ಪವರ್ ಫುಲ್ಲಾಗಿ ಬ್ಲಾಸ್ಟ್ ಆಗಲಿದೆ PMT ಸುಕ್ಕಾ ಟೀಸರ್..!!!

ಸ್ಯಾಂಡಲ್ವುಡ್ ಅಂಗಳದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿರೋ ಭಾರಿ ಕುತೂಹ ಹುಟ್ಟಿಸಿರೋ ಸಿನಿಮಾ ಪಾಪ್ ಕಾರ್ನ್ ಮಂಕಿ ಟೈಗರ್. ಪೋಸ್ಟರ್ ಮತ್ತು ಡಬ್ಬಿಂಗ್ ವಿಡಿಯೋಗಳಿಂದ್ಲೇ ಭಾರಿ ಸೌಂಡ್ ಮಾಡಿದ್ದ ಈ ಚಿತ್ರತಂಡ. ಹೊಸ ವರ್ಷದ ಶುಭಾಶಯಗಳೊಂದಿಗೆ ಹೊಸ ಸುದ್ದಿಯನ್ನ ಕೊಟ್ಟಿದೆ. ಅದೇನಪ್ಪಾ ಅಂದ್ರೆ, ಹೊಸ ವರ್ಷದ ಮೊದಲ ತಿಂಗಳ ಮೊದಲ ವಾರದಲ್ಲಿ ಅಂದ್ರೆ ಈ ವಾರದಲ್ಲೇ, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಟೀಸರ್ ನ ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ. ಚಿತ್ರತಂಡದ ಮೂಲಗಳು ಹೇಳೋ ಪ್ರಾಕಾರ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ಅಕ್ಷರಃ ಕಿಚ್ಚು ಹಚ್ಚುವಂತಿದೆಯಂತೆ. ಏಕ್ ಧಮ್ ರಾ ಎಕ್ ಧಮ್ ಮಾಸ್ ಭರಿತವಾಗಿದೆಯಂತೆ.

ದುನಿಯಾ ಸೂರಿಯವರಿಗಿರೋ ಸುಕ್ಕಾ ಖ್ಯಾತಿ ಈ ಚಿತ್ರದಲ್ಲಿ ಮತ್ತಷ್ಟು ಮೇಳೈಸಲಿದೆಯಂತೆ. ಸುಕ್ಕಾ ಕೊಡುವಷ್ಟು ಕಿಕ್ ಈ ಟೀಸರ್ ಕೊಡಲಿದೆಯಂತೆ. ಡಾಲಿ ಧನಂಜಯರ ವಿಶಿಷ್ಠ ಲುಕ್ಕು ಮ್ಯಾನರಿಸಂ, ಡೈಲಾಗ್ ಡೈಲವರಿ, ಸೂರಿಯವರು ಮಾಸ್ ಕಲರು ಪ್ರಸೆಂಟೇಶನೂ,ಶೇಖರ್ ಕ್ಯಾಮೆರಾ ವರ್ಕ್, ಚರಣ್ ರಾಜ್ ಮ್ಯೂಸಿಕ್, ದೀಪು ಎಡಿಟ್ಟು, ಎಲ್ಲಾ ಸಿಂಕ್ ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡುವಂತಹ ಪ್ರಾಡೆಕ್ಟ್ ರೆಡಿಯಾಗಿದೆಯಂತೆ. ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಸುಧೀರ್ ಕೆ.ಎಮ್ ಚೊಚ್ಚನ ನಿರ್ಮಾಣವಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಎಲ್ಲಾ ಆಂಗಲ್ ನಿಂದ್ಲೂ ಉದ್ಯಮದಲ್ಲಿ ಸಂಚಲ ಮೂಡಿಸ್ತಿದ್ದು, ಸಿನಿಪ್ರಿಯರಲ್ಲಿ ವಿಶಿಷ್ಠ ಕೂತೂಹಲವನ್ನ ಹುಟ್ಟಿಸಿದೆ. ಅಂದ್ಹಾಗೆ, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಅಫಿಶಿಯಲ್ ಫಸ್ಟ್ ಟೀಸರ್ ನ ಪಿ.ಆರ್.ಕೆ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಮಾಡಲಿದ್ದು, ಪವರ್ ಸ್ಟಾರ್ ರಿಂದ ಚಿತ್ರತಂಡ ಲಾಂಚ್ ಮಾಡಿಸೋ ಸನ್ನಾಹದಲ್ಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top