ಹುಚ್ಚಾ ವೆಂಕಟ್ ಗೆ ಸಹಾಯ ಮಾಡೋದಾದ್ರೆ ಹೀಗೆ ಮಾಡಿ ಎಂದ ಬಿಗ್ ಬಾಸ್ ಪ್ರಥಮ್..!

ಹುಚ್ಚಾ ವೆಂಕಟ್ ನಿನ್ನೆ ಇಂದ ಮತ್ತೆ ಸುದ್ದಿಯಾಗಿದ್ದಾರೆ, ಮಡಿಕೇರಿ ಮತ್ತು ಮೈಸೂರಿನಲ್ಲಿ ರಂಪಾಟಗಳನ್ನು ಮಾಡಿ ಸಾರ್ವಜನಿಕರಿಂದ ಧರ್ಮದೇಟು ತಿಂದಿದ್ದಾರೆ. ಈ ಹಿಂದೆ ಹುಚ್ಚಾ ವೆಂಕಟ್ ಗೆ ಒಂದೊಳ್ಳೇ ಚಿಕಿತ್ಸೆ ಅಗತ್ಯವಿದೆ ಎಂದು ನಡ ಭುವನ್ ಕೂಡ ಹೇಳಿದ್ರು, ಈಗ ಬಿಗ್ ಬಾಸ್ ವಿನ್ನರ್ ಪ್ರಥಮ್ ಕೂಡ ಹುಚ್ಚಾ ವೆಂಕಟ್ ಗೆ ಸಹಾಯ ಮಾಡುವುದಾದರೆ ಹೀಗೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ತಾವೂ ಬರೆದ ಒಂದು ಲೆಟರ್ ಅನ್ನು ಪೋಸ್ಟ್ ಮಾಡಿದ್ದಾರೆ. ಹುಚ್ಚಾ ವೆಂಕಟ್ ಗೆ ಸಹಾಯ ಮಾಡುವವರು ಈ ಪೋಸ್ಟ್ ನ ನಾಲ್ಕು ಜನರಿಗೆ ಶೇರ್ ಮಾಡಿ ಆಗ ವೆಂಕಟ್ ಗೆ ಸಹಾಯ ಮಾಡಿದ ರೀತಿ ಅಂತ ಬರೆದುಕೊಂಡಿದ್ದಾರೆ..

ಪ್ರಥಮ್ ಬರೆದ ಪತ್ರದಲ್ಲಿ ಏನಿದೆ ಗೊತ್ತಾ..?

ನೆನ್ನೆ ರಾತ್ರಿ ನನ್ನ ಗೆಳತಿಯೊಬ್ಬರು ಮೆಸೇಜ್ ಮಾಡಿ, “ಏನ್ರೀ ಪ್ರಥಮ್, ಹುಚ್ಚವೆಂಕಟ್‍ಗೆ ಸಹಾಯ ಮಾಡ್ರಿ ಪಾಪ” ಎಂದರು. ತಕ್ಷಣ ನಾನು ಹೌದು ವೆಂಕಟ್ ಅವರಿಗೆ ಸಹಾಯ ಮಾಡುತ್ತೀನಿ. ಈಗಾಗಲೇ ನಾನು ಸಹಾಯ ಮಾಡಿದ್ದೀನಿ ಎಂದೆ. ಅದಕ್ಕೆ ಅವರು ಯಾವಾಗ ಸಹಾಯ ಮಾಡಿದ್ದೀರಿ ಎಂದು ಕೇಳಿದರು. ಅದಕ್ಕೆ ನಾನು “ನಾನು ಅವರನ್ನು ವೆಂಕಟ್ ಅಂತ ಕರೆಯುವುದೇ ನಾನು ಅವರಿಗೆ ಮಾಡುವ ಸಹಾಯ ಎಂದೆ. ಅವರನ್ನು ಹುಚ್ಚವೆಂಕಟ್ ಅಂತ ಪ್ರಚೋದಿಸುವ ಬದಲು ವೆಂಕಟ್ ಆಗಿ ಬಿಟ್ಟು ಬಿಡುವುದೆ ನಾವೆಲ್ಲರೂ ಅವರಿಗೆ ಮಾಡುವ ದೊಡ್ಡ ಸಹಾಯ” ಅಂತ ಹೇಳಿದ್ದಾರೆ. ನಾವೆಲ್ಲರೂ ಅವರನ್ನು ವೆಂಕಟ್ ಆಗೆ ಇರಲು ಬಿಡೋಣ ಅದನ್ನು ಬಿಟ್ಟು ಅವರನ್ನು ಹುಚ್ಚಾ ವೆಂಕಟ್ ಎಂದು ಕರೆಯೋದು ತಪ್ಪು ಅದರ ಬದಲು ಅವರನ್ನು ವೆಂಕಟ್ ಅಂತ ಕರೆಯಿರಿ ಅದುವೇ ಅವರಿಗೆ ಮಾಡೋ ಉಪಕಾರ ಅಂತ ತಮ್ಮ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top