ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಶಖೆ ಆರಂಭ..!

Power-tv-kannada

ಕನ್ನಡ ದೃಶ್ಯ ಮಾಧ್ಯಮ ಲೋಕದಲ್ಲಿ ನಿಜಕ್ಕೂ ಒಂದು ಹೊಸ ಚಾನಲ್ ಗೆ ಸ್ಪೇಸ್ ಇದ್ಯಾ..? ಬರೋ ಚಾನಲ್ ಗಳು ತಮ್ಮ ಕ್ರೆಡಿಬಿಲಿಟಿಯನ್ನು ಹಾಗೂ ಮೀಡಿಯಾ ಎಥಿಕ್ ಅನ್ನು ಕಾಪಾಡ್ಕೊಂಡು ಹೋಗುತ್ತಿವೆಯೇ..? ಎಷ್ಟು ದಿನ ಇರುತ್ತವೆ ಅನ್ನುವಂತಹ ಹತ್ತಾರು ಪ್ರಶ್ನೆಗಳು, ಅನುಮಾನಗಳ ನಡುವೆಯೇ ಚಂದದ ಆ್ಯಂಕರ್ ಚಂದನ್ ಶರ್ಮಾ ಸಾರಥ್ಯದಲ್ಲಿ ಬರ್ತಿದೆ ‘ಪವರ್ ಟಿವಿ’.
ಈಗಾಗಲೇ ಅಕ್ಟೋಬರ್ 19ರಿಂದ ನಿಮ್ಮ ಮನೆ ತಲುಪಿರುವ ‘ಪವರ್ ಟಿವಿ’ ನಾಳೆಯಿಂದ ಮೀಡಿಯಾ ಲೋಕದಲ್ಲಿ ಮಹಾಕ್ರಾಂತಿ ಮಾಡಲಿದೆ. ಈಗಾಗಲೇ ಯೋಧರಿಂದ ಲೋಕಾರ್ಪಣೆಯಾದ ಹಾಗೂ ಯೋಧರಿಗೆ ಸಮರ್ಪಣೆಯಾದ ವಿಶ್ವದ ಮೊದಲ ಚಾನಲ್ ಅನ್ನೋ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಪವರ್ ಟಿವಿ ಚಾನಲ್ ನವೆಂಬರ್​​​ 5ರ ಸೋಮವಾರ ಪೂರ್ಣಪ್ರಮಾಣದಲ್ಲಿ ನಿಮ್ಮ ಮುಂದೆ ಬರುತ್ತಿದೆ.
ನಾಳೆ (ಸೋಮವಾರ) ಸಂಜೆ 6 ಗಂಟೆಯಿಂದ ವಿಚಾರ ಮಂಥನ ಆರಂಭವಾಗಲಿದೆ. ಈ ಸಮಿಟ್ ನಲ್ಲಿ ದೇಶದ ಹೆಮ್ಮೆಯ ಯೋಧರು, ಶಿಕ್ಷಣ ತಜ್ಱರು, ಪೊಲೀಸ್ ಅಧಿಕಾರಿಗಳು, ಹಿರಿಯ ಪತ್ರಕರ್ತರು, ರಾಜಕಾರಣಿಗಳು, ಚಿತ್ರರಂಗದವರು, ರಂಗಭೂಮಿಯ ದಿಗ್ಗಜರು, ವೈದ್ಯರು, ಸಮಾಜ ಸೇವಕರು, ರೈತರು ಹೀಗೆ ವಿವಿಧ ಕ್ಷೇತ್ರದವರು ಪಾಲ್ಗೊಳ್ಳುತ್ತಾರೆ. ಎಲ್ಲಾ ಕ್ಷೇತ್ರದ ಪ್ರತಿನಿಧಿಗಳಾಗಿ ಆಗಮಿಸುವ ಗಣ್ಯರು ನಮ್ಮ ಚಾನಲ್ ನಿಂದ ಏನನ್ನು ನಿರೀಕ್ಷಿಸುತ್ತಾರೆ ಅನ್ನೋದನ್ನು ಮುಕ್ತವಾಗಿ ಹಂಚಿಕೊಳ್ಳಲಿದ್ದಾರೆ. ಗಣ್ಯರ ಸಲಹೆ, ಅಭಿಪ್ರಾಯಗಳನ್ನ ದಾಖಲಿಸಿಕೊಂಡು ಬಲಿಷ್ಠವಾಗಿ ಮುನ್ನುಗ್ಗುವ ವಿಶ್ವಾಸದಲ್ಲಿದೆ ಪವರ್ ಟಿವಿ.
ಹಾಗೆಯೇ ಚಾನಲ್ ತನ್ನ ವಿಶನ್ ಏನೆನ್ನುವುದನ್ನು ಕೂಡ ವೀಕ್ಷಕರಿಗೆ ತಿಳಿಸಲಿದೆ. ಹೀಗೆ ಸುದ್ದಿ ವಾಹಿನಿಯೊಂದು ಎಲ್ಲಾ ಕ್ಷೇತ್ರದ ಪ್ರತಿನಿಧಿಗಳ ನಿರೀಕ್ಷೆ ಏನೆಂಬುದನ್ನು ಅವರಿಂದಲೇ ಕೇಳಿಕೊಂಡು ಅವರ ನಿರೀಕ್ಷೆಯನ್ನು ಸುಳ್ಳಾಗಿಸುವುದಿಲ್ಲ ಅಂತ ಪ್ರಾಮಿಸ್ ಮಾಡಿ ಬರುತ್ತಿರುವುದು ಕನ್ನಡ ದೃಶ್ಯ ಮಾಧ್ಯಮ ಇತಿಹಾಸದಲ್ಲಿ ಇದೇ ಮೊದಲು.
ಪವರ್ ಟಿವಿ ಆರಂಭದಲ್ಲೇ ಒಂದು ವೇಗವಿದೆ. ಹೀಗೊಂದು ಚಾನಲ್ ಲಾಂಚ್ ಆಗುತ್ತದೆ ಅನ್ನೋ ಮಾತು ಕೇಳಿ ಬರುವಷ್ಟರಲ್ಲೇ ಚಾನಲ್ ಲೋಕಾರ್ಪಣೆ ಆಗಿದ್ದು ಮಾಧ್ಯಮ ಇತಿಹಾಸದಲ್ಲೊಂದು ಹಿಸ್ಟರಿ. ಇದೀಗ ನಾಳಿನ ಆರಂಭ ಮತ್ತೊಂದು ರೆಕಾರ್ಡ್. ನಾಡಿದ್ದಿನಿಂದ ಎಷ್ಟು ವೇಗವಾಗಿ ಪವರ್ ಫುಲ್ ಆಗಿ ಬರಲಿದೆ ಅನ್ನೋ ಸೂಚನೆಯನ್ನ ಈಗಾಗಲೇ ರವಾನೆ ಮಾಡಿದೆ ಪವರ್ ಟೀಮ್.
ಎನಿವೇ, ಪವರ್ ಫುಲ್ ಆಗಿ ಎಂಟ್ರಿ ಕೊಡಲಿರೋ ಪವರ್ ಟಿವಿ ಎಲ್ಲರ ನಿರೀಕ್ಷೆಗೂ ಮೀರಿ ಸಮಾಜಮುಖಿಯಾಗಿ, ಜನಪರವಾದ ಸುದ್ದಿಗಳ ಮೂಲಕ ಎಲ್ಲರ ಧ್ವನಿಯಾಗಲಿ ಅನ್ನೋದು ನಮ್ಮ ಆಶಯ.

ವೆಬ್ ಸೈಟ್ : www.powertvnews.in

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top