ರಶ್ಮಿಕಾ‌ ಹಿಂದಿದ್ದ ಶಕ್ತಿ ರಕ್ಷಿತ್…!

Rakshith Shetty - Rashmika Break-up Kahani

ಇವತ್ತು ರಶ್ಮಿಕಾಗೆ ರಕ್ಷಿತ್ ಗಿಂತ ಕೆರಿಯರ್ ಮುಖ್ಯ….!

ರಶ್ಮಿಕಾ ಮಂದಣ್ಣ ಎಂಬ ಸುರಸುಂದರಾಂಗಿ ಪರಿಚಯವಾಗಿದ್ದು ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ.‌ ರಿಷಬ್ ಶೆಟ್ಟಿ ನಿರ್ದೇಶನದ ರಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾ ಬರುವವರೆಗೂ ರಶ್ಮಿಕಾ ಎಂಬ ಬೆಡಗಿ ಪರಿಚಯ ಇರಲಿಲ್ಲ.
ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ರಶ್ಮಿಕಾ ಮನೆಮಾತಾದರು. ಅವರ ಕನ್ನಡಕದ್ದೇ ಟ್ರೆಂಡ್ ಆಗಿಬಿಟ್ಟಿತ್ತು. ನಗು ಎಲ್ಲರನ್ನೂ ಸೆಳೆದಿತ್ತು. ನಟನೆಯೂ ಇಷ್ಟವಾಯಿತು. ಅಲ್ಲಿಂದ ರಶ್ಮಿಕಾ ಹಿಂತಿರುಗಿ ನೋಡಲೇ ಇಲ್ಲ.‌ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಅಂಜನಿಪುತ್ರ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಚಮಕ್’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು‌.‌ ಕನ್ನಡ ಮಾತ್ರವಲ್ಲದೆ ತೆಲುಗು ಸಿನಿರಂಗ ಕೂಡ ಕೊಡಗಿನ ಈ ಚೆಲುವೆಯನ್ನು ಬರಮಾಡಿಕೊಂಡಿತು.
ಇಂದು ರಶ್ಮಿಕಾ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ನ ಬಹುಬೇಡಿಕೆಯ ನಟಿ.‌ ಸಾಲು ಸಾಲು ಸಿನಿಮಾಗಳು ರಶ್ಮಿಕಾ ಕೈಯಲ್ಲಿವೆ.
ಅಂದಹಾಗೆ ರಶ್ಮಿಕಾ ಅವರನ್ನು ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದು ರಕ್ಷಿತ್ ಶೆಟ್ಟಿಯೇ. ಅವರಿಂದಲೇ ಅವರಿಗೆ ಅವಕಾಶ ಒದಗಿ ಬಂದಿದ್ದು ಅನ್ನೋದು ಗೊತ್ತಿರೋ ವಿಷಯವೇ. ನಂತರದ ದಿನಗಳಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.

Rakshith Shetty - Rashmika Break-up Kahani
ಆರಂಭದ ದಿನಗಳಲ್ಲಿ ಪ್ರೀತಿಗೀತಿ ಏನೂ ಇಲ್ಲ ಎಂದು ಹೇಳುತ್ತಿದ್ದ ಜೋಡಿ‌ಯ ನಿಶ್ಚಿತಾರ್ಥವೂ ಮುಗಿದಿತ್ತು.‌ಮದುವೆ ಆಗಲು ಇಬ್ಬರೂ ರೆಡಿ ಇದ್ದರು.
ನಿಶ್ಚಿತಾರ್ಥ ಮುಗಿದ ಮೇಲೆ‌ ಆದಷ್ಟು ಬೇಗ ಮದುವೆ ಆಗಿದ್ದರೆ ಚೆನ್ನಾಗಿರ್ತಿತ್ತೋ ಏನೊ? ಸ್ವಲ್ಪ ಸಮಯ ಕೆರಿಯರ್ ಕಡೆ ಗಮನಕೊಟ್ಟು ಮತ್ತೆ ಮದುವೆ ಆಗೋಣ ಎಂದು ಇಬ್ಬರು ತಮ್ಮ ತಮ್ಮ ಪ್ರಾಜೆಕ್ಟ್‌ ಗಳಲ್ಲಿ ಬ್ಯುಸಿ ಆದರು. ಅಷ್ಟರಲ್ಲೀಗ ಕಾಲ ಬದಲಾಗಿದೆ. ರಶ್ಮಿಕಾಗೆ ರಕ್ಷಿತ್ ಗಿಂತ ಕೆರಿಯರ್ ಮುಖ್ಯ ಎಂದೆನೆಸಿದೆ…!?
ಹಲವು ದಿನಗಳಿಂದ ಇಬ್ಬರ ನಡುವಿನ ಸಂಬಂಧ ಹಳಸಿದೆ ಎಂಬ ಸುದ್ದಿ ಕೇಳಿ ಬರ್ತಿತ್ತು. ಆದರೆ , ರಕ್ಷಿತ್ -ರಶ್ಮಿಕಾ ಹಾಗೇನು ಇಲ್ಲ. ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳುತ್ತಲೇ ದಿನ ದಬ್ಬಿದ್ದರು. ಈಗ ಎಲ್ಲವೂ ಬದಲಾಗಿದೆ.
ತೆಲುಗಿನ ‘ಗೀತಾ ಗೋವಿಂದಂ’ ಸಿನಿಮಾದಲ್ಲಿ ರಶ್ಮಿಕಾರ ಲಿಪ್ ಲಾಕ್ ಸೀನ್ ವೈರಲ್ ಆಗುತ್ತಿದ್ದಂತೆ ಟ್ರೋಲ್ ಗಳು ಶುರುವಾದವು. ರಶ್ಮಿಕಾ ಅವರ ಬಗ್ಗೆ ನೆಗಿಟೀವ್ ಕಾಮೆಂಟ್ ಗಳನ್ನು ಮಾಡಲಾಯಿತು.‌ ರಕ್ಷಿತ್ ಶೆಟ್ಟಿ ಇದರಿಂದ ನೊಂದು ಸೋಶಿಯಲ್ ಮೀಡಿಯಾಕ್ಕೆ ಗುಡ್ ಬೈ ಹೇಳಿದರು…!
‘ ವೃತ್ತಿಯಷ್ಟೇ. ಹುಡ್ಗಿ ಆಗಿದ್ರಿಂದ ಜ‌ನ ಹೀಗೆ ಕಾಮೆಂಟ್ ಮಾಡ್ತಿದ್ದಾರೆ. ಆ ಸೀನ್ ನಲ್ಲಿ ನಾನು ನಟಿಸಿದ್ದರೆ ಯಾರೂ ಏನೂ ಹೇಳ್ತಿರ್ಲಿಲ್ಲ’ ಎಂದು ರಕ್ಷಿತ್ ಮೇಲ್ನೋಟಕ್ಕೆ‌ ರಶ್ಮಿಕಾ ಪರ ಬ್ಯಾಟ್ ಬೀಸಿದ್ದಂತೂ ನಿಜ.‌ ಆದರೆ, ಸಾಮಾನ್ಯವಾಗಿ ಆ ಮುತ್ತಿನ ಕಥೆ ರಕ್ಷಿತ್ ಮನಸ್ಸಿಗೂ ನೋವು ತಂದಿರಬಹುದು. ಯಾಕಂದರೆ ಮಡಿವಂತಿಕೆ ಎನ್ನುವುದಕ್ಕಿಂತ ಮಿಗಿಲಾಗಿಯೂ ಯಾವ ಒಬ್ಬ ಪುರಷನೂ ತನ್ನಾಕೆಯಿಂದ ಅಂತದ್ದನ್ನು ನಿರೀಕ್ಷಿಸಲಾರ….!‌? ಅಲ್ಲವೇ?
ಅದೇನೇ ಇರಲಿ ಟ್ರೋಲ್ ಗಳ ಹಾವಳಿಯಿಂದ ಬೇಸತ್ತೋ? ಅಥವಾ ಲಿಪ್ ಲಾಕ್ ದೆಸೆಯಿಂದಲೋ ? ಒಟ್ನಲ್ಲಿ ಚಂದನವನದ ಚಂದದ ಜೋಡಿಯೊಂದು ಮದುವೆಗೆ ಮುನ್ನವೇ ದೂರವಾಗಿದೆ.
ರಶ್ಮಿಕಾ ಇವತ್ತು ಕೆರಿಯರ್ ಮುಖ್ಯ ಎಂದು ರಕ್ಷಿತ್ ಒಪ್ಪಿಗೆಯ ಮೇರೆಗೆ ದೂರ ಆಗಿರಬಹುದು. ಆದರೆ, ಇದು ನಿಜಕ್ಕೂ ಬೇಸರದ ಸಂಗತಿ. ರಕ್ಷಿತ್ ಎಂಬ ರಶ್ಮಿಕಾ ಹಿಂದಿನ ಶಕ್ತಿ ಇರದಿದ್ದರೆ ಇವತ್ತು ರಶ್ಮಿಕಾ ಎಲ್ಲಿರುತ್ತಿದ್ದರೋ? ಎಂಬ ಪ್ರಶ್ನೆಯೂ ಮೂಡಬಹುದಲ್ಲವೇ?

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top