ರಿಲೀಸ್ ಗೂ ಮೊದಲೇ ಕೋಟಿ ಕೋಟಿ ಬಾಚಿದ ಸೂರಿಯ ಮಂಕಿ ಟೈಗರ್..!

ಡಾಲಿ ಧನಂಜಯ್ ಈಗ ಮುಟ್ಟಿದೆಲ್ಲಾ ಚಿನ್ನವಾಗುತ್ತಿದೆ..ಟಗರು ಚಿತ್ರದಲ್ಲಿ ಡಾಲಿಯಾಗಿ ಕಾಣಿಸಿಕೊಂಡ ಮೇಲೆ..ಸುಕ್ಕಾ ಸೂರಿ ಮತ್ತು ಧನಂಜಯ್ ಕಾಂಭಿನೇಷನ್ ನ ಸಿನಿಮಾ‌ ಪಾಪ್ ಕಾರ್ನ್ ಮಂಕಿ ಟೈಗರ್ ಮುಂದಿನ ವಾರ ತೆರೆಮೇಲೆ ಅಪ್ಪಳಿಸಲಿದೆ..ಇದೇ ವೇಳೆ ಗಾಂಧಿನಗರದಿಂದ ಹೊಸದೊಂದು ಸುದ್ದಿ ಹೊರಬಂದಿದೆ..ಅದುವೇ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಬಿಡುಗಡೆಗೂ ಮೊದಲೇ 10ಕೋಟಿ ಬಾಜಿದೆ ಅನ್ನೋ ಸುದ್ದಿ ಈಗ ಗಾಂಧಿನಗರದಲ್ಲಿ ಹರಿದಾಡ್ತಾ ಇದೆ.

ಡಾಲಿ ಧನಂಜಯ ಮೇಲಿನ ಕ್ರೇಜ್, ಡೈರೆಕ್ಟರ್ ಸೂರಿ ಬ್ರ್ಯಾಂಡ್ ಮತ್ತು ಪಾಪ್ ಕಾರ್ನ್ ಮಂಕಿ ಟೈಗರ್ ಅನ್ನೋ ಟೈಟಲ್ ಮತ್ತು ಇತ್ತೀಚೆಗೆ ರಿಲೀಸ್ ಆದ ಟೀಸರ್ ಮತ್ತು ಮಾದೇವಾ ಸಾಂಗ್ ಎಲ್ಲವೂ ಕನ್ನಡ ಸಿನಿಪ್ರಿಯರಲ್ಲದೇ ಪರಭಾಷಾ ಸಿನಿಪ್ರಿಯರನ್ನೂ ಕೆಣಕಿದೆ. ನಿರೀಕ್ಷೆ ಹಗುಟ್ಟಿಸಿದೆ. ಭರವಸೆ ಹೆಚ್ಚಿಸಿದೆ. ಎಲ್ಲಾ ವರ್ಗದವರಲ್ಲೂ ಥಿಯೇಟರ್ಗೆ ನುಗ್ಗಿ ಬಂದು ಸಿನಿಮಾ ನೋಡಿ ಆನಂದಿಸೋ ಉತ್ಸಾಹ ತುಂಬಿದೆ. ಈ ನಡುವೆ ಈ ಸಿನಿಮಾ ರಿಲೀಸ್ಗೂ ಮೊದ್ಲೇ ಬರೊಬ್ಬರಿ 10 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ಮಾಡಿದೆ

ಡಾಲಿ- ಸೂರಿ PMT ಬರೊಬ್ಬರಿ 4ಕೋಟಿಗೆ ಎನ್.ಆರ್. ಎ ವ್ಯಾಪಾರ
ಪುಷ್ಕರ್ ಫಿಲಂಸ್- ಮೋಹನ್ ಫಿಲಂಸ್ ತೆಕ್ಕೆ ಪಾಪ್ ಕಾರ್ನ್ ಮಂಕಿ ಟೈಗರ್ ಗೆ ವಿತರಣೆ
ದಾಖಲೆ ಬರೆದ ಡಾಲಿ ಧನಂಜಯ್ PMT NRA ಬ್ಯುಸಿನೆಸ್

ಈ ನಡುವೆ ಧನಂಜಯ ಸೂರಿ ಕಾಂಬಿನೇಷನ್ನ ಈ ಸಿನಿಮಾವನ್ನ ಬರೊಬ್ಬರಿ 4ಕೋಟಿ ರೂಪಾಯಿ ಎನ್.ಆರ್.ಎ ರೇಟ್ ಕೊಟ್ಟು ಪುಷ್ಕರ್ ಫಿಲಂಸ್ ಮತ್ತು ಮೋಹನ್ ಫಿಲಂಸ್ ಖರೀದಿ ಮಾಡಿದೆ. ಈ ಮೂಲಕ ಡಾಲಿ ಧನಂಜಯ ನಾಯಕನಾಗಿ ಅಭಿನಯದ ಸಿನಿಮಾವೊಂದು ಪ್ರಪ್ರಥಮಬಾರಿಗೆ ಇಷ್ಟು ದೊಡ್ಡ ಮೊತ್ತಕ್ಕೆ ವಿತರಣೆಯ ಹಕ್ಕು ಎನ್.ಆರ್.ಎಗೆ ಸೋಲ್ಡೌಟ್ ಆಗಿದೆ.

ಧನಂಜಯ PMT ಟಿವಿ ರೈಟ್ಸ್ ಗೆ ಬಂತು ಭಾರಿ ಡಿಮ್ಯಾಂಡ್
ಪಾಪ್ ಕಾರ್ನ್ ಮಂಕಿ ಟೈಗರ್ ಖರೀದಿಗೆ ಸ್ಪರ್ಧೆಗೆ ಬಿದ್ದ ಚಾನೆಲ್ಸ್
Star suvarna, Zee kannada, udaya tv, colours kannada
ಯಾರ ಪಾಲಾಗಲಿದೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ..!?

ವಿತರಣೆ ಹಕ್ಕು, ಥಿಯೇಟರ್ ಡಿಮ್ಯಾಂಡ್ ಒಂದುಕಡೆಯಾದ್ರೆ. ಇನ್ನೊಂದು ಕಡೆ ಧನಂಜಯ ಮತ್ತು ಸೂರಿ ಕಾಂಬಿನೇಷನ್ ಈ ಚಿತ್ರಕ್ಕೆ ಡಿಜಿಟಲ್ ಮಾರ್ಕೆಟ್ ನಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕನ್ನಡ ಟಾಪ್ ಜಿಇಸಿ ಚಾನೆಲ್ ಗಳಿಂದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾವನ್ನ ಖರೀದಿ ಮಾಡೋದಕ್ಕೆ ಸ್ಪರ್ಧೆ ಏರ್ಪಟ್ಟಿದೆ. ಮೂಲಗಳ ಪ್ರಕಾರ ಈಗಾಗ್ಲೇ ಎರಡು ಸುತ್ತಿನ ಮಾತುಕತೆ ನಡೆದಿದ್ದು, ಒಂದು ದೊಡ್ಡ ಚಾನೆಲ್ ತುಂಬಾ ದೊಡ್ಡ ಮೊತ್ತಕ್ಕೆ ಪಾಪ್ ಕಾರ್ನ್ ಮಂಕಿ ಟೈಗರ್ ಖರೀದಿ ಮಾಡೋದಕ್ಕೆ ನಿರ್ಧಸಿರಿಸಿದೆಯಂತೆ.

ಡಾಲಿ- ಸೂರಿ ಸಿನಿಮಾಗೆ ಡಿಜಿಟಲ್ ಮಾರ್ಕೆಟ್ ನಲ್ಲಿ ಭಾರಿ ಬೇಡಿಕೆ
ಅಮೇಜಾನ್ ನಿಂದ ಧನಂಜಯ ಚಿತ್ರಕ್ಕೆ ಬಂಪರ್ ಆಫರ್…!!!

ಬರೀ ಟಿವಿ ಅಷ್ಟೇ ಅಲ್ಲ, ಈ ಸಿನಿಮಾ ಕಲ್ಟ್ ಜಾನರ್ ನಲ್ಲಿ ಕಾಣ್ತಿರೋ ಪ್ಯೂರ್ ಫ್ಯಾಮಿಲಿ ಎಂಟ್ರಟೈನ್ಮೆಂಟ್ ಅನ್ನೋ ಸೂಚನೆ ಸಿಕ್ತಿದ್ದು, ಅಮೇಜಾನ್ ನಿಂದ ಈ ಚಿತ್ರಕ್ಕೆ ಬಂಪರ್ ಆಫರ್ ಬಂದಿದೆಯಂತೆ. ಅಂ ಈ ಸಿನಿಮಾ ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸ ಇತಿಹಾಸ ಬರೆಯಲಿದೆಯಂತೆ. ಅಷ್ಟು ವಿಶಿಷ್ಠ ಮತ್ತು ವಿಶೇಷತೆಯಿಂದ ಈ ಸಿನಿಮಾ ಕೂಡಿದ್ದು, ಹೊಸ ಬಗೆಯ ಸಿನಿಮಾ ಮೇಕಿಂಗ್ ಪರಂಪರೆಗೆ ಸೂರಿ ನಾಂದಿ ಹಾಡಲಿದ್ದಾರಂತೆ. ಔಂಟ್ ಅಂಡ್ ಔಟ್ ಮಾಸ್ ಎಂಟ್ರಟೈನ್ಮೆಂಟ್ ಅಂತ ಹೇಳಲಾಗ್ತಿರೋ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಎಲ್ಲಾ ವಲಯಗಳಿಂದ ರಿಲೀಸ್ ಗೂ ಮೊದ್ಲೇ ಬರೊಬ್ಬರಿ 10 ಕೋಟಿ ವ್ಯಾಪಾರ ಮಾಡಿದ್ದು, ಸಿನಿಮಾ ರಿಲೀಸ್ ಆಗೋ ಮೊದಲ ವಾರದಲ್ಲೇ 7ರಿಂದ 8ಕೋಟಿ ಶೇರ್ ಗಳಿಸೋ ಸೂಚನೆ ಕೊಟ್ಟಿದೆಯೆಂದು ಕನ್ನಡ ಸಿನಿಮಾ ವಿತರಕರ ವಲಯದಲ್ಲಿ ಮಾತುಗಳು ಕೇಳಿ ಬರ್ತಿವೆ.

ರಾಜ್ಯದಾದ್ಯಂತ ಗಲ್ಲಿಗಲ್ಲಿಯಲ್ಲೂ ಕ್ರೇಜ್ ಹುಟ್ಟಿಸಿದ PMT
ಫೆ.21ಕ್ಕೆ ಶಿವರಾತ್ರಿ ಸಂಭ್ರಮಕ್ಕೆ PMT ಗ್ರ್ಯಾಂಡ್ ರಿಲೀಸ್

ಅಂದ್ಹಾಗೆ ಕರ್ನಾಟಕದ ಜಿಲ್ಲಾ ತಾಲ್ಲೂಕು ಸೇರಿ ಸಣ್ಣ ಥಿಯೇಟರ್ ಗಳಿರೋ ಊರುಗಳಿಂದಲೂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಪ್ರದರ್ಶನಕ್ಕೆ ಬೇಡಿಕೆ ಶುರುವಾಗಿದೆ. ರಾಜ್ಯದಾದ್ಯಂತ ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾವನ್ನ ರಿಲೀಸ್ ಮಾಡೋದಕ್ಕೆ ಪ್ಲಾ ನ್ ಮಾಡಿದ್ದು, ಈ ವಾರ ಥಿಯೇಟರ್ ಲಿಸ್ಟ್ ನ ಅನೌನ್ಸ್ ಮಾಡಲಿದ್ದಾರಂತೆ ವಿತರಕರು. ಒಟ್ಟಾರೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಕ್ರೇಜ್ ದೊಡ್ಡದಾಗಿದೆ. ಈ ಸಿನಿಮಾದ ಈಗಿನ ಕ್ರೇಜ್ ನೋಡಿದ್ರೆ. ಗ್ಯಾರೆಂಟಿ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ದಾಖಲೆಯಾಗಿ ನೆಲೆ ನಿಲ್ಲೋ ಸೂಚನೆ ಸಿಕ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top