ಕಾವೇರಿ ಕೂಗಿಗಾಗಿ ಬೈಕ್ ಏರಿದ ಅವನೇ ಶ್ರೀಮನ್ ನಾರಾಯಣ..!

ಸದ್ಗುರು ನೇತೃತ್ವದ ಇಶಾ ಫೌಂಡೇಶನ್ ಹಮ್ಮಿಕೊಂಡಿರೋ ಕಾವೇರಿ ಕೂಗು ಅಭಿಯಾನ ಇಂದು ಕಾವೇರಿ ಉಗಮಸ್ಥಾನ ತಲಕಾವೇರಿಯಿಂದ ಶುರುವಾಗಿದೆ. ಕಾವೇರಿ ನದಿ ತಟದಲ್ಲಿ ಮಣ್ಣಿನ ಸವೆತವನ್ನ ತಡೆಗಟ್ಟುವ, ಬತ್ತಿ ಹೋಗ್ತಿರೋ ಕಾವೇರಿಯನ್ನ ಉಳಿಸುವ ರೈತಾಪಿ ವರ್ಗಕ್ಕೆ ಹೆಚ್ಚು ಹೆಚ್ಚು ಮರ ಗಿಡಗಳನ್ನ ನೆಡಲು ಉತ್ತೇಜಿಸುವ ಅಭಿಯಾನ ಇದಾಗಿದ್ದು, ಇಂದಿನಿಂದ ಈ ಅಭಿಯಾನವನ್ನ ಸದ್ಗುರು ಜಗ್ಗಿ ವಾಸುದೇವ್ ಆರಂಭಿಸಿದ್ದಾರೆ. ಬ್ಯಾಕ್ ರ್ಯಾಲಿ ಮೂಲಕ ಚಾಲನೆ ನೀಡಿದ್ದಾರೆ.

ವಿಶೇಷ ಅಂದ್ರೆ ಸದ್ಗುರುಗೆ ಸ್ಯಾಂಡಲ್‍ವುಡ್‍ನ ಸ್ಟಾರ್ಸ್ ಕೂಡ ಸಾಥ್ ನೀಡಿದ್ದಾರೆ. ಅದ್ರಂತೆ ಈ ಅಭಿಯಾನದ ಚಾಲನೆಯ ದಿನ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ, ದಿಗಂತ್ ಸದ್ಗುರು ಬೈಕ್ ರ್ಯಾಲಿಗೆ ಸಾಥ್ ಕೊಟ್ಟಿದ್ದಾರೆ. ಸದ್ಯ ಅವನೇ ಶ್ರೀಮನ್ನಾರಾಯಣ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿರೋ ರಕ್ಷಿತ್ ಕಾವೇರಿ ಕೂಗಿಗೆ ಜೊತೆಯಾಗೋ ಮೂಲಕ, ಈ ಅಭಿಯಾನಕ್ಕೆ ಸಾಥ್ ಕೊಟ್ಟಿದ್ದಾರೆ.

ಇವರ್ಷ್ಟೇ ಅಲ್ಲದೇ ಸ್ಯಾಂಡಲ್‍ವುಡ್‍ನ ಎಲ್ಲಾ ಹೀರೋ, ಹೀರೋಯಿನ್ ಗಳು ಕೂಡ ಕಾವೇರಿ ಕೂಗಿಗಾಗಿ ಧನಿ ಎತ್ತಿದ್ದಾರೆ. ಕೊಡಗಿನಿಂದ ಶುರುವಾಗಿರೋ ಈ ಅಭಿಯಾನ ಮುಂದಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಮಂಡ್ಯ ಸೇರಿ ಹಲವೆಡೆ ನಡೆಯಲಿದೆ. ಸದ್ಗುರುವಿನ ಈ ಅಭಿಯಾನಕ್ಕೆ ಇಡೀ ದೇಶವೇ ತಿರುಗಿ ನೋಡ್ತಿದ್ದು, ಅವರ ಜಾಗೃತಿ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸ್ತಿದೆ..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top