ವರುಣನ ಆರ್ಭಟಕ್ಕೆ ಕೊಚ್ಚಿ ಹೋಗ್ತಿದೆ ಇಡೀ ಜಪಾನ್ ದೇಶ..!

pray for japan

ಪ್ರಪಂಚದ ನಾನಾ ಕಡೆ ವರುಣನ ಆರ್ಭಟಕ್ಕೆ ಅದೆಷ್ಟೋ ನಗರಗಳು ಕೊಚ್ಚಿಕೊಂಡು ಹೋಗ್ತಾ ಇದೆ, ದಿನೇ ದಿನೇ ವರುಣನ ಆರ್ಭಟ ಜೋರಾಗ್ತಾನೆ ಇದೆ, ಭಾರತದಲ್ಲೂ ವರುಣನ ಆರ್ಭಟಕ್ಕೆ ಕರ್ನಾಟಕ ಸೇರಿದಂತೆ ದೇಶದ ಹಲವು ನಗರಗಳು ಜಲಾವೃತವಾಗಿ ಹೋಗಿದೆ, ಮಳೆಗೆ ಅದೆಷ್ಟೋ ಆಸ್ತಿ ಪಾಸ್ತಿಗಳು ಸಹ ಕೊಚ್ಚಿಕೊಂಡು ಹೋಗಿದೆ, ವರುಣನ ಅವಕೃಪೆಗೆ ಇಡೀ ಜಗತ್ತೆ ಗುರಿಯಾದ ರೀತಿ ಕಾಣ್ತಾ ಇದೆ, ಇನ್ನು ಜಪಾನ್‍ನಲ್ಲೂ ಸಹ ವರುಣನ ಅರ್ಭಟ ಜೋರಾಗಿದ್ದು, ಇಡೀ ದೇಶವೇ ಜಲಾವೃತವಾಗೋ ಎಲ್ಲಾ ಲಕ್ಷಣಗಳು ಕಾಣ್ತಾ ಇದೆ, ವರುಣನ ಜೊತೆಯಲ್ಲಿ ಗಾಳಿಯು ಸಹ ಅಷ್ಟೇ ರಭಸವಾಗಿ ಬರುತ್ತಿದ್ದು, ಇಡೀ ಜಪಾನ್ ಈಗ ಅಕ್ಷರ ಸಹ ಕಂಗಾಲಾಗಿ ಹೋಗಿದೆ, ನೋಡ ನೋಡುತ್ತಿದ್ದಂತೆ ಚಲಿಸುತ್ತಿದ್ದ ಕಾರು ಗಾಳಿ ಸಹಿತ ಮಳೆಗೆ ಹಾರಿಕೊಂಡು ಹೋಗುತ್ತಿರೋ ದೃಶ್ಯಗಳನ್ನು ನೋಡ್ತಾ ಇದ್ರೆ ಇದು ಅಪಾಯದ ಮುನ್ಸೂಚನೆ ಅನ್ನೋ ಹಾಗೇ ಕಾಣಿಸುತ್ತಿದ್ದೆ, ಜಪಾನಿನಲ್ಲಿ ಎಲ್ಲೇ ನೋಡಲಿ ಮಳೆಯ ಆರ್ಭಟಕ್ಕೆ ಮನೆಯ ಮೇಲ್ಛಾವಣಿ ಸಹ ಗಾಳಿಗೆ ಹಾರಿಕೊಂಡು ಹೋಗುತ್ತಿದ್ದು, ಜನರು ಜೀವನ ನಡೆಸಲು ಕಷ್ಟವಾಗೋ ಪರಿಸ್ಥಿತಿ ಉಂಟಾಗುತ್ತಿದೆ. ಜಪಾನ್ ಹೇಳಿ ಕೇಳಿ ಅತೀ ಹೆಚ್ಚು ಸಾರಿ ಸುನಾಮಿ ಹೊಡೆತಕ್ಕೆ ಸಿಲುಕಿರೋ ದೇಶ ಈಗ ವರುಣನ ಅವಕೃಪೆ ಒಂದು ಕಡೆ ಗಾಳಿ ಅರ್ಭಟ ಇನ್ನೊಂದು ಕಡೆ ಈ ಎರಡರ ಅವಕೃಪೆಗೆ ಈಗ ಜಪಾನ್ ಸಿಲುಕಿದ್ದು ಜನರ ಸ್ಥಿತಿಯಂತು ಈಗ ಶೋಚನೀಯವಾಗಿದೆ.

ರಾಜಧಾನಿ ಟೋಕಿಯೋ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಭೂ ಕುಸಿತ ಉಂಟಾಗುತ್ತಿದೆ. ಫೆಸಿಫಿಕ್​ ಸಾಗರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಹಿಗಿಬೀಸ್​ ಚಂಡಮಾರುತ ಜಪಾನ್​ಗೆ ಅಪ್ಪಳಿಸಿದೆ. ಮಳೆಗೆ ಓರ್ವ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅನೇಕರ ಜನ – ಜೀವನ ಅಸ್ತವ್ಯಸ್ಥಗೊಂಡಿದೆ. ಹಿಗಿಬೀಸ್​ ಚಂಡಮಾರುತ ಮುನ್ಸೂಚನೆಯನ್ನು ಒಂದು ವಾರದ ಮುಂಚೆಯೇ ನೀಡಲಾಗಿದ್ದು, ಜನರಿಗೆ ಮನೆ ಬಿಟ್ಟು ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಮುನ್ಸೂಚನೆಯಂತೆ ಚಂಡ ಮಾರುತ ಬೀಸಿದ್ದು, ಜನ ಜೀವನ ಸಂಪೂರ್ಣವಾಗಿ ಹದಗೆಟ್ಟಿದೆ.

ಜಪಾನ್ ಹೇಳಿ ಕೇಳಿ ಅತೀ ಹೆಚ್ಚು ಸಾರಿ ಸುನಾಮಿ ಹೊಡೆತಕ್ಕೆ ಸಿಲುಕಿರೋ ದೇಶ ಈಗ ವರುಣನ ಅವಕೃಪೆ ಒಂದು ಕಡೆ ಗಾಳಿ ಅರ್ಭಟ ಇನ್ನೊಂದು ಕಡೆ ಈ ಎರಡರ ಅವಕೃಪೆಗೆ ಈಗ ಜಪಾನ್ ಸಿಲುಕಿದ್ದು ಜನರ ಸ್ಥಿತಿಯಂತು ಈಗ ಶೋಚನೀಯವಾಗಿದೆ.

ಸದ್ಯ ಜಪಾನಿನಲ್ಲಿ ಇರುವ ಈಗಿನ ಪರಿಸ್ಥಿತಿಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು, ವಿಡಿಯೋ ನೋಡಿದ ಜನ ಮುಂದೇನಪ್ಪ ಪರಿಸ್ಥಿತಿ ಅನ್ನೋ ಹಾಗೆ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top