ಕುಡಿದು ಹೆಲ್ಮೆಟ್ ಧರಿಸಿದೇ ಬೈಕ್ ರೈಡಿಂಗ್ ವೇಳೆ ಸಿಕ್ಕಿಬಿದ್ದು ಏನ್ ಮಾಡಿದ ಗೊತ್ತಾ.?

ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹದಡಿ ರೋಡ್ ಬಳಿ ನಡೆದಿದೆ. ರುದ್ರಪ್ಪ ಎಂಬಾತನಿಂದ ಈ ಕೃತ್ಯ ನಡೆದಿದ್ದು. ಈತ ಹೆಲ್ಮೆಟ್ ಹಾಕದೆ, ಮದ್ಯ ಸೇವನೆ ಮಾಡಿ ವಾಹನ ಚಲಾವಣೆ ಮಾಡುತ್ತಿದ್ದನು.ಪೊಲೀಸರು ಹದಡಿ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುವಾಗ ಈ ವ್ಯಕ್ತಿಯ ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ರುದ್ರಪ್ಪ ಹೆಲ್ಮೆಟ್ ಧರಿಸದೇ, ಅತಿಯಾದ ಮದ್ಯ ಸೇವನೆ ಮಾಡಿರುವುದು ತಿಳಿದ ಪೊಲೀಸರು ವಾಹನವನ್ನ ವಶಪಡಿಸಿಕೊಂಡಿದ್ದಾರೆ..ಇದ್ದರಿಂದ ಕುಪಿತಗೊಂಡ ಮದ್ಯವ್ಯಸನಿಯು ಎಎಸ್ಐ ಅಂಜಿನಪ್ಪ ಹಾಗೂ ಪೇದೆ ಸಿದ್ದೇಶ್ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ. ವಾಹನ ಚಲಾಯಿಸುವಾಗ ಮದ್ಯ ಸೇವನೆಯು ಕಾನೂನು ಬಾಹಿರ ಎಂದು ತಿಳಿದರು ಮದ್ಯ ಸೇವನೆ ಮಾಡಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಪೊಲೀಸರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಈ ಘಟನೆ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಜನರ ರಕ್ಷಣೆ ಮಾಡುವವರೇ ಹಲ್ಲೆಗೊಳ್ಳಗಾರುವುದು ನಿಜಕ್ಕೂ ನೋವಿನ ಸಂಗತಿ..

Video

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top