
ಫ್ಯಾಂಟಮ್ ಚಿತ್ರದ ಮೋಸ್ಟ್ ಪವರ್ ಫುಲ್ ಕ್ಯಾರೆಕ್ಟರ್ ಪೋಸ್ಟರ್ ಇವತ್ತು ರಿಲೀಸ್ ಆಗಿದೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಕ್ಯಾರೆಕ್ಟರ್ನ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಕಿಚ್ಚ ಸುದೀಪ್ ಅವರ ಪವರ್ ಫುಲ್ ಲುಕ್ಗೆ ಸಿನಿರಸಿಕ ಫುಲ್ ಫಿದಾ ಆಗಿದ್ದಾರೆ. ಇನ್ನು ವಿಕ್ರಾಂತ್ ರೋಣ ಹೆಸರಲ್ಲಿ ಎಷ್ಟು ಪವರ್ ಇದ್ಯೋ ಕ್ಯಾರೆಕ್ಟರ್ ಕೂಡ ಅಷ್ಟೇ ಪವರ್ ಫುಲ್ ಆಗಿದೆ, ಇಲ್ಲಿ ವಿಕ್ರಾಂತ್ ರೋಣ ಏನ್ ಮಾಡ್ತಾನೆ, ಯಾಕ್ ಮಾಡ್ತಾನೆ ಅನ್ನೋದು ಅರ್ಥ ಆಗೋಲ್ಲ, ಆದ್ರೆ ಆತ ಮಾಡೋದಿಕ್ಕೆ ಒಂದು ಕಾರಣ ಇರುತ್ತೆ ಅನ್ನೋ ಕುತೂಹಕಾರಿ ಮಾಹಿತಿಯನ್ನ ನಿರ್ದೇಶಕ ಅನೂಪ್ ಬಂಡಾರಿ ಬಿಟ್ಟುಕೊಟ್ಟಿದ್ದಾರೆ.
ಕಲ್ಲಿನ ಚೇರ್ ಮೇಲೆ ಕುಳಿತಿರೋ ರಗಡ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು, ವಿಕ್ರಾಂತ್ ರೋಣ ಫಸ್ಟ್ ಲುಕ್ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
