ಪೊಗರು ಸಿನಿಮಾದಲ್ಲಿ ಬಿಗ್ ಬಜೆಟ್ ಫೈಟ್ ಆ ವ್ಯಕ್ತಿಗೆ ಸಂಭಾವನೆ ಎಷ್ಟು ಗೊತ್ತಾ..?

ಪೊಗರು ಧ್ರುವಸರ್ಜಾ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ. ಈಗಾಗ್ಲೇ ಸಿನಿಮಾದ ಬಗ್ಗೆ ದೊಡ್ಡ ಹೈಪ್ ಕ್ರಿಯೆಟ್ ಆಗಿದೆ. ಒಂದಿಲ್ಲೊಂದು ಹೊಸ ಸುದ್ದಿ ಪೊಗರು ಚಿತ್ರತಂಡದಿಂದ ಹೊರ ಬೀಳ್ತಾನೆ ಇರುತ್ತದೆ, ಈಗ ಹೊಸದೊಂದು ಸುದ್ದಿ ಚಿತ್ರತಂಡದಿಂದ ಹೊರ ಬಂದಿದೆ. ಹೌದು ಪೊಗರು ಚಿತ್ರಕ್ಕೆ ಈಗ ಹೈ ಬಜೆಟ್ ಫೈಟ್ ಶೂಟ್ ಈಗ ರಾಮೋಜಿ ಫಿಲ್ಮ್‌ಸಿಟಿಯಲ್ಲಿ ಶೂಟ್ ಆಗ್ತಾ ಇದೆ, ಆದ್ರೆ ಇಲ್ಲಿ ಹೈ ಬಜೆಟ್ ಸಿನಿಮಾ ಅನ್ನೋ ಸುದ್ದಿಗಿಂತ ಇನ್ನೊಂದು ಸುದ್ದಿ ಇಂಟರೆಸ್ಟಿಂಗ್. ಹೌದು ಧ್ರುವ ಸರ್ಜಾ ಈ ಫೈಟ್ ಸೀನ್ ಗೆ ತಯಾರಿಯಾಗಲು. ಧ್ರುವಾಗೆ ಟ್ರೈನರ್ ಆಗಿ ಬಂದಿರೋದು ಪ್ರಾನ್ಸ್ ನ ಬಾಡಿಬಿಲ್ಡರ್ ಮಾರ್ಗನ್ ಆಸ್ಟೆ. ಇವರು ವರ್ಲ್ಡ್ ಸ್ಟ್ರಾಂಗೆಸ್ಟ್ ಮೆನ್ ಆಗಿದ್ದು, ನೂರಾರು ಅಂತರಾಷ್ಟ್ರೀಯ ಬಾಡಿ ಬಿಲ್ಡ್ ಶೋನಲ್ಲಿ ಬಾಡಿ ಶೋ ತೋರಿಸಿ ಪ್ರಶಸ್ತಿ ಗೆದ್ದಿದ್ದಾರೆ, ಅಲ್ಲದೇ 2019ರ ವರ್ಲ್ಡ್‌ ಸ್ಟ್ರಾಂಗೆಸ್ಟ್ ಮ್ಯಾನ್ ಅಂತ ಬಿರುದು ಪಡೆದಿದ್ದು, ಈಗ ಧ್ರುವ ಸರ್ಜಾಗೆ ಟ್ರೈನರ್ ಆಗಿ ಬಂದಿದ್ದಾರೆ.

Read : ಕನ್ನಡಿಗ ಕೆ.ಎಲ್.ರಾಹುಲ್‍ಗೆ ಒಲಿದ ಕ್ಯಾಪ್ಟನ್ ಪಟ್ಟ!

ಇವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, ಅಲ್ಲದೇ ಇವರ ಪ್ರತಿದಿನದ ಸಂಭಾವನೆ 30 ಲಕ್ಷವಾಗಿದ್ದು, ಈ ಮೂಲಕ ಪೊಗರು ಚಿತ್ರ ತಂಡ ಬಿಗ್ ಬಜೆಟ್ ಫೈಟ್ ಸೀನ್ ಗೆ ಅಣಿ ಇಡುತ್ತಿದೆ.

ಪೊಗರು ಸಿನಿಮಾದಲ್ಲಿ ಬಿಗ್ ಬಜೆಟ್ ಫೈಟ್

ಈಗಾಗ್ಲೇ ಇವರ ಬಳಿ ಧ್ರುವ ಸರ್ಜಾ ಟ್ರೈನಿಂಗ್ ಪಡೆಯಿತ್ತಿದ್ದು, ಈ ಖುಷಿ ವಿಚಾರವನ್ನು ಧ್ರುವ ಸರ್ಜಾ ಟ್ವಿಟರ್ ನಲ್ಲಿ ಖುಷಿ ಹಂಚಿಕೊಂಡಿದ್ದು, ಈಗ ಅಭಿಮಾನಿಗಳು ಈ ಅದ್ಭುತ ಫೈಟ್ ಸೀನ್ ಹೇಗಿರುತ್ತೆ ಅಂತ ಫುಲ್ ಥ್ರಿಲ್ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top