ಶುರುವಾಗಲಿದೆ ಡಾಲಿ-ಸೂರಿ ಮಂಕಿ ಟೈಗರ್ ದರ್ಬಾರ್..!

ಕನ್ನಡ ಸಿನಿರಸಿಕರ ಬಹುನಿರೀಕ್ಷಿತ ಚಿತ್ರ ಡಾಲಿ – ಸುಕ್ಕಾ ಸೂರಿ ಕಾಂಬೀನೇಷನ್ ನ ಪಾಪ್ ಕಾರ್ನ್ ಮಂಕಿ ಟೈಗರ್ ಈಗಾಗ್ಲೇ ತನ್ನ ಶೂಟಿಂಗ್ ಕೆಲಸವನ್ನು ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದೆ, ಈಗಾಗ್ಲೇ ಚಿತ್ರದ ಕೆಲವು ಫೋಟೋಗಳು ಕ್ಯೂರ್ಯಾಸಿಟಿ ಹುಟ್ಟಿಸಿದ್ದು ಚಿತ್ರ ಯಾವಾಗ ಅನ್ನೋ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ.

ಪಾಪ್ ಕಾರ್ನ್ ಮಂಕಿ‌ಟೈಗರ್ ನಿರ್ಮಾಪಕರು ಸುಧೀರ್, ಸುಧೀರ್ ಹಲವು ವರ್ಷಗಳಿಂದ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ… ಇದು ಅವರಿಗೆ ಚೊಚ್ಚಲ‌ ಸಿನಿಮಾ… ಇನ್ನು ಸೂರಿ-ಡಾಲಿ ಅಭಿಮಾನಿಗಳು ಚಿತ್ರದ ಟ್ರೈಲರ್ ಯಾವಾಗ ರಿಲೀಸ್ ಗುರು ಅಂತ ಹೇಳ್ತಿದ್ದಾರೆ, ಇದೇ ವೇಳೆ ಈಗ ಚಿತ್ರತಂಡದ ಕಡೆಯಿಂದ ಹೊಸ ಸುದ್ದಿಹೊರಬಿದ್ದಿದೆ.

ಚಿತ್ರದ ಶೂಟಿಂಗ್ ಮುಗಿಸಿ ಡಬ್ಬಿಂಗ್ ಗೆ ರೆಡಿಯಾಗಿದ್ದು. ಇಂದಿನಿಂದ ಆಕಾಶ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕೆಲಸ ಶುರುವಾಗಲಿದೆ,

ಇದರ ಜೊತೆಯಲ್ಲಿಯೇ ಟ್ರೈಲರ್ ಕಟಿಂಗ್ ನಡೆಸುತ್ತಿರೋ ಚಿತ್ರತಂಡ ಸಿನಿರಸಿಕರಿಗೆ ಅತೀ ಶೀಘ್ರದಲ್ಲಿ ಟ್ರೈಲರ್ ತೋರಿಸುವ ಪ್ಲಾನ್ ನಲ್ಲಿದೆ ಚಿತ್ರತಂಡ.

ಧನಂಜಯ್ ಡಾಲಿ, ನಿವೇದಿತ, ಅಮೃತ, ಸಪ್ತಮಿ ಮುಖ್ಯ ಪಾತ್ರದಲ್ಲಿದ್ದು, ಸ್ಕ್ರೀನ್ ಪ್ಲೇ, ಸಂಭಾಷಣೆ, ನಿರ್ದೇಶನವನ್ನು ದುನಿಯಾ ಸೂರಿ ನಿರ್ವಹಿಸಿದ್ದು, ಕ್ಯಾಮೆರಾ ಮ್ಯಾನ್ ಶೇಖರ್, ಚರಣ್ ರಾಜ್ ರವರ ಸಂಗೀತ, ಸಂಕಲನ ದೀಪು ಎಸ್ ಕುಮಾರ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top