ರಣ್ಬೀರ್ ಕಪೂರ್ ಆಲಿಯಾ ಭಟ್ ಲವ್ ಢಮಾರ್..!

Ranbeer alia breakup news

ಬಾಲಿವುಡ್ ನಲ್ಲಿ ಲವ್ ಶುರುವಾಗೋದು ಅದೇ ರೀತಿ ಲವ್ ಬ್ರೇಕಪ್‌ ಆಗೋದು ಅದೇನು ಹೊಸದೇನಲ್ಲ. ಈಗ ಇನ್ನೋಂದು‌ ಕ್ಯೂಟ್ ಜೋಡಿಯ ಲವ್ ಬ್ರೇಕಪ್ ಆಗೋ‌ ಎಲ್ಲಾ ಲಕ್ಷಣ ಕಾಣುತಿದೆ. ಆಲಿಯಾ-ರಣ್ಬೀರ್ ಲವ್ ಶುರುವಾಗಿದ್ದು ಬ್ರಹ್ಮಾಸ್ತ್ರ ಚಿತ್ರದ ಶೂಟಿಂಗ್ ವೇಳೆ ಆ ನಂತರದಲ್ಲಿ ಇವರಿಬ್ಬರ ಪ್ರೇಮ ಗಾಢವಾಗಿ ಬೆಳೆದು ಮದುವೆ ಹಂತಕ್ಕೂ ತಲುಪಿದೆ, ಆದ್ರೆ ಈ ವೇಳೆಯಲ್ಲಿ ಈಗ ಇವರಿಬ್ಬರ ಪ್ರೇಮಕ್ಕೆ ಫುಲ್ ಸ್ಟಾಪ್ ಬೀಳಲಿದೆ ಅಂತ ಪತ್ರಿಕೆಯೊಂದು ವರದಿಮಾಡಿದೆ. ಹೌದು ವರದಿ ಪ್ರಕಾರ ರಣ್ಬೀರ್ ಆಲಿಯಾಗೆ ಬ್ರೇಕಪ್ ಮಾಡೋದಾಗಿ ಬೆದರಿಕೆ ಹಾಕಿದ್ದಾರಂತೆ.

ಇಬ್ಬರ ನಡುವೆ ಯಾವುದು ಸರಿಯಿಲ್ಲ‌ ಅನ್ನೋದು ಈ ವಿಷಯದಿಂದ ತಿಳಿದುಬರ್ತಾ ಇದೆ. ಆಲಿಯಾ-ರಣ್ಬೀರ್ ಕಪೂರ್ ಗೆ ಕಾಲ್ ಮಾಡಿದ್ರೆ ತಕ್ಷಣ ಕಾಲ್ ರಿಸೀವ್ ಮಾಡೋಲ್ಲವಂತೆ ಅಲ್ಲದೇ ಆಲಿಯಾ ಮಾಡೋ ಯಾವುದೇ ಮೆಸೇಜ್ ಗೂ ತಕ್ಷಣ ರಿಪ್ಲೈ ಮಾಡೋದಿಲ್ಲವಂತೆ. ಇನ್ನು ಆಲಿಯಾ-ರಣ್ಬೀರ್ ಯಾವಾಗಲು ತನ್ನ ಜೊತೆಯಲ್ಲಿಯೇ ಇರಬೇಕು ಯಾವಾಗ್ಲೂ ಫೋನ್ ನಲ್ಲಿ ಮಾತನಾಡಬೇಕು ಅಂತ ಬಯಸುತ್ತಾಳೆ ಆದ್ರೆ ಇದು ರಣ್ಬೀರ್ ಗೆ ಇರುಸು ಮುರುಸು ಶುರುವಾಗಿದೆಯಂತೆ, ಈ ಕಾರಣಕ್ಕೆ ಲವ್ ಬ್ರೇಕಪ್ ಮಾಡೋದಾಗಿ ಬೆದರಿಕೆ ಹಾಕಿದ್ದಾರಂತೆ. ಇನ್ನು ಬ್ರಹ್ಮಾಸ್ತ್ರ ಚಿತ್ರ ರಿಲೀಸ್ ಆದ ಮೇಲೆ ಮದುವೆ ಮಾಡಿಕೊಳ್ಳೋ‌ ಪ್ಲ್ಯಾನ್ ಕೂಡ ಮಾಡಿಕೊಂಡಿದ್ದರು. ಒಟ್ಟಿನಲ್ಲಿ ಬಾಲಿವುಡ ನ ಈ ಕ್ಯೂಟ್ ಜೋಡಿಯ ಸುದ್ದಿ ಪತ್ರಿಕೆಯಲ್ಲಿ ಬಂದಿರೋದು ನೋಡಿ ಇಬ್ಬರ ಫ್ಯಾನ್ಸ್ ಈಗ ಸ್ಪಲ್ಪ‌ಬೇಸರದಲ್ಲೇ ಇದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top