ಕಬ್ಬನ್‌ ಪಾರ್ಕ್‌ನಲ್ಲಿ ಫೋಟೋ ಶೂಟ್‌ ಮಾಡಿದ್ರೆ ಇನ್ಮೇಲೆ ಕ್ಯಾಮೆರಾ ಸೀಜ್‌..!

photoshoot ban in cubbon park

ನೀವೇನಾದ್ರೂ ಕಬ್ಬನ್‌ ಪಾರ್ಕ್‌ನಲ್ಲಿ ಫೋಟೋ ಶೂಟ್‌ ಮಾಡಿಸೋ ಪ್ಲಾನ್‌ ಏನಾದ್ರೂ ಹಾಕಿಕೊಂಡಿದ್ದೀರಾ, ಹಾಗೇನದ್ರೂ ಹಾಕಿಕೊಂಡಿದ್ರೆ ಅದರ ಆಸೆಯನ್ನು ಬಿಟ್ಟು ಬಿಡಿ..ಇನ್ಮೇಲೆ ಫೋಟೋ ಶೂಟ್‌ ಮಾಡೋದು ಕಂಡು ಬಂದರೆ ಬೆಲೆ ಬಾಳುವ ಕ್ಯಾಮೆರಾ ಸೀಜ್‌ ಮಾಡುವ ಜೊತೆಗೆ ದಂಡವನ್ನು ಕಟ್ಟಿಸಿಕೊಳ್ಳಲು ಹೊಸ ಕಾಯ್ದೆಯನ್ನು ತರಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಈ ಹಿಂದೆಯೂ ಲಾಲ್‌ ಬಾಗ್‌ ಮತ್ತು ಕಬ್ಬನ್‌ ಪಾರ್ಕ್‌ಗಳಲ್ಲಿ ಫೋಟೋ ತೆಗೆಯುವುದನ್ನು ನಿರ್ಬಂಧಿಸಿದ್ದರು ಜನ ಇದಕ್ಕೆ ಕ್ಯಾರೆ ಎನ್ನದೇ ಫೋಟೋ ಶೂಟ್‌ಗಳನ್ನು ಮಾಡಿಕೊಳ್ಳುತ್ತಿದ್ದರು.

ಇನ್ನು ಕಬ್ಬನ್‌ ಪಾರ್ಕ್‌ನಲ್ಲಿ ಪ್ರಿವೆಡ್ಡಿಂಗ್‌ ಫೋಟೋ ಶೂಟ್‌ಗಳನ್ನು ಮಾಡಿಕೊಳ್ಳುವವರು ಎಲ್ಲಿ ಬೇಕು ಅಲ್ಲೇ ಡ್ರೆಸ್‌ಗಳನ್ನು ಬದಲಿಸಿಕೊಳ್ಳುವುದರಿಂದ ವಾಯುವಿಹಾರಕ್ಕೆ ಬರುವವರಿಗೆ ಇರಿಸುಮುರಿಸು ಉಂಟಾಗುತ್ತಿದ್ದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲು ತೋಟಗಾರಿಕೆ ಇಲಾಖೆಯವರು ನಿರ್ಧರಿಸಿದ್ದಾರೆ. ಅಲ್ಲದೇ ಸಾಕಷ್ಟು ಜನ ಈ ವಿಚಾರವಾಗಿ ಇಲಾಖೆಗೆ ಅನೇಕ ಬಾರಿ ದೂರುಗಳನ್ನು ಸಹ ನೀಡಿದ್ದಾರೆ.

ಜೊತೆಗೆ ಹೈ ರೆಸ್ಯೂಲೇಷನ್‌ ಕ್ಯಾಮರಾಗಳನ್ನು ಬಳಸುವುದರಿಂದ ಕಬ್ಬನ್‌ ಪಾರ್ಕ್‌ನಲ್ಲಿ ಇರುವ ಪಕ್ಷಿಗಳಿಗೂ ಅದರಿಂದ ತೊಂದರೆಯಾಗುವುದರಿಂದ ತೋಟಗಾರಿಕೆ ಇಲಾಖೆ ಈ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು. ಇನ್ನು ಕೆಲವೇ ದಿನಗಳಲ್ಲಿ ಫೋಟೋ ಶೂಟ್‌ಗೆ ಬಳಸುವ ಕ್ಯಾಮೆರಾಗಳನ್ನು ಸೀಜ್‌ ಮಾಡಿ ದಂಡ ಕಟ್ಟಿಸಿಕೊಳ್ಳುವ ಕಾಯ್ದೆಯನ್ನು ಪ್ರಯೋಗಿಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top