ಪ್ರವಾಹದ ನೀರಿನಲ್ಲಿ ಫೋಟೋ ಶೂಟ್ ಮಾಡಿಸಿದ ಫ್ಯಾಷನ್ ಬೆಡಗಿ..!

ದೇಶದಲ್ಲಿ ಹಲವೆಡೆ ವರುಣನ ಆರ್ಭಟಕ್ಕೆ ಅಕ್ಷರ ಸಹ ನೀರಿನಲ್ಲಿ ಅದೆಷ್ಟೋ ಪ್ರದೇಶಗಳು ಕೊಚ್ಚಿ ಹೋಗಿವೆ, ಬಿಹಾರದಲ್ಲಿ ಪ್ರವಾಹದ ಪರಿಸ್ಥಿತಿ ಇನ್ನು ದೊಡ್ಡ ಮಟ್ಟದಲ್ಲಿದ್ದು ಅಲ್ಲಿನ ಜನರ ಜೀವನ ಸಂಪೂರ್ಣ ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಿರುವಾಗಲೇ ಫ್ಯಾಷನ್ ಲೋಕದ ಬೆಡಗಿಯೊಬ್ಬಳು ಪ್ರವಾಹದ ನೀರಿನ ಮಧ್ಯೆ ನಿಂತು ಫೋಟೋ ಶೂಟ್ ಮಾಡಿಸಿ ಈಗ ಟೀಕೆಗೆ ಗುರಿಯಾಗಿದ್ದಾಳೆ.

ಅದಿತಿ ಸಿಂಗ್ ನೀರಿನಲ್ಲಿ ನಿಂತು ಫೋಟೋ ಶೂಟ್ ಮಾಡಿಸಿದ ಬೆಡಗಿ ಇನ್ನು ಈ ಹುಡುಗಿ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವಿದ್ಯಾಥಿಯಾಗಿದ್ದು, ಪ್ರವಾಹದ ನೀರಿನಲ್ಲಿ ಫೋಟೋ ಶೂಟ್ ಮಾಡಿಸಿದ್ದಾಳೆ, ಇನ್ನು ಆಕೆಯ ಫೋಟೋವನ್ನು ತೆಗೆದಿದ್ದ ಫೋಟೋಗ್ರಾಫರ್ ಆ ಫೋಟೋಗಳನ್ನ ಫೇಸ್‍ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾನೆ, ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ ಆ ಫೋಟೋಗಳು ವೈರಲ್ ಆಗಿದೆ, ಇನ್ನು ಬಿಹಾರದ ಈಗಿನ ಪರಿಸ್ಥತಿಯನ್ನು ವಿಭಿನ್ನವಾಗಿ ತೋರಿಸುವ ಸಲುವಾಗಿ ಈ ಫೋಟೋಶೂಟ್ ಮಾಡಿದ್ದಾರೆ ಅದರ ಜೊತೆಯಲ್ಲಿ `ಮರ್‍ಮೇಡ್ ಇನ್ ಡಿಸಾಸ್ಟರ್’ ಅನ್ನೋ ಟ್ಯಾಗ್‍ಲೈನ್ ಅನ್ನು ಫೋಟೋ ಜೊತೆ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿತ್ತು,ಇನ್ನು ಈ ಫೋಟೋ ವೈರಲ್ ಆಗುತ್ತಿದ್ದಂತೆ ಫೋಟೋಗ್ರಾಫರ್ ಕಾನ್ಸೆಪ್ಟ್ ಗೆ ಕೆಲವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರೆ ಇನ್ನ ಕೆಲವರು ಪ್ರವಾಹದಿಂದ ಆದ ಆಪತ್ತನ್ನು ವೈಭವಿಕರಿಸುವುದು ಎಷ್ಟು ಸರಿ ಅಂತ ಕಾಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಬಂದ ಕಾಮೆಂಟ್‍ಗಳಿಗೆ ತಲೆಕಡೆಸಿಕೊಳ್ಳದ ಸುರಭ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ “ಪಾಟ್ನಾದ ಈಗಿನ ಪರಿಸ್ಥಿತಿಯನ್ನು ತೋರಿಸಲು ಈ ಫೋಟೋ ಶೂಟ್ ಮಾಡಿದೆ’ ಯಾರು ಅದನ್ನು ತಪ್ಪಾಗಿ ಅರ್ಥಮಾಡಿಕೊಳ್ಳ ಬೇಡಿ ಎಂದು ಬರೆದುಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top