ತಮಿಳಿನಲ್ಲೂ ಖದರ್‌ ತೋರಿಸಲು ರೆಡಿಯಾದ ರಾಜ್‌ವರ್ಧನ್‌..!

ರಾಜ್‌ವರ್ಧನ್‌ ʻಬಿಚ್ಚುಗತ್ತಿʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸದ ನಟ, ತಮ್ಮ ಮೊದಲ ಎಂಟ್ರಿಯಲ್ಲೇ ಸಿನಿರಸಿಕರನ್ನು ಇಂಪ್ರೆಸ್‌ ಮಾಡಿದ್ದ ರಾಜ್‌ವರ್ಧನ್‌, ಸ್ಯಾಂಡಲ್‌ವುಡ್‌ನಲ್ಲಿ ಒಬ್ಬ ಮಾಸ್‌ ಹೀರೋ ಆಗಿ ಬೆಳೆಯೋದ್ರಲ್ಲಿ ಡೌಟೇ ಇಲ್ಲ ಅಂತ ಗಾಂಧಿನಗರ ಮಾತನಾಡಿಕೊಳ್ತು, ಹೀಗಿರುವಾಗಲೇ ʻಬಿಚ್ಚುಗತ್ತಿʼ ನಂತರ ರಾಜ್‌ವರ್ಧನ್‌ ಅವರ ಮತ್ತೊಂದು ಸಿನಿಮಾ ಅನೌನ್ಸ್‌ ಆಗಿದೆ. ಇನ್ನು ಹೆಸರಿಡದ ಚಿತ್ರದವನ್ನು ಅನೌನ್ಸ್‌ ಮಾಡಿದ್ದು, ಚಿತ್ರದ ಪೊಸ್ಟರ್‌ ರಿಲೀಸ್‌ ಮಾಡಿದ್ದಾರೆ.

ರಾಜ್‌ವರ್ಧನ್‌ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಿದ್ದು, ಚಿತ್ರಕ್ಕೆ ಸದ್ಯ ಪ್ರೊಡಕ್ಷನ್‌ ನಂ1 ಅಂತ ಹೆಸರಿಟ್ಟಿದ್ದಾರೆ. ಚಿತ್ರದಲ್ಲಿ ರಾಜ್‌ವರ್ಧನ್‌ ಬ್ಯಾಕ್‌ ಪೋಸ್‌ ಕೊಟ್ಟಿದ್ದು ಪೋಸ್ಟರ್‌ನಲ್ಲಿ ಹೈವೋಲ್ಟಾಜ್‌ ಮೀಟರ್‌ ತೋರಿಸಿದ್ದು, ಈ ಸಿನಿಮಾ ಕೂಡ ಒಂದು ಹೈವೋಲ್ಟಾಜ್‌ ಸಿನಿಮಾ ಅಂತ ತೋರಿಸಿದ್ದಾರೆ. ಇನ್ನು ಈ ಸಿನಿಮಾ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೇ ತೆರೆಗೆ ತರಲು ಪ್ಲಾನ್‌ ಕೂಡ ಆಗಿದ್ದು, ಆ ಮೂಲಕ ರಾಜ್‌ವರ್ಧನ್‌ ಕಾಲಿವುಡ್‌ನಲ್ಲೂ ತಮ್ಮ ಖದರ್‌ ತೋರಿಸಲು ರೆಡಿಯಾಗ್ತಿದ್ದಾರೆ. ಸದ್ಯ ಹೆಸರಿಡದ ಪೋಸ್ಟರ್‌ ರಿಲೀಸ್‌ ಮಾಡಿದ್ದು, ಸದ್ಯದರಲ್ಲೇ ಚಿತ್ರದ ಟೀಸರ್‌ ಕೂಡ ರಿಲೀಸ್‌ ಮಾಡಲಿದ್ದಾರೆ, ಇನ್ನು ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ತಂತ್ರಜ್ಞರಿಗೆ ಮತ್ತು ಕಲಾವಿದರಿಗೆ ದೊಡ್ಡ ಸಪ್ರೈರ್ಸ್‌ ಆಗಿರಲಿದೆಯಂತೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top