ಎಲ್ಲಾ ಮಾದೇವನ ಮಹಾತ್ಮೆ, ಪಾಪ್ ಕಾರ್ನ್ ಮಂಕಿ ಟೈಗರ್ ಇನ್ ಟ್ರೆಂಡ್..!!

Popcorn Monkey Tiger - Maadeva

ಹೊಸ ತನಕ್ಕೆ… ಟ್ರೆಂಡಿಗೆ ಮತ್ತೊಂದು ಹೆಸರೇ ಸೂರಿ ಅಲಿಯಾಸ್ ದುನಿಯಾ ಸೂರಿ. ಸಿನಿಮಾ ಜಗತ್ತಿನಲ್ಲಿ ವಿಶಿಷ್ಠ ವಿಷನ್ ಹೊಂದಿರೋ ಸೂರಿ ಇದೀಗ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದೊಂದಿಗೆ ಮತ್ತೊಮ್ಮೆ ಮ್ಯಾಜಿಕ್ ಮಾಡ್ತಿದ್ದಾರೆ. ಟೀಸರ್ ರಿಲೀಸ್ ಮಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ನಿರ್ದೇಶಕ ಸೂರಿ, ಅದೇ ಗುಂಗಲ್ಲೇ ಇದೀಗ ಚಿತ್ರದ ಮೊದಲ ಲಿರಿಕಲ್ ವಿಡಿಯೋ ರಿಲೀಸ್ ಮಾಡಿ, ಸೌಂಡ್ ಮಾಡ್ತಿದ್ದಾರೆ. ಮಾದೇವ ಅನ್ನೋ ಕಂಗ್ಲೀಷ್ ಲಿರಿಕ್ಸ್ ಇರೋ ಟ್ರೆಂಡಿ ಹಾಡನ್ನ ರಿಲೀಸ್ ಮಾಡಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಈ ಹಾಡು ಕೇಳಿದವರೆಲ್ಲಾ.. ವಾಟೇ ಸಾಂಗ್ ಅಂತ ಹುಬ್ಬೋರಿಸ್ತಿದ್ದಾರೆ. ಅಪ್ಪಟ ಈ ಜಮಾನದ ಈ ಟ್ರೆಂಡಿಗೆ ಬೇಕಾದ ಸಂಗೀತ ಸಂಯೋಜಿಸಿರೋ ಚರಣ್ ರಾಜ್ ಮತ್ತು ಸೂರಿ ಟಗರು ನಂತ್ರ ಮತ್ತೆ ದೊಡ್ಡ ಹಿಟ್ ಸಾಂಗ್ ನ ಮಾಡಿದ್ದಾರೆ, ಸೈಲೆಂಟಾಗಿ ಸಾಂಗ್ ರಿಲೀಸ್ ಮಾಡಿ ಸಪ್ರೈಸ್ ಕೊಟ್ಟಿರೋ ನಿರ್ದೇಶಕ ಸೂರಿ, ಈ ಹಾಡಿನೊಂದಿಗೆ ಸ್ಯಾಂಡಲ್ವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ.

ಮಾದೇವ ಹಾಡನ್ನ ಚರಣ್ ರಾಜ್ ಕಂಪೋಸ್ ಮಾಡಿದ್ದು, ರಿತ್ವಿಕ್ ಕಾಯ್ಕಿಣಿ ಮತ್ತು ಹನುಮಾನ್ ಕೈಂಡ್ ಸಾಹಿತ್ಯ ಬರೆದಿದ್ದಾರೆ. ಸಂಚಿಂತ್ ಹೆಗ್ಗಡೆ, ಹನುಮಾನ್ಕೈಂಡ್ ಮತ್ತು ಚರಣ್ ರಾಜ್ ಹಾಡಿದ್ದಾರೆ,

ನಿಮಗೆಲ್ಲಾ ಗೊತ್ತಿರೋ ಹಾಗೇ ಪಾಪ್ ಕಾರ್ನ್ ಮಂಕಿ ಟೈಗರ್ ಸ್ಟುಡಿಯೋ 18 ಬ್ಯಾನರ್ ನಲ್ಲಿ ಸುಧೀರ್ ಕೆ.ಎಮ್ ನಿರ್ಮಾಣದಲ್ಲಿ ತಯಾರಾಗ್ತಿದೆ. ಸೂರಿ ಮತ್ತು ಸುರೇಂದ್ರ ನಾಥ್ ಕಥೆ. ಸೂರಿ ಮತ್ತು ಅಮ್ರಿತಾ ಭಾರ್ಗವ್ ಸಂಭಾಷಣೆ ಬರೆದಿದ್ದು, ಸೂರಿ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದೆ.

ಚಿತ್ರದಲ್ಲಿ ಡಾಲಿ ಧನಂಜಯ ನಾಯಕನಟನಾಗಿ ಕಾಣಿಸಿಕೊಂಡಿದ್ದು, ಸ್ಮಿತಾ ನಿವೇದಿತಾ, ಅಮೃತಾ ಅಯ್ಯಂಗರ್, ಸಪ್ತಮಿ, ಪೂರ್ಣಚಂದ್ರತೇಜಸ್ವಿ,ನವೀನ್ , ಕಾಕ್ರೋಚ್ ಸುಧೀ ಪ್ರಮುಖಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶೇಖರ್ ಎಸ್. ಛಾಯಾಗ್ರಹಣ, ಚರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಈಗಾಗ್ಲೇ ಟೀಸರ್ನಿಂದ ಹಲ್ ಚಲ್ ಎಬ್ಬಿಸಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಇದೀಗ ಮಾದೇವ ಹಾಡಿನಿಂದ ಸಿನಿಮಾದ ರೇಂಜ್ನ ಹೆಚ್ಚಿಸಿದೆ. ತುಂಬಾ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಸೂರಿ ಮತ್ತೊಮ್ಮೆ ದೊಡ್ಡ ಟ್ರೆಂಡಿ ಹಿಟ್ ಕೊಡೋ ಸೂಚನೆ ಕೊಟ್ಟಿದ್ದಾರೆ

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top