ಗುರವಿನಲ್ಲಿ ಸ್ಥಾನ ಪಲ್ಲಟ ಯಾವ ರಾಶಿಗೆ ಶುಭ, ಯಾವ ರಾಶಿಗೆ ಅಶುಭ.

ಮೇಷ
ಇಷ್ಟು ದಿನ ನಿಮ್ಮ ರಾಶಿಯಿಂದ ಗುರು ಅಷ್ಟಮ ಸ್ಥಾನದಲ್ಲಿದ್ದು ಶುಭಕಾರ್ಯಗಳಿಗೆ ಮಾರಕನಾಗಿದ್ದ. ಇನ್ನು ಮುಂದೆ ಗುರು ನಿಮ್ಮ ಪಾಲಿಗೆ ಭಾಗ್ಯ ಕರುಣಿಸಲಿದ್ದಾನೆ. ಇಷ್ಟು ದಿನ ಕಾಣೆಯಾಗಿದ್ದ ಅದೃಷ್ಟ ಈಗ ಮತ್ತೆ ಬಂದೊದಗಲಿದೆ. ನವೆಂಬರ್ 5ರ ನಂತರ ಗುರುಬಲ ಪ್ರಾರಂಭವಾಗಲಿದ್ದು. ಯಾವ ಶುಭ ಕೆಲಸಗಳನ್ನು ನಿರಾತಂಕವಾಗಿ ಮಾಡಬಹುದು. ಅತ್ಯಂತ ಶುಭ ಫಲವನ್ನು ಕಾಣುತ್ತೀರಿ.

ಪರಿಹಾರ
ಸುಬ್ರಹ್ಮಣ್ಯ ಪ್ರಾರ್ಥನೆ, ಜೇನಿನ ಅಭಿಷೇಕ ಮಾಡಿಸಿ

ವೃಷಭ
ಇದುವರೆಗೂ ನಿಮ್ಮ ಪಾಲಿಗೆ ಗುರು ಬಲವಿತ್ತು. ಗುರುವಿನ ದೃಷ್ಟಿ ನಿಮ್ಮ ದಾಂಪತ್ಯ ಜೀವನದಲ್ಲಿ ಬೆಳಕು ಚೆಲ್ಲಿತ್ತು, ಇನ್ನುಮುಂದೆ ಗುರು ನಿಮ್ಮ ರಾಶಿಗೆ ಕೊಂಚ ಫಲರಹಿತನಾಗುತ್ತಾನೆ. ಶುಭ ಕಾರ್ಯಗಳಿಗೆ ಚಾಲನೆ ಇರುವುದಿಲ್ಲ, ಪ್ರಯಾಣ ಮಾಡುವಾಗ ಎಚ್ಚರವಿರಲಿ, ದಾಂಪತ್ಯದಲ್ಲಿ ಜೀವನದಲ್ಲಿ ಸಮಾಧಾನವಿರಬೇಕು, ದುಡುಕು ನಿರ್ಧಾರಗಳನ್ನು ಕೈಗೊಳ್ಳಬೇಡಿ.

ಪರಿಹಾರ
ದುರ್ಗಾ ದೇವಸ್ಥಾನಕ್ಕೆ ಕ್ಷೀರ ದಾನ ಮಾಡಿ

ಮಿಥುನ
ನಿಮ್ಮ ರಾಶಿಯಿಂದ ಆರರಲ್ಲಿ ಗುರುವಿದ್ದು ಯಾವುದೇ ಶುಭ ಕಾರ್ಯ ನಡೆದಿರಲಿಲ್ಲ, ಈಗ ಶುಭ ಕಾಲ ನಿಮ್ಮ ಮುಂದಿದೆ ವಿವಾಹಕ್ಕೆ ಚಾಲನೆ ಸಿಗಲಿದೆ, ನೀವಂದುಕೊಂಡಿದ್ದನ್ನು ಸಾಧಿಸುವಿರಿ, ಸಂತೋಷ ಸಮೃದ್ಧವಾಗುತ್ತದೆ, ಮಿತ್ರರಿಂದ ಉತ್ತಮ ಸಹಕಾರ, ಹೊಸ ಹೊಸ ಸ್ನೇಹಗಳ ಬೆಸುಗೆಯಾಗುತ್ತದೆ. ವ್ಯಾಪಾರಗಳಲ್ಲಿ ಹೊಂದಾಣಿಕೆಯಿಂದ ಇರಲಿದೆ.

ಪರಿಹಾರ
ಪ್ರತಿ ಬುಧವಾರ ವಿಷ್ಣು ದೇವಾಲಯಕ್ಕೆ ಬೇಳೆ ಪಾಯಸ ನೈವೇದ್ಯ ಮಾಡಿಸಿ

ಕಟಕ
ಇಷ್ಟು ದಿನ ಶುಭ ಕಾಲವನ್ನು ಕಂಡಿದ್ದೀರಿ, ಈಗ ಗುರುಬಲ ಕಳೆದುಹೋಗುತ್ತದೆ, ಕೊಂಚ ಎಚ್ಚರವಾಗಿರಬೇಕು, ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ, ಸಂಗಾತಿಯಲ್ಲಿ ಭಿನ್ನಾಭಿಪ್ರಾಯ ಬರಬಹುದು ಎಚ್ಚರವಾಗಿರಿ, ಶತ್ರುಗಳಿಂದ ಪಾಠಕಲಿಯಬೇಕಾಗುತ್ತದೆ, ಕುಟುಂಬದವರ ಸಹಕಾರದಿಂದ ಧನ ಸಂಪಾದನೆಯಾಗುತ್ತದೆ, ಹೆಚ್ಚಿನ ಚಿಂತೆ ಬೇಡ

ಪರಿಹಾರ
ದುರ್ಗಾ ಕವಚ ಪಠಿಸಿ

ಸಿಂಹ
ಸಂಪೂರ್ಣ ಗುರು ಬಲ ಬಂದಿದೆ, ಶುಭ ಕಾರ್ಯಗಳಿಗೆ ಕಾಲ ಸನ್ನಿಹಿತವಾಗಿದೆ, ನಿಮ್ಮ ತಂದೆ-ತಾಯಿಗಳಿಗೆ ಆತಂಕ ದೂರಾಗಲಿದೆ, ನಿಮ್ಮ ರಾಶಿಗೆ ಗುರು ದೃಷ್ಟಿ ಬೀಳುವುದರಿಂದ ಆರೋಗ್ಯ ಸಮೃದ್ಧವಾಗಲಿದೆ, ಅದೃಷ್ಟದ ದಿನಗಳಿದ್ದಾವೆ, ವ್ಯಾಪಾರಿಗಳಿಗೆ ಲಾಭ ಸಮೃದ್ಧವಾಗುತ್ತದೆ.

ಪರಿಹಾರ
ಶಿವ ದೇವಸ್ಥಾನಕ್ಕೆ ಬಿಲ್ವಪತ್ರೆ ಸಮರ್ಪಣೆ ಮಾಡಿ

ಕನ್ಯಾ
ಮಾನಸಿಕ ನೆಮ್ಮದಿ ಕಾಣುವ ದಿನಗಳಿದ್ದಾವೆ. ಆದರೆ ಗುರು ಬಲ ಇಲ್ಲ, ಮುಂದಿನ ವರ್ಷದ ವರೆಗೆ ಕಾಯಲೇ ಬೇಕು, ಉದ್ಯೋಗಿಗಳೀಗ ಶುಭ ಸುದ್ದಿ ಇದೆ, ಕೆಲಸದಲ್ಲಿ ಬಡ್ತಿ ಸಿಗಲಿದೆ, ಹೀಗಾಗಿ ಸಮಾಧಾನಕರವಾಗಿರಲಿದೆ

ಪರಿಹಾರ
ಪ್ರತಿದಿನ ವಿಷ್ಣು ಸಹಸ್ರನಾಮ ಪಠಣ ಮಾಡಿ

ತುಲಾ
ಇದ್ದ ಗುರು ಬಲ,ಇನ್ನು ಮುಂದೆ ಕಳೆದುಹೋಗಲಿದೆ, ಯೋಗ ಗುರುಗಳಿಗೆ ಶುಭ ಫಲ, ಮುನ್ನುಗ್ಗುವ ಧೈರ್ಯದಿಂದ ಶುಭಫಲಗಳಿದ್ದಾವೆ,ನಿಮ್ಮ ರಾಶಿಯಿಂದ ಲಾಭಕ್ಕೆ ಗುರುವಿನ ದೃಷ್ಟಿ ಇರುವ ಕಾರಣ ವ್ಯಾಪಾರಿಗಳಿಗೆ ಲಾಭ ಸಮೃದ್ಧವಾಗುತ್ತದೆ.

ಪರಿಹಾರ
ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಮಾಡಿಸಿ

ವೃಶ್ಚಿಕ
ಶುಭಕಾಲ ಪ್ರಾರಂಭವಾಗಿದೆ, ಗುರು ಬಲ ತುಂಬಿರುವುದರಿಂದ ವಿವಾಹ ಕಾರ್ಯ ನಡೆಯಲಿದೆ, ಧನ ಸ್ಥಾನಕ್ಕೆ ಗುರು ಹೋಗಿರುವುದರಿಂದ ಧನ ಸಮೃಧ್ಧಿಯಾಗುತ್ತದೆ, ಸ್ನೇಹಿತರ ಸಹವಾಸ ಕೊಂಚ ಆತಂಕವನ್ನೂ ತರಲಿದೆ, ಉದ್ಯೋಗಿಗಳಿಗೆ ಬಡ್ತಿ, ಹೆಚ್ಚಿನ ಆದಾಯ ಸಿಗಲಿದೆ.

ಪರಿಹಾರ

ಹುತ್ತಕ್ಕೆ 11 ಪ್ರದಕ್ಷಿಣೆ ಹಾಕಿ

ಧನಸ್ಸು
ಇಷ್ಟು ದಿನ ವ್ಯಯದಲ್ಲಿ ಗುರು ಜನ್ಮಕ್ಕೆ ಬರುತ್ತಾನೆ, ಜನ್ಮದ ಗುರು ಶುಭ ಫಲವನ್ನೇ ತರಲಿದ್ದಾನೆ, ಧನಸ್ಸು ಗುರುವಿನ ಸ್ವಕೇತ್ರವೂ ಹೌದು ಹೀಗಾಗಿ ವೀರ್ಯವಂತರಾಗುವ ಕಾಲ, ನಿಮ್ಮ ಆಲೋಚನೆಗಳು ಸಾಕಾರಗೊಳ್ಳಲಿವೆ. ಹಿರಿಯರ ಸಹಕಾರ ಸಿಗಲಿದೆ, ಉದ್ಯೋಗಿಗಳಿಗೆ ಅದೃಷ್ಟ ದಿನ, ಹೆಚ್ಚಿನ ಧನ ಸಹಾಯವೂ ಆಗಲಿದೆ, ಶುಭ ದಿನಗಳು ನಿಮ್ಮದಾಗಲಿದೆ.

ಪರಿಹಾರ
ಮಣ್ಣಿನ ಹಣತೆಯಲ್ಲಿ ಕಡಲೆ ಎಣ್ಣೆ ಹಾಕಿ ಗುರುವಿಗೆ ದೀಪ ಹಚ್ಚಿ

ಮಕರ
ಇಷ್ಟು ದಿನ ಸಂಪೂರ್ಣ ಗುರುಬಲವಿತ್ತು, ಈಗ ಆ ಬಲ ಕಳೆದುಹೋಗಿದೆ. ವ್ಯಯದ ಗುರು ಕೊಂಚ ಬೌದ್ಧಿಕ ಶ್ರಮ ಕೊಡಲಿದ್ದಾನೆ, ಹೆಚ್ಚಿನ ಶ್ರಮ ಆದಾಯ ಕಡಿಮೆಯಂಥ ಫಲ ಕೊಡುತ್ತಾನೆ, ನಿಮ್ಮ ಸುಖ ಸ್ಥಾನಕ್ಕೆ ಗುರು ದೃಷ್ಟಿ ಇದೆ ಹಾಗಾಗಿ ಕೊಂದ ನೆಮ್ಮದಿ ದಿನಗಳೂ ಇದ್ದಾವೆ, ಗಾಬರಿ ಪಡುವ ಅವಶ್ಯಕತೆ ಇಲ್ಲ, ಸ್ನೇಹ ಭಾವ ಹೆಚ್ಚಾಗಲಿದೆ, ನಿಮ್ಮ ಉದ್ಯೋಗದಲ್ಲಿ ಕೊಂಚ ಬದಲಾವಣೆಯಾಗಲಿದೆ ಪರಿವರ್ತನಾ ದಿನಗಳಿದ್ದಾವೆ.

ಪರಿಹಾರ
ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಕುಂಭ
ಸಂಪೂರ್ಣ ಗುರುಬಲವಿದೆ, ಶುಭ ಲಾಭವನ್ನೇ ತರಲಿದ್ದಾನೆ ಗುರು, ವ್ಯಾಪಾರಿಗಳಿಗೆ ಅಧಿಕ ಲಾಭ, ಉಪನ್ಯಾಸಕರಿಗೆ ಹೆಚ್ಚಿನ ಪ್ರಶಂಸೆ, ಸಹೋದರರಲ್ಲಿ ಆತ್ಮೀಯತೆ ಹೆಚ್ಚಾಗುತ್ತದೆ, ಹೊಸ ವಸ್ತು ಖರೀದಿ ವಿದೇಶದಿಂದ ಶುಭ ವಾರ್ತೆ ಕೇಳುವ ದಿನಗಳಿದ್ದಾವೆ.

ಪರಿಹಾರ
ಪ್ರತಿ ಶನಿವಾರ ಶನೈಶ್ಚರ ಸ್ವಾಮಿಗೆ ನಮಸ್ಕಾರ ಹಾಕಿ

ಮೀನ
ಉದ್ಯೋಗಿಗಳಿಗೆ ಕಾರ್ಯ ಸಿದ್ಧಿ, ವಿದ್ಯಾರ್ಥಿಗಳಿಗೆ ಕಾಲಕ್ಕಿಂತ ಮುಂಚೆಯೇ ಶುಭ ಉದ್ಯೋಗ ಪ್ರಾಪ್ತಿ, ಸ್ತ್ರೀ-ಪುರುಷರಲ್ಲಿ ಸಾಮರಸ್ಯ ಹೆಚ್ಚಾಗಲಿದೆ, ಆನಾರೋಗ್ಯದಿಂದ ಬಳಲುತ್ತಿದ್ದವರು ಆರೋಗ್ಯದಲ್ಲಿ ಚೇತರಿಕೆ ಹೊಂದುತ್ತಾರೆ. ಮಹಾಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾಳೆ, ನಿಮ್ಮ ಸಂದೇಶಗಳಿಂದ ಹಲವು ಬಾಂಧವ್ಯ ವೃದ್ಧಿಯಾಗಲಿದೆ.

ಪರಿಹಾರ
ಗುರು ಚರಿತ್ರೆ ಓದಿ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top