ಸ್ವಾಮಿಯೇ ಅಯ್ಯಪ್ಪನ ಹಾಡಿನಿಂದ ಟ್ರೆಂಡ್ ಸೃಷ್ಟಿಸ್ತಿದೆ ಪುಕ್ಸಟ್ಟೆ ಲೈಫು.!

ಅಯ್ಯಪ್ಪನ ಮಹಿಮೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..ಸರ್ವ ಧರ್ಮ ಸಾರೋ ಹರಿಹರ ಸುತನಿಗೆ ದೇಶದಾದ್ಯಂತ ಲಕ್ಷಾಂತರ ಭಕ್ತರಿದ್ದಾರೆ.ಇನ್ನು ಅಯ್ಯಪ್ಪನ ಕುರಿತು ಅದೆಷ್ಟೋ ಹಾಡಿದ್ರು,ಅಯ್ಯಪ್ಪನ ಹಾಡು ಎಂದಾಕ್ಷಣ ನೆನಪಾಗೋದು ಹರಿವರಾಸನಂ ಹಾಡು..ಈಗ ಅಂತಹದ್ದೇ ಇನ್ನೋಂದು ಅಯ್ಯಪ್ಪನನ್ನು ಗುಣಗಾನ ಮಾಡೋ ಹಾಡೋಂದು ಸ್ಯಾಂಡಲ್ ವುಡ್ ನಲ್ಲಿ ಬಂದಿದ್ದು ಈ ಹಾಡು ಅಯ್ಯಪ್ಪ ಭಕ್ತರಿಗೆ ಇಷ್ಟವಾಗಲಿದೆ..ಹೌದು ಪುಕ್ಸಟೆ ಲೈಫು ಚಿತ್ರದ ಮೂಲಕ ಅಯ್ಯಪ್ಪನ ಭಕ್ತರಿಗೆ ಹೊಸದೊಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ.

ಪುಕ್ಸಟ್ಟೆ ಲೈಫು… ಸಂಚಾರಿ ವಿಜಯ್, ಅಚ್ಯುತ್ ಕುಮಾರ್ , ರಂಗಾಯಣ ರಘು, ಮಾತಂಗಿ ಪ್ರಸನ್ನ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ಸಿನಿಮಾ. ಸರ್ವಸ್ವ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಾಗರಾಜ್ ಸೋಮಯಾಜಿ ನಿರ್ಮಿಸಿರೋ ಈ ಚಿತ್ರವನ್ನ ಅರವಿಂದ್ ಕುಪ್ಳೀಕರ್ ನಿರ್ದೇಶಿಸಿದ್ದಾರೆ. ಅದೈತ ಗುರುಮೂರ್ತಿ ಛಾಯಾಗ್ರಹಣ, ವಾಸು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ.

ಪೂರ್ ಸೊತ್ತೇ ಇಲ್ಲ ಅನ್ನೋ ಟ್ಯಾಗ್ ಲೈನ್ ಇರೋ ಪುಕ್ಸಟ್ಟೆ ಲೈಫು ಚಿತ್ರದ ಅಯಪ್ಪನ ಭಜನೆ ಹಾಡು ಇತ್ತೀಚೆಗಷ್ಟೇ ಸರ್ವಸ್ವ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಜೊತೆಗೆ ಎಲ್ಲಾ ಅನ್ ಲೈನ್ ಮ್ಯೂಸಿಕ್ ಫ್ಲಾಟ್ ಫಾರಂ ಹಾಗೂ ಎಫ್ ಎಮ್ ಗಳಲ್ಲಿ ಈ ಹಾಡು ಪ್ರಸಾರ ಆಗ್ತಿದ್ದು, ಕೇಳುಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಕ್ತಿದೆ. ಈಗಾಗ್ಲೇ ಹಲವರು ಹೆಲೋ ಟ್ಯೂನ್ಸ್ ರಿಂಗ್ ಟೋನ್ಸ್ ಆಗಿ ಸ್ವಾಮಿ ಅಯ್ಯಪ್ಪನ ಭಜನೆ ರಿಂಗಣಿಸ್ತಿದೆ. ಅಯ್ಯಪ್ಪನ ಭಜನೆಯನ್ನ ಈಗಿನ ಮ್ಯೂಸಿಕ್ ಟ್ರೆಂಡಿಗೆ ತಕ್ಕಂತೆ ವಾಸು ದೀಕ್ಷಿತ್ ಕಂಪೋಸ್ ಮಾಡಿದ್ದಾರೆ.
ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಮತ್ತು ವಾಸು ದೀಕ್ಷಿತ್ ಹಾಡಿರೋ ಈ ಹಾಡು ಕೇಳೋದಕ್ಕೆ ಸಖತ್ ಮಜವಾಗಿದೆ. ಟ್ರೆಂಡಿಯಾಗಿದೆ. ಪುಕ್ಸಟ್ಟೆ ಲೈಫು ಚಿತ್ರದಲ್ಲಿ ಈ ಭಜನೆ ಹಾಡು ಪ್ರಮುಖವಾಗಿ ಕಾಣಸಿಗುತ್ತೆ. ಕೇಳಸಿಗುತ್ತೆ. ವಿಶಿಷ್ಠ ಕಥಾಹಂದರವಿರೋ ಈ ಚಿತ್ರದಲ್ಲಿ ಎಲ್ಲಾ ಹಾಡುಗಳು ಕಥೆಯ ಜೊತೆಜೊತೆ ಸಾಗುತ್ತವಂತೆ. ಅಂದ್ಹಾಗೆ ಪುಕ್ಸಟ್ಟೆ ಲೈಫು ಚಿತ್ರತಂಡ ಈ ಭಜನೆ ಹಾಡಿನ ಲಿರಿಕಲ್ ವಿಡಿಯೋವನ್ನ ರಿಲೀಸ್ ಮಾಡೋ ಮೂಲಕ ಪ್ರಚಾರ ಕಾರ್ಯವನ್ನ ಶುರುಮಾಡಿದ್ದು, ಸದ್ಯಕ್ಕೆ ಈ ಹಾಡು ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top