ಪಾಕ್‌ ಮಾಜಿ ಅಧ್ಯಕ್ಷ ಮುಷರಫ್‌ಗೆ ಗಲ್ಲು ಶಿಕ್ಷೆ..!

ಪಾಕ್‌ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ಗೆ ಗಲ್ಲು ಶಿಕ್ಷೆ ವಿಧಿಸಿ, ಕೋರ್ಟ್‌ ಆದೇಶ ನೀಡಿದೆ. ದೇಶದ್ರೋಹ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮುಷರಫ್‌ ಅವರಿಗೆ ಪೇಶಾವರ ಹೈಕೋರ್ಟ್‌ ಗಲ್ಲುಶಿಕ್ಷೆ ವಿಧಿಸಿದೆ. ಈ ಮೂಲಕ ಪಾಕಿಸ್ತಾನದ ಇತಿಹಾಸಲ್ಲಿ ಮೊದಲ ಬಾರಿಗೆ ಗಲ್ಲು ಶಿಕ್ಷೆಗೆ ಒಳಗಾದ ಅಧ್ಯಕ್ಷ ಎಂಬ ಕುಖ್ಯಾತಿಗೆ ಮುಷರಪ್‌ ಗುರಿಯಾಗಿದ್ದಾರೆ.ಸದ್ಯ ದುಬೈನಲ್ಲಿ ನೆಲೆಸಿರುವ ಮುಷರಫ್‌ 1999 ರಿಂದ 2028 ವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು. ಇನ್ನು ಅಧ್ಯಕ್ಷರಾಗಿದ್ದ ವೇಳೆ ಅಧಿಕಾರ ದುರುಪಯೋಗ ಮಾಡಿಕೊಂಡು ದೇಶದಲ್ಲಿ ತುರ್ತು ಪರಿಸ್ಥತಿ ಏರಿದ್ದರು, ತದನಂತರ ಅಧಿಕಾರಕ್ಕೆ ಏರಿದ ನವಾಜ್‌ ಷರೀಫ್‌ ಸರ್ಕಾರ ಮುಷರಫ್‌ ವಿರುದ್ಧ ದೇಶದ್ರೋಹದ ಆರೋಪ ಹೊರೆಸಿ ಪ್ರಕರಣ ದಾಖಲಿಸಿತ್ತು. ಸದ್ಯ ಆರೋಪ ಸಾಬೀತಾಗಿದ್ದು ಮುಷರಫ್‌ಗೆ ಗಲ್ಲು ಶಿಕ್ಷೆ ವಿಧಿಸಿ ಅಲ್ಲಿನ ಕೋರ್ಟ್‌ ತೀರ್ಪು ನೀಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top