ಬಾಹುಬಲಿ ಪ್ರಭಾಸ್‍ಗೆ ಜೋಡಿಯಾದ ದೀಪಿಕಾ ಪಡುಕೋಣೆ..!

prabhas deepika

ಬಾಹುಬಲಿ ಖ್ಯಾತಿಯ ನ್ಯಾಷನಲ್ ಸ್ಟಾರ್ ಪ್ರಭಾಸ್ ಸಾಹೋ ಸಿನಿಮಾ ನಿರೀಕ್ಷೆ ಮಟ್ಟದಷ್ಟು ಸಕ್ಸಸ್ ಕಾಣದ ನಂತರದಲ್ಲಿ ಪ್ರಭಾಸ್ ಮುಂದೆ ಯಾವ ರೀತಿಯ ಸಿನಿಮಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೊ ಮಾತುಗಳು ಕೇಳಿ ಬರ್ತಾ ಇದೆ. ಇನ್ನು ಪ್ರಭಾಸ್ 5 ವರ್ಷದಲ್ಲಿ ಕೇವಲ ಎರಡು ಸಿನಿಮಾಗಳನ್ನು ಮಾತ್ರ ಅಭಿಮಾನಿಗಳಿಗೆ ನೀಡಿದ್ದು, ಸಾಹೋ ಸೋತನಂತರ ಅಭಿಮಾನಿಗಳಿಗೆ ಒಂದಿಷ್ಟು ನಿರಾಸೆ ಉಂಟಾಗಿತ್ತು, ಹೀಗಿರುವಾಗ ಪ್ರಭಾಸ್ ಮುಂದಿನ ಸಿನಿಮಾ ಯಾವ್ದು ಅನ್ನೋವಾಗಲೇ ರಾಧೆ ಶ್ಯಾಮ್' ಚಿತ್ರದ ಟ್ರೆಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡುವು ಮೂಲಕ 20 ನೇ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು.

ಇನ್ನು ಈ ಟೈಟಲ್ ಮತ್ತು ಪೋಸ್ಟರ್‍ಗೆ ಅಭಿಮಾನಿಗಳು ಫಿದಾ ಆಗಿದ್ದಲ್ಲದೇ ಈ ಸಮಯದಲ್ಲಿ ಪ್ರಭಾಸ್ ಮತ್ತು ನಾಯಕಿಗೆ ಮಾಸ್ಕ್ ಅನ್ನು ಅಭಿಮಾನಿಗಳುರಾಧೆ ಶ್ಯಾಮ್’ ಪೋಸ್ಟರ್ ಅನ್ನು ಟ್ರೆಂಡ್ ಮಾಡಿದ್ರು, ಇನ್ನು ಇದರ ನಡುವೆಯಲ್ಲಿ ಮಹಾನಟಿ ಚಿತ್ರದ ನಿರ್ದೇಶಕ ಅಶ್ವಿನ್ ಸಾರಥ್ಯದಲ್ಲಿ ತಾತ್ಕಾಲಿಕವಾಗಿ ಪ್ರಭಾಸ್ 21' ಅನ್ನೋ ಸಿನಿಮಾ ಕೂಡ ಅನೌನ್ಸ್ ಆಗಿದ್ದು, ಈ ಚಿತ್ರಕ್ಕೆ ನಾಯಕಿ ಯಾರು ಅನ್ನೋ ಪ್ರಶ್ನೇ ಎಲ್ಲರಲ್ಲೂ ಮೂಡಿತ್ತು.

ಇನ್ನು ಈ ಚಿತ್ರ ಅನೌನ್ಸ್ ಆದಾಗಿನಿಂದಲೂ ಈ ಚಿತ್ರಕ್ಕೆ ಪ್ರಭಾಸ್‍ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಾ ಇತ್ತು, ಆದ್ರೆ ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ, ಆದ್ರೆ ಈಗ ಇದು ಅಧಿಕೃತವಾಗಿ ಘೋಷಣೆ ಕೂಡ ಆಗಿದೆ. ಪ್ರಭಾಸ್ ಅವರ 21ನೇ ಸಿನಿಮಾವನ್ನುವೈಜಯಂತಿ ಮೂವೀಸ್’ನ 50 ವರ್ಷದ ಸಂಭ್ರಮಾಚರಣೆಯ ಉಡುಗೊರೆಯಾಗಿ ನೀಡಲಿದ್ದು, ಇದೊಂದು ಬಿಗ್ ಬಜೆಟ್ ಮತ್ತು ಬಹುಭಾಷಾಙ ಚಿತ್ರವಾಗಿರಲಿದಯಂತೆ.


ಈ ಬಗ್ಗೆ ವೈಜಯಂತಿ ಮೂವಿಸ್ ಅಧಿಕೃತವಾಗಿ ಟ್ವೀಟ್ ಮಾಡಿದ್ದು, ಚಿತ್ರತಂಡಕ್ಕೆ ದೀಪಿಕಾ ಪಡುಕೋಣೆಗೆ ವೆಲ್‍ಕಮ್ ಮಾಡಿ ಟ್ವೀಟ್ ಮಾಡಿದೆ.

ಇನ್ನು ಅಧಿಕೃತ ಘೋಷಣೆಯಾದ ಬಳಿಕ ಅಭಿಮಾನಿಗಳು ಖುಷಿಯಾಗಿದ್ದು, ಟ್ವೀಟರ್‍ನಲ್ಲಿ ದೀಪಿಕಾ ಪಡುಕೋಣೆ ಹ್ಯಾಶ್ ಟ್ಯಾಗ್ ಬಳಸಿ ಸಂತಸ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಪ್ರಭಾಸ್ ಬಾಹುಬಲಿ ಸಿನಿಮಾ ರಿಲೀಸ್ ಟೈಂನಲ್ಲಿ ಕರಣ್ ಜೋಹಾರ್ ಶೋನಲ್ಲಿ ಯಾರ ಜೊತೆ ನಟಿಸಬೇಕು ಅನ್ನೋ ಆಸೆ ದೀಪಿಕಾ ಪಡುಕೋಣೆ ಜೊತೆ ಅನ್ನೋ ಮಾತುಗಳನ್ನು ಹೇಳಿದ್ರು. ಅಷ್ಟೇ ಅಲ್ಲದೇ ಕನ್ನಡ, ತಮಿಳು ಹಿಂದಿಯಲ್ಲಿ ನಟಿಸಿದ್ದ ದೀಪಿಕಾ ತೆಲುಗಿನಲ್ಲಿ ನಟಿಸಿಲ್ಲ ಅನ್ನೋ ಬೇಸರವಿತ್ತು, ಆದ್ರೆ ಈಗ ಪ್ರಭಾಸ್ 21ನೇ ಸಿನಿಮಾಗೆ ದೀಪಿಕಾ ಪಡುಕೋಣೆ ನಾಯಕಿ ಅನ್ನೋದು ಅಧಿಕೃತವಾಗಿದ್ದು ದೀಪಿಕಾ ಟಾಲಿವುಡ್‍ಗೆ ಅಧಿಕೃತವಾಗಿ ಎಂಟ್ರಿಕೊಟ್ಟಂತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top