮಾತುಗಳನ್ನು ಹೇಳ್ತಾ ಇದ್ದಾರೆ..

ಅದೆನೇ ಇದ್ರೂ ಸದ್ಯ ರಶೀದ್‌ ಖಾನ್‌ ಅವ್ರ ಈ ಒಂದು ಹೇಳಿಕೆಗೆ ಈಗ ಎಲ್ಲಾ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ, ಕಾರಣ ಯಾವಾಗಲೂ ಮನುಷ್ಯನಲ್ಲಿ ಆತ್ಮವಿಶ್ವಾಸ ಇರಬೇಕು, ಮುಂದಿನ ವರ್ಷನ ನಡೆಯೋ ವಿಶ್ವಕಪ್‌ನಲ್ಲಿ ಆಫ್ಘಾನಿಸ್ತಾನ ವಿಶ್ವಕಪ್‌ ಗೆಲ್ಲಲಿ ಅನ್ನೋ ಮಾತುಗಳನ್ನು ಆಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top