ಟ್ರೆಂಡಿಂಗ್‍ನಲ್ಲಿ ಪೊಗರು ತೋರಿಸಿದ ಧ್ರುವ ಸರ್ಜಾ..! ಯಾವ್ಯಾವ ರಾಜ್ಯದಲ್ಲಿ ಟ್ರೆಂಡಿಂಗ್ ಗೊತ್ತಾ..?

pogaru trending

ಮಕ್ಳ ಸಿಂಪಲ್ ಆಗಿ ಮೂರು ಹೊಡ್ದಿದಕ್ಕೆ ಸಿರೀಯಸ್ ಆಗಿದ್ದೀರಾ.. ಇನ್ನು ಸೀರಿಯಸ್ ಆಗಿ ಹೊಡುದ್ರೆ.. ಅನ್ನೋ ಖಡಕ್ ಡೈಲಾಗ್ ಮೂಲಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ಡೈಲಾಗ್ ಟ್ರೈಲರ್ ರಿಲೀಸ್ ಆಗಿತ್ತು, ಆದ್ರೆ ರಿಲೀಸ್ ಆದ ಕೆಲವೇ ಘಂಟೆಗಳಲ್ಲಿ ಧೂಳ್ ಎಬ್ಬಿಸೋ ರೀತಿ ಸೀರಿಯಸ್ ಆಗಿ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ನಂ 1 ಪಟ್ಟಕ್ಕೆ ಏರಿಬಿಡ್ತು.. ಟ್ರೈಲರ್ ರಿಲೀಸ್ ಆದ 24 ಗಂಟೆಗಳಲ್ಲಿ 90ಲಕ್ಷಕ್ಕೂ ಅಧಿಕ ಯೂಟ್ಯೂಬ್ ವೀಕ್ಷಣೆ ಪಡೆಯೋ ಮೂಲಕ ಭರ್ಜರಿ ರೆಸ್ಪಾನ್ಸ್ ಪಡೆದಿದೆ, ಇನ್ನು ಬೇರೆ ಬೇರೆ ರಾಜ್ಯಗಳಲ್ಲೂ ಸಹ ಪೊಗರು ತನ್ನ ಪೊಗರನ್ನು ತೋರಿಸಿದ್ದು ಟ್ರೆಂಡಿಂಗ್‍ನಲ್ಲೂ ದಾಖಲೆ ಬರೆದಿದೆ,

ಹೌದು ಕರ್ನಾಟಕದಲ್ಲಿ ನಂ 1 ಟ್ರೆಂಡಿಂಗ್ ಪಡೆದಿದ್ರೆ, ಆಂಧ್ರದಲ್ಲಿ 4ನೇ ಸ್ಥಾನ ಪಡೆದಿದೆ, ಮುಂಬೈನಲ್ಲಿ 18ನೇ ಸ್ಥಾನ ಪಡೆದಿದ್ದು, ದೆಹಲಿಯಲ್ಲಿ 22ನೇ ಸ್ಥಾನ ಪಡೆದಿದೆ, ಕೊನೆಯದಾಗಿ ತಮಿಳುನಾಡಿನಲ್ಲಿ 6ನೇ ಸ್ಥಾನ ಪಡೆಯೋ ಮೂಲಕ ಯೂಟ್ಯೂಬ್‍ನಲ್ಲಿ ಕನ್ನಡದ ಡೈಲಾಗ್ ಟ್ರೇಲರ್ ಒಂದು ಈ ಮಟ್ಟಕ್ಕೆ ದಾಖಲೆ ಮಾಡಿರೋದು ಹೊಸದೇ ಸರಿ.

ಬರೀ ಡೈಲಾಗ್ ಟ್ರೈಲರ್ ನಲ್ಲೇ ಕಥೆ ಹುಡುಕ್ ಬೇಡ್ರೋ ಇನ್ನೊಂದ್ ಟ್ರೇಲರ್ ಕೊಡ್ತೀವಿ ಅನ್ನೋ ಧ್ರುವ ಸೂಪರ್ ಡೈಲಾಗ್‍ಗೆ ಡಿ.ಎಸ್ ಅಭಿಮಾನಿಗಳು ಫಿದಾ ಆಗಿದ್ದು ಇನ್ನೊಂದು ಪೊಗರು ಟ್ರೈಲರ್ ಗೆ ವೇಟಿಂಗ್ ಅಂತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top