ನೊಂದ ಅಭಿಮಾನಿ ಕುಟುಂಬಕ್ಕೆ 10ಲಕ್ಷ ರೂಪಾಯಿ ಸಹಾಯ ಮಾಡಿದ ಸ್ಟಾರ್ ನಟ..!

ಚಿತ್ರ ನಟರು ಮತ್ತು ಅಭಿಮಾನಿಗಳ ನಡುವೆ ಯಾವಾಗಲೂ ಅವಿನಾಭಾವ ಸಂಬಂಧ ಇದ್ದೇ ಇರುತ್ತದೆ..ಅದೇ ರೀತಿ ತಮ್ಮ ಸ್ಟಾರ್ ನಟನಿಗಾಗಿ ಅಭಿಮಾನಿ ತಮ್ಮ ಅಭಿಮಾನ ತೋರಿದ್ರೆ, ಅಭಿಮಾನಿಗಳ ಪ್ರೀತಿಗೆ ನಟರು ಸಹ ಕೃತಜ್ಞನರಾಗಿ ಇರುತ್ತಾರೆ.. ಅದೇ ರೀತಿಯ ಘಟನೆ ಈಗ‌ ಟಾಲಿವುಡ್ ನಲ್ಲಿ ನಡೆದಿದೆ.. ತಮ್ಮ ಅಭಿಮಾನಿಯ ಕುಟುಂಬಕ್ಕೆ ನೆರವಾಗುವ ಮೂಲಕ ಸ್ಟಾರ್ ನಟನೊಬ್ಬ ಮಾದರಿಯಾಗಿರೋ ಘಟನೆ ಟಾಲಿವುಡ್ ನಲ್ಲಿ ನಡೆದಿದೆ..

ಹೌದು ಟಾಲಿವುಡ್ ನ ಸ್ಟಾರ್ ನಟ ರಾಮ್ ಚರಣ್ ತೇಜಾ ತಮ್ಮ ಅಭಿಮಾನಿ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಮೆಗಾಸ್ಟಾರ್ ಕುಟುಂಬದ ಅಪ್ಪಟ ಅಭಿಮಾನಿಯಾದ ನೂರ್ ಆಹಮ್ಮದ್ ಕಳೆದ ಡಿಸೆಂಬರ್‌ನಲ್ಲಿ ನಿಧನರಾಗಿದ್ದರು,ಈ ವೇಳೆ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ಅವರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡುವುದಾಗಿ ಹೇಳಿದ್ರು, ಇನ್ನು ನೂರ್ ಆಹಮ್ಮದ್ ರಾಮ್ ಚರಣ್ ಮತ್ತು ಅಲ್ಲುಅರ್ಜುನ್ ಅಪ್ಪಟ ಅಭಿಮಾನಿ‌ ಮತ್ತು ಅಭಿಮಾನಿ ಸಂಘದ ಅಧ್ಯಕ್ಷರಾಗಿದ್ದರು

ಇನ್ನು ನಿಧನರಾದ ವೇಳೆ ಆರ್ಥಿಕ ನೆರವು ನೀಡುವುದಾಗಿ ಮಾತು ನೀಡಿದಂತೆ ರಾಮ್ ಚರಣ್ ನೂರು ಕುಟುಂಬಕ್ಕೆ 10ಲಕ್ಷ ರೂಪಾಯಿ ನೀಡುವ‌ ಮೂಲಕ ನೆರವು ನೀಡುವ ಜೊತೆಗೆ ಮುಂದಿನ ದಿನಗಳಲ್ಲು ನೆರವು ಬೇಕಾಗಿದ್ದಲ್ಲಿ ಮಾಡುವುದಾಗಿ ಕುಟುಂಬಕ್ಕೆ ಧೈರ್ಯ ನೀಡಿದ್ದಾರೆ.

ಸದ್ಯ ರಾಮ್ ಚರಣ್ ಭೇಟಿ ಮಾಡಿದ ಫೋಟೋಗಳು ವೈರಲ್ ಆಗಿದ್ದು ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top