ಸ್ಯಾಂಡಲ್‌ವುಡ್‌ಗೆ ಮತ್ತೆ ಎಂಟ್ರಿ ಕೊಟ್ರ ಮೋಹಕ ತಾರೆ ರಮ್ಯಾ..?

ಸ್ಯಾಂಡಲ್‌ವುಡ್‌ಗೆ ಮತ್ತೆ ಎಂಟ್ರಿ ಕೊಟ್ರ ಮೋಹಕ ತಾರೆ ರಮ್ಯಾ

ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ ಸ್ಯಾಂಡಲ್‌ವುಡ್‌ನಿಂದ ದೂರವಾಗಿ ಕೆಲವು ವರ್ಷಗಳೇ ಕಳೆದು ಹೋಗಿದೆ, ಇನ್ನು ರಾಜಕೀಯಕ್ಕೆ ಎಂಟ್ರಿಕೊಟ್ಟ ಮೇಲೆ ಚಿತ್ರರಂಗದ ಕಡೆ ತಲೆ ಎತ್ತಿಯೂ ನೋಡಲೇ ಇಲ್ಲ, ಇನ್ನು ರಮ್ಯಾ ಅಭಿನಯದ ಕೊನೆಯ ಸಿನಿಮಾ ಅಂದ್ರೆ ಶಿವರಾಜ್‌ಕುಮಾರ್‌ ಜೊತೆ ಅಭಿನಯಿಸಿದ ʻಆರ್ಯನ್‌ʼ ಸಿನಿಮಾ, ಆದ್ರೆ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಡುವ ಮೊದಲು ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ರು, ಶಿವರಾಜ್‌ಕುಮಾರ್‌ ಜೊತೆಗಿನ ಆರ್ಯನ್‌ ಸಿನಿಮಾ ಮತ್ತು ಪ್ರಜ್ವಲ್‌ ದೇವರಾಜ್‌ ಜೊತೆಗಿನ ʻದಿಲ್‌ ಕಾ ರಾಜಾʼ ಸಿನಿಮಾ, ಆದ್ರೆ ಆರ್ಯನ್‌ ಸಿನಿಮಾ ಶೂಟಿಂಗ್‌ ಮುಗಿಸಿಕೊಟ್ಟಿದ್ದ ರಮ್ಯಾ, ದಿಲ್‌ಕಾ ರಾಜ ಸಿನಿಮಾ ಅರ್ಧದಷ್ಟು ಸಿನಿಮಾ ರೆಡಿಯಾದ ಮೇಲೆ ರಾಜಕೀಯದ ಕಡೆ ಹೋಗಿಬಿಟ್ರು.

ಇದೇ ವೇಳೆ ದಿಲ್‌ ಕಾ ರಾಜ ಸಿನಿಮಾ ಅರ್ಧಕ್ಕೆ ನಿಂತು ಹೋಯ್ತು, ಆದ್ರೆ ಈಗ ದಿಲ್‌ ಕಾ ರಾಜ ಸಿನಿಮಾ ಮತ್ತೆ ಟೇಕಾಫ್‌ ಆಗ್ತಾ ಇದೆ ಅನ್ನೋ ಸುದ್ದಿ ಮತ್ತೆ ಗಾಂಧೀನಗರಲ್ಲಿ ಹರಿದಾಡ್ತಾ ಇದೆ, ಆದ್ರೆ ಈ ಚಿತ್ರದಲ್ಲಿ ರಮ್ಯಾ ನಾಯಕಿಯಾಗಿರ್ತಾರಾ ಅಥವಾ ಬೇರೆಯವರು ನಾಯಕಿ ಯಾಗಿದ್ದಾರಾ ಅನ್ನೋದು ಸದ್ಯ ಕುತೂಹಲ, ಇನ್ನು ಈ ಚಿತ್ರದ ಲಿರಿಕಲ್‌ ವಿಡಿಯೋ ಸಾಂಗ್‌ ಕೂಡ ರಿಲೀಸ್‌ ಆಗ್ತಾ ಇದ್ದು ಚಿತ್ರದ ಸಾಂಗ್‌ ಶೂಟಿಂಗ್‌ ಕೂಡ ಕಂಪ್ಲೀಟ್‌ ಆಗಿತ್ತು, ಆದ್ರೆ ಚಿತ್ರ ತಂಡ ಮತ್ತೆ ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ರಮ್ಯಾ ಅವರೇ ಚಿತ್ರ ನಾಯಕಿಯಾಗಿರ್ತಾರಾ ಅಥವಾ ಬೇರೆ ನಾಯಕಿಯ ಆಯ್ಕೆಯಾಗಿದೇಯಾ ಅನ್ನೋದನ್ನ ಚಿತ್ರತಂಡ ಬಹಿರಂಗಪಡಿಸಬೇಕಿದೆ.

ಸ್ಯಾಂಡಲ್‌ವುಡ್‌ಗೆ ಮತ್ತೆ ಎಂಟ್ರಿ ಕೊಟ್ರ ಮೋಹಕ ತಾರೆ ರಮ್ಯಾ

ಸೋಮನಾಥ್‌ ಪಿ ಪಾಟೀನ್‌ ನಿರ್ದೇಶನದ ಈ ಸಿನಿಮಾ ಐದು ವರ್ಷಗಳ ಹಿಂದೆ ನಿಂತು ಹೋಗಿತ್ತು ಆದ್ರೆ ಈಗ ಮತ್ತೆ ಟೇಕಾಫ್‌ ಆಗ್ತಾ ಇರೋ ಸುದ್ದಿ ಕೇಳಿದ ರಮ್ಯಾ ಅಭಿಮಾನಿಗಳು ಮೋಹಕ ತಾರೆಯನ್ನು ಮತ್ತೆ ತೆರೆಮೇಲೆ ನೋಡೋ ಭಾಗ್ಯ ಸಿಗಬಹುದು ಅನ್ನೋ ಖುಷಿಯಲ್ಲಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top