ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ಯುವಕರಿಗೆ ಡಾಕ್ಟರ್ ಮಾಡಿದ್ದೇನು ಗೊತ್ತಾ.?

ಕೆಲವೊಮ್ಮೆ ಎಂತಂತದ್ದೊ ಯಡವಟ್ಟುಗಳು ನಮ್ಮ ನಡುವೆಯೇ ಆಗಿ ಹೋಗ್ತಾವೆ, ಅದರಲ್ಲೂ ಡಾಕ್ಟರ್ ಗಳು ಏನಾದ್ರು ಯಡವಟ್ಟು ಮಾಡಿ ಬಿಟ್ರೆ ಮುಗಿದೆ ಹೋಯ್ತು ನಮ್ಮ ಜೀವನವೇ ಅಂತ್ಯವಾದಂತೆ, ಅದೆಷ್ಟೋ ಯಡವಟ್ಟು ಡಾಕ್ಟರ್ ಕೈನಿಂದಲೂ ಆಗಿರ್ತಾವೆ, ಅಪರೇಷನ್ ಮಾಡುವಾಗ ಸೂಜಿ ಅಥವಾ ಕತ್ತರಿ ಹೊಟ್ಟೆ ಒಳಗೆ ಬಿಟ್ಟು ಯಡವಟ್ಟು ಮಾಡಿರೋ ಘಟನೆ ನಡೆದಿರೋದ‌ನ್ನು ನಾವು ಕೇಳಿರ್ತಿವಿ, ಆದ್ರೆ ಇಲ್ಲೊಂದು ಘಟನೆ ಕೇಳಿದ್ರೆ ನೀವೂ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳೋದು ಗ್ಯಾರಂಟಿ..!

ಹೌದು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದ ಇಬ್ಬರು ಯುವಕರಿಗೆ ಡಾಕ್ಟರ್ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ಹೇಳಿದ ಘಟನೆ ಜಾರ್ಖಂಡ್ ನ ಚತ್ರ್ ಜಿಲ್ಲೆಯಲ್ಲಿ ನಡೆದಿದೆ.. ಸಿಮಾರಿಯಾ ರೆಫರೆಲ್ ಸರ್ಕಾರಿ ಆಸ್ಪತ್ರೆಗೆ ಗೋಪಾಲ್ ಗಂಜು ಮತ್ತು ಕಾಮೇಶ್ವರ್ ಗಂಜು ಹೊಟ್ಟೆ ನೋವೆಂದು ಡಾ.ಮುಕೇಶ್ ಬಳಿ ತೋರಿಸಲು ಹೋಗಿದ್ದಾರೆ, ಈ ವೇಳೆ ಡಾಕ್ಟರ್ ಬೇಕಾಬಿಟ್ಟಿ ಪರೀಕ್ಷೆ ಮಾಡಿ ಇಬ್ಬರಿಗೂ ಎಚ್ ಐ ವಿ,ಎಚ್ ಸಿ ವಿ,ಸಿಬಿಸಿ,ಎಚ್ ಎಚ್ 2 ಮತ್ತು ಎಎನ್ ಸಿ ಪರೀಕ್ಷೆ ಮಾಡಿಕೊಂಡು ಬನ್ನಿ ಜೊತೆಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿಕೊಂಡು ಬನ್ನಿ ಎಂದು ಚೀಟಿ ಬರೆದುಕೊಟ್ಟಿದ್ದಾರೆ, ಇನ್ನು ಈ ಇಬ್ಬರು ಯುವಕರು ಟೆಸ್ಟ್ ಗೆಂದು ಲ್ಯಾಬ್ ಗೆ ಕೂಡ ಹೋಗಿದ್ದಾರೆ, ಈ ವೇಳೆ ಇದು ಪ್ರೆಗ್ನೆನ್ಸಿ ಟೆಸ್ಟ್ ಮಹಿಳೆಯರಿಗೆ ಮಾಡಿಸೋ ಟೆಸ್ಟ್ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಯುವಕರು ಟೆಸ್ಟ್ ಮಾಡಿಸದೆ ಹಾಗೇ ಮನೆಗೆ ಹೋಗಿದ್ದಾರೆ, ಇನ್ನು ಈ ವಿಷಯವನ್ನು ಊರಿನಲ್ಲಿ ಹೇಳಿದ್ದಾರೆ ಈ ಸುದ್ದಿ ಒಬ್ಬರಿಂದ ಒಬ್ಬರಿಗೆ ಹೋಗಿ ವೈರಲ್ ಕೂಡ ಆಗಿತ್ತು,ಈ ವಿಷಯದ ಕುರಿತು ಡಾಕ್ಟರ್ ಮುಕೇಶ್ ಇದೆಲ್ಲಾ ಸುಳ್ಳು ,ನನ್ನ ಹೆಸರು ಹಾಳು ಮಾಡಲು ಈ ರೀತಿ ಮಾಡುತ್ತಿದ್ದಾರೆ,ನಾನು ತಪ್ಪು ಮಾಡಿಲ್ಲ ಅಂತ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top