ಥಿಯೇಟರ್ ನಿಂದ ಅರ್ಧಕ್ಕೆ ಎದ್ದು ಹೋದ ನಿರ್ದೇಶಕ ಪ್ರೇಮ್..!

ಸ್ಯಾಂಡಲ್‌ವುಡ್ ನ ಬಹುನಿರೀಕ್ಷಿತ ಚಿತ್ರ ದಿ ವಿಲನ್ ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದ್ದು ಅಭಿಮಾನಿಗಳು ಇಬ್ಬರು ಸ್ಟಾರ್ ನಟರನ್ನು ಒಂದೇ ಸ್ಕ್ರೀನ್ ನಲ್ಲಿ ನೋಡಿ ಹಬ್ಬವನ್ನ ಆಚರಿಸುತ್ತಿದ್ದಾರೆ. ಥಿಯೇಟರ್ ಮುಂದೆ ಬೆಳಗಿನ ಜಾವದಿಂದಲೇ ಅಭಿಮಾನಿಗಳು ಜಮಾಯಿಸಿದ್ದು ತಮ್ಮ ನೆಚ್ಚಿನ ನಟನ ಕಟೌಟ್ ಗೆ ಹಾಲಿನ ಅಭಿಷೇಕ ಮತ್ತು ಹೂವಿನ ಹಾರಗಳನ್ನು ಹಾಕಿ ಸಂಭ್ರಮಿದ್ರು..
ಅಸಮದಾನ ವ್ಯಕ್ತಪಡಿಸಿದ ಪ್ರೇಮ್..!
ಇನ್ನು ನರ್ತಕಿ ಥಿಯೇಟರ್ ನಲ್ಲಿ ಫಸ್ಟ್ ಶೋ ವೀಕ್ಷಿಸಲು ಬಂದ ಸಿನಿಮಾ ರಸಿಕರಿಗೆ ಬೇಸರವಾಗಿದ್ದು ಚಿತ್ರದ ಸೌಂಡ್ ಎಫೆಕ್ಟ್ ಸರಿಯಾಗಿ ಬರದ ಕಾರಣ ಅಭಿಮಾನಿಗಳು ಬೇಸರಗೊಂಡರು ಇನ್ನು ಥಿಯೇಟರ್ ಗೆ ಭೇಟಿಕೊಟ್ಟಿದ್ದ ನಿರ್ದೇಶಕ ಪ್ರೇಮ್ ಥಿಯೇಟರ್ ನ ಸೌಂಡ್ ಎಫೆಕ್ಟ್ ಸಮಸ್ಯೆ ಕಂಡು ಥಿಯೇಟರ್ ಮಾಲೀಕರ ಮೇಲೆ ಗರಂ ಆದ್ರು ಕಷ್ಟ ಪಟ್ಟು ಸಿನಿಮಾ ಮಾಡಿದ್ದೇವೆ ಈ ರೀತಿ ಥಿಯೇಟರ್ ಮೇಂಟೇನ್ ಮಾಡದೆ ಚಿತ್ರಕ್ಕೆ ಸಮಸ್ಯೆ ಮಾಡಿ ನಮ್ಮ ಶ್ರಮವನ್ನು ವ್ಯರ್ಥಮಾಡುತ್ತಿದ್ದೀರಾ ಅಂತ ಥಿಯೇಟರ್ ಮಾಲೀಕರ ಮೇಲಯೇ ಅಸಮಾಧಾನ ಹೊರಕಾಕಿದ್ರು…
ಅಭಿಮಾನಿಗಳಿಗೆ ಕೈ ಮುಗಿದ ಪ್ರೇಮ್..!
ಇನ್ನು ಚಿತ್ರ ವೀಕ್ಷಿಸುತ್ತಿರುವ ಅಭಿಮಾನಿಗಳಿಗೆ ಕೈ ಮುಗಿದು ಬೇಡಿಕೊಂಡ ಪ್ರೇಮ್ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ ದಯವಿಟ್ಟು ಮೊಬೈಲ್ ಗಳಲ್ಲಿ ಸಿನಿಮಾ ಚಿತ್ರಿಕರಿಸಿ ಸಿನಿಮಾಗೆ ನಷ್ಟ ಮಾಡಬೇಡಿ ಎಂದು ಅಭಿಮಾನಿಗಳಿಗೆ ಕೈ ಮುಗಿದಯ ಬೇಡಿಕೊಂಡರು..

ಅಪ್ಪನ‌ ಚಿತ್ರ ನೋಡಿದ ಮಗಳು ನಿವೇದಿತಾ..!
ಇನ್ನು ಅಪ್ಪನ ಸಿನಿಮಾ ನೋಡಲು ನರ್ತಕಿ ಥಿಯೇಟರ್ ಗೆ ಫಸ್ಟ್ ಶೋ ನೋಡಲು ಶಿವರಾಜ್ ಕುಮಾರ್ ಪುತ್ರಿ ನಿವೇದಿತಾ ಅಗಮಿಸಿದ್ರು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top