ಪ್ರಿಯಾಂಕ ಛೋಪ್ರ ತನ್ನ ಬರ್ತ್‍ಡೇಗೆ ಕತ್ತರಿಸಿದ ಕೇಕ್ ಬೆಲೆ ಎಷ್ಟು ಲಕ್ಷ ಗೊತ್ತಾ.?

priyanka-birthday

ಬಾಲಿವುಡ್ ಕ್ವೀನ್ ಪ್ರಿಯಾಂಕ ಚೋಪ್ರಾ ತನಗಿಂತ ಸಣ್ಣ ವಯಸ್ಸಿನ ಹುಡುಗ ನಿಕ್ ಜೊತೆ ಮದುವೆಯಾಗಿ ಅತ್ಯಂತ ಸಂಭ್ರಮದಿಂದ ಜಾಲಿ ಮೂಡ್‍ನಲ್ಲಿ ಜೀವನ ನಡೆಸುತ್ತಿದ್ದಾರೆ, ಇನ್ನು ಮದುವೆಯಾಗಿ ಮೊದಲನೇ ಹುಟ್ಟುಹಬ್ಬ ಆಚರಿಸಿಕೊಂಡಿರೋ ಪ್ರಿಯಾಂಕಾ ಈಗ ಎಲ್ಲರ ಬಾಯಿಗೆ ಸುದ್ದಿಯಾಗಿದ್ದಾರೆ. ಹೌದು ಮಿಯಾಮಿಯಲ್ಲಿ ತಮ್ಮ ಕುಟುಂಬದ ಜೊತೆ ಟ್ರಿಪ್ ಮೂಡ್‍ನಲ್ಲಿರೋ ಪ್ರಿಯಾಂಕಾ ತಮ್ಮ ತಾಯಿ ಜೊತೆ ಸಿಗರೇಟ್ ಸೇದುತ್ತಿರೋ ಫೋಟೋ ಸಖತ್ ವೈರಲ್ ಆಗಿ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿತ್ತು.

ಆದ್ರೆ ಈ ಬಾರಿ ಪ್ರಿಯಾಂಕ ಸುದ್ದಿಯಾಗಿರೋದು ತಾವು ಕತ್ತರಿಸಿದ ಕೇಕ್ ಮೂಲಕ ಹೌದು ತಮ್ಮ ಹುಟ್ಟುಹಬ್ಬವನ್ನು ಕುಟುಂಬದವರ ಜೊತೆ ಮಿಯಾಮಿಯಲ್ಲಿ ಆಚರಿಕೊಂಡ ಪ್ರಿಯಾಂಕ ಬರ್ತ್‍ಡೇಗೆ ಕಟ್ ಮಾಡಿದ ಕೇಕ್ ಬೆಲೆ ಬರೋಬ್ಬರಿ ಮೂರುವರೆ ಲಕ್ಷ ರೂಪಾಯಿಯಂತೆ..! ಹೀಗಂತ ಮಾಧ್ಯಮ ಒಂದರಲ್ಲಿ ಸುದ್ದಿ ಪ್ರಸಾರವಾಗಿದೆ,
ಕೆಂಪು ಬಣ್ಣದ ಬಟ್ಟೆ ತೊಟ್ಟು ಬಟ್ಟೆಯ ಬಣ್ಣ ಹೊಂದುವಂತಹ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಪ್ರಿಯಾಂಕ ಆ ಕೇಕ್ ಬೆಲೆ 3.50000ಲಕ್ಷ ರೂಪಾಯಿಯಾಗಿದ್ದು ಈಗ ಮತ್ತೆ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ ಪ್ರಿಯಾಂಕ,

ಇನ್ನು ಈ ಕೇಕ್ ವಿಶೇಷತೆಯೆಂದರೆ, ಇದು ಒಟ್ಟು 5 ಸ್ಟೆಪ್‍ನ ಕೇಕ್ ಆಗಿದ್ದು, ಕೆಂಪು ಬಣ್ಣದ ಹಾಗೂ ಗೋಲ್ಡ್ ಕಾಂಬಿನೇಷನ್ ಕೇಕ್‍ಗೆ ಮಾಡಲಾಗಿದೆ, ಮಿಯಾಮಿಯ ಡಿವೈನ್ ಡೆಲಿಕೆಸಿ ಈ ಕೇಕ್ ಅನ್ನು ತಯಾರು ಮಾಡಿದ್ದು , ಇದರ ಬೆಲೆ 5000 ಯುಎಸ್ ಡಾಲರ್ ಅಂದರೆ ಭಾರತೀಯ ಹಣದ ಬೆಲೆ ಪ್ರಕಾರ 3.45ಲಲಕ್ಷ ರೂಪಾಯಿ ಯಾಗಲಿದೆ, ಈ ಕೇಕ್ ತಯಾರು ಮಾಡಲು 24ಗಂಟೆ ತಗುಲಿದೆಯಂತೆ ಒಟ್ಟಿನಲ್ಲಿ ಸೆಲೆಬ್ರಿಟಿಗಳು ಏನ್ ಮಾಡಿದ್ರು ಸುದ್ದಿಯಾಗೋ ಈ ಟೈಂನಲ್ಲಿ ಪ್ರಿಯಾಂಕ ಚೋಪ್ರ ಕತ್ತರಿಸಿದ ಕೇಕ್ ಕೂಡ ಸುದ್ದಿಯಾಗಿರೋದು ಈಗ ವಿಶೇಷವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top