ಅಮರ್ ಸಿನಿಮಾದಲ್ಲಿ ಬಿಕ್ಷುಕನ ಪಾತ್ರ ನೀಡಿ ಎಂದ ಸೂಪರ್‌ಸ್ಟಾರ್ ರಜಿನಿಕಾಂತ್..!

rajnikanth with abhishek ambareesh

ಚಿತ್ರರಂಗದ ಸ್ನೇಹಜೀವಿ, ಕಲಿಯುಗದ ಕರ್ಣ ಅಂದ್ರೆ ಅದು ರೆಬೆಲ್‌ಸ್ಟಾರ್ ಅಂಬರೀಶ್ ಹೇಳಿ ಕೇಳಿ ಅಂಬರೀಶ್ ಗೆ ಸ್ನೇಹ ಬಳಗ ದೊಡ್ಡದು, ಇನ್ನು ರಜಿನಿ ಮತ್ತು ಅಂಬಿಯ ಸ್ನೇಹ ಅತೀ ಅಪರೂಪವಾದದ್ದೂ ಆದ್ರೆ ಈಗ ನಾವ್ ಹೇಳ್ತಾ ಇರೋ ವಿಷಯ ಕೇಳಿದ್ರೆ ನೀವೂ ಶಾಕ್ ಆಗ್ತೀರಾ. ಹೌದು ಅಂಬಿಯ ಮಗನ ಮೊದಲ ಸಿನಿಮಾ ಅಮರ್ ನಲ್ಲಿ ನನಗೂ ಒಂದು ರೋಲ್ ಕೊಡಿ ಬಿಕ್ಷುಕನ ಪಾತ್ರವಾದ್ರೂ ಸರಿ ಅಂತ ಕೇಳಿದ್ರಂತೆ ಸೂಪರ್‌ಸ್ಟಾರ್ ರಜಿನಿ ಕಾಂತ್, ಅಭಿಷೇಕ್ ಸಿನಿಮಾದಲ್ಲಿ ನಟಿಸ್ತಾರೆ ಅಂದಾಗ ರಜಿನಿಕಾಂತ್‌ ಎಲ್ಲಿಲ್ಲದ ಸಂತೋಷ ವ್ಯಕ್ತಪಡಿಸಿದ್ರಂತೆ ಅಲ್ಲದೇ ನನಗೂ ಅಭಿ ಸಿನಿಮಾದಲ್ಲಿ ಒಂದು ರೋಲ್ ಕೊಡಿ‌ ಅದು ಬಿಕ್ಷುಕನ ಪಾತ್ರವಾದ್ರೂ ಸರಿ ಅಂತ ಕೇಳಿದ್ರು ಅಂತ ಅಮರ್ ಚಿತ್ರದ ನಿರ್ದೇಶಕ ನಾಗ್ ಶೇಖರ್ ಹೇಳಿದ್ದಾರೆ. ಇನ್ನು ಈ ವಿಚಾರವಾಗಿ ನಾಗ್ ಶೇಖರ್ ಅಂಬರೀಶ್ ಬಳಿ ಹೇಳಿದಾಗ ಅವರಿಗೆ ರೋಲ್‌ ಇದ್ರೆ ಕೊಡಿ ಅದನ್ನು ಬಿಟ್ಟು ಯಾವುದೋ ರೋಲ್ ಗಳನ್ನು ಕೊಟ್ಟು ಅವರ ಬೆಲೆಯ‌ನ್ನು ಕಳೆಯಬೇಡಿ, ಅವರ ಘನತೆಯನ್ನು ಹಾಳುಮಾಡಬೇಡಿ ಅಂದಿದ್ರಂತೆ ರೆಬೆಲ್ ಸ್ಟಾರ್ ಅಂಬರೀಶ್.

Read : ನಿನ್ನೆ ಬಳ್ಳಾರಿಯ ಹೊಸಪೇಟೆ ರೈಲು ನಿಲ್ದಾಣದಲ್ಲಿ ಭಯಾನಕ ದೃಶ್ಯ!

rajnikanth on amar movie

ಒಟ್ಟಿನಲ್ಲಿ ಅಂಬಿ ಎಂದೂ ಸ್ನೇಹಕ್ಕೆ ಬೆಲೆ ಕೊಡೋ ವ್ಯಕ್ತಿ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಮನುಷ್ಯನಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top