20 ಶತ್ರುಗಳನ್ನು ಕೊಂದಿದ್ದೇನೆ. ಈಗ 50 ಶತ್ರುಗಳನ್ನು ಕೊಲೆ ಮಾಡುತ್ತೇನೆ !!! Viral Video

pubg addiction gone wrong

ಈ ಪಬ್‌ ಜಿ ಗೇಮ್‌ ಯಾವ ರೀತಿಯಾಗಿದೆ ಅಂದ್ರೆ, ಈ ಆಟಕ್ಕೆ ದಾಸರಾದವರು, ಯಾವುದೇ ಊಟ ತಿಂಡಿ ಇಲ್ಲದೇ ತನ್ನ ಪಾಡಿಗೆ ತಾನೇ ಮಾತನಾಡಿಕೊಂಡು ಆಟವಾಡುತ್ತ ಕುಳಿತು ಬಿಡುತ್ತಾರೆ. ಇನ್ನು ಕೆಲವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ರೋಡಿನಲ್ಲಿ ನಾನು ಚಿಕನ್‌ ಡಿನ್ನರ್‌ ಪಡಿಬೇಕು ಇನ್ನು ಎರಡು ಶೂಟ್‌ ಬಾಕಿ ಇದೆ ಅಂತ ಆಟವಾಡುವುದನ್ನು ನೋಡಿದ್ದೇವೆ, ಈಗ ಅಂತಹದ್ದೇ ಇನ್ನೊಂದು ವಿಚಿತ್ರ ಘಟನೆ ಆಂಧ್ರಪ್ರದೇಶದ ಹೈದರಬಾದ್‌ನ ಕರೀಂನಗರದಲ್ಲಿ ನಡೆದಿದೆ, ಪಬ್‌ಜಿ ಗೇಮ್‌ ದಾಸನಾಗಿದ್ದ ಯುವಕನೊಬ್ಬ ಸೈನಿಕರ ರೀತಿ ಉಡುಪನ್ನು ಧರಿಸಿ, ಕೈಯಲ್ಲಿ ಡಮ್ಮಿ ಗನ್‌ ಹಿಡಿದುಕೊಂಡು ರಸ್ತೆಯಲ್ಲಿ ಶತ್ರುಗಳ ನಾಶಕ್ಕೆ ನಿಂತಿದ್ದಾನೆ,

ಇನ್ನು ತಾನು ರಸ್ತೆಯಲ್ಲಿ ಈ ರೀತಿ ಹುಚ್ಚನ ರೀತಿ ಆಡುವುದು ತಪ್ಪು ಅನ್ನೋ ಅರಿವು ಇಲ್ಲದೇ ಈತ ಡಮ್ಮಿ ಗನ್‌ ಹಿಡಿದು ಓಡಾಡುತ್ತಿದ್ದಾನೆ. ಇನ್ನು ಈ ರೀತಿ ರಸ್ತೆಯಲ್ಲಿ ಯುವಕ ಮಾಡುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬ ತನ್ನ ಮೊಬೈಲ್‌ನಲ್ಲಿ ವಿಡಿಯೋ ಕೂಡ ಮಾಡಿದ್ದಾನೆ. ಇನ್ನು ಈ ವೇಳೆ ಆತ ಆ ಯುವಕನನ್ನು ಮಾತನಾಡಿಸಿದ್ದು, ನೀನು ಯಾಕೆ ಹೀಗೆ ಗನ್‌ ಹಿಡಿದುಕೊಂಡು ಏನು ಮಾಡುತ್ತಿದ್ದೀಯಾ..? ಪಬ್‌ಜಿ ಆಟ ಆಡುತ್ತಿದ್ದೀಯಾ ಎಂದು ಕೇಳಿದಾಗ ಯುವಕ ಹೌದು ಆಡುತ್ತಿದ್ದೇನೆ ಎಂದು ಹೇಳಿದ್ದಾನೆ. ಇನ್ನು ಎಷ್ಟು ವರ್ಷದಿಂದ ಆಡುತ್ತಿದ್ದೀಯಾ ಅಂತ ಕೇಳಿದಾಗ ಒಂದು ವರ್ಷದಿಂದ ಆಡುತ್ತಿದ್ದೇನೆ ಎಂದು ಹೇಳಿದ್ದಾನೆ. ಯಾಕೆ ಗನ್‌ ಹಿಡಿದು ಹೀಗೆ ಓಡಾಡುತ್ತಿದ್ದೀಯಾ ಅಂತ ಹೇಳಿದ್ದು ಅದಕ್ಕೆ ಆತ ನಾನು ಇದುವರೆಗೂ 20 ಶತ್ರುಗಳನ್ನು ಕೊಂದಿದ್ದೇನೆ. ಈಗ 50 ಶತ್ರುಗಳನ್ನು ಕೊಲೆ ಮಾಡುತ್ತೇನೆ ಎಂದು ಹೇಳಿದ್ದಾನೆ.

ಸದ್ಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಯಾರು ಪಬ್‌ಜಿ ಆಡಬೇಡಿ, ನಿಮ್ಮ ಭವಿಷ್ಯವನ್ನು ಈ ಯುವಕನ ರೀತಿ ಹಾಳು ಮಾಡಿಕೊಳ್ಳ ಬೇಡಿ ಎಂದು ಕಮೆಂಟ್‌ ಕೂಡ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top