ಬರ್ತ್ ಡೇ ಖುಷಿಯಲ್ಲಿ ಪ್ರೇಮ್ಸ್ .. ಕುಣಿದು ಕುಪ್ಪಳಿಸಿದ ರಕ್ಷಿತಾ,ರಚಿತಾ..!

prems birthday

ಸ್ಯಾಂಡಲ್‍ವುಡ್‍ನ ಶೋ ಮ್ಯಾನ್ ಪ್ರೇಮ್ಸ್ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ, ಇದೇ ವೇಳೆ ನಿನ್ನೆ ರಾತ್ರಿ ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಚರಿಸಲಾಗಿತ್ತು, ಬರ್ತ್ ಡೇ ಖುಷಿಯಲ್ಲಿದ್ದ ಪ್ರೇಮ್ಸ್ ಅವರಿಗೆ ಸಪ್ರೈಸ್ ಗಿಫ್ಟ್ ಕೊಟ್ರು ರಕ್ಷಿತಾ ಪ್ರೇಮ್ ಮತ್ತು ರಚಿತಾ ರಾಮ್ ಹೌದು ಪ್ರೇಮ್ ಬರ್ತ್ ಡೇ ಗೆ ರಕ್ಷಿತಾ ಮತ್ತು ರಚಿತಾ ರಾಮ್ ಇಬ್ಬರು ಸುಂಟರಗಾಳಿ ಹಾಡಿಗೆ ಡ್ಯಾನ್ಸ್ ಮಾಡೋ ಮೂಲಕ ಬರ್ತ್ ಡೇ ವಿಶ್ ಮಾಡಿದ್ರು, ಸದ್ಯ ಪ್ರೇಮ್ ಏಕ್ ಲವ್ ಯಾ ಸಿ‌ನಿಮಾದ ಶೂಟಿಂಗ್ ನಲ್ಲಿ ಬ್ಯೂಸಿ ಇದ್ದು ಇದಕ್ಕಾಗಿ ಮೈಸೂರಿನಲ್ಲೇ ಇದ್ದಾರೆ, ರಕ್ಷಿತಾ ಸಹೋದರ ರಾಣ ಮೊದಲ ಬಾರಿಗೆ ತೆರೆ ಮೇಲೆ ನಾಯಕನಾಗಿ ರೆಡಿಯಾಗಿರೋ ಚಿತ್ರದಲ್ಲಿ ರಚಿತಾ ರಾಮ್ ಕೂಡ ನಟಿಸ್ತಾ ಇದ್ದಾರೆ ಅನ್ನೋದು ವಿಶೇಷ..

ಈಗಾಗ್ಲೇ ಚಿತ್ರದ ಬಹು ಪಾಲು ಶೂಟಿಂಗ್ ಮುಗಿದಿದೆ. ಇನ್ನು ಬರ್ತ್ ಡೇ ಮೂಡ್ ನಲ್ಲಿರೋ ಪ್ರೇಮ್ ಗೆ ವಿಲನ್ ಸಿನಿಮಾದ ಹಾಡನ್ನು ಹಾಡೋ ಮೂಲಕ ರಚಿತಾ ರಾಮ್ ಬರ್ತ್ ಡೇ ಪಾರ್ಟಿಯನ್ನು ಇನ್ನಷ್ಟು ಕಲರ್ ಫುಲ್ ಮಾಡಿದ್ರೆ.. 42 ನೇ ವಸಂತಕ್ಕೆ ಕಾಲಿಟ್ಟಿರೋ ಶೋ ಮ್ಯಾನ್ ಪ್ರೇಮ್ಸ್ ಅವರಿಗೆ ನಮ್ ಕಡೆಯಿಂದಾನೂ ಹುಟ್ಟುಹಬ್ಬದ ಶುಭಾಶಯಗಳು

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top