2020 ರೇಮೊ ಹಂಗಾಮ, ವರ್ಷಾರಂಭದಲ್ಲೇ ಕ್ರೇಜ್ ಹುಟ್ಟಿಸ್ತಿದೆ ಒಡೆಯರ್ ಸಿನಿಮಾ..!!!

ಹೊಸ ವರ್ಷಕ್ಕೆ, ಹೊಸ ಟ್ರೆಂಡ್ ಸೃಷ್ಟಿಸೋದಕ್ಕೆ ನಿರ್ದೇಶಕ ಪವನ್ ಒಡೆಯರ್ ರೇಮೊ ಟೀಮ್ ಸಜ್ಜಾಗಿದೆ. 2020ರಲ್ಲಿ ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡೋದಕ್ಕೆ ಮುಂದಾಗಿದೆ. ಅದ್ರಂತೆ, ನಾಳೆ ರೇಮೊ ಟೀಮ್ ಮೋಷನ್ ಪೋಸ್ಟರ್ ರಿಲೀಸ್ ಮಾಡ್ತಿದೆ.


ರೇಮೊ… ಹೊಸ ಲವ್ ಅಡ್ವೆಂಚ್ಚರ್.. ಹೊಸ ರಾಕ್ ಅಡ್ವೆಂಚ್ಚರ್.. ಟೈಟಲ್ ನಿಂದ್ಲೇ, ಕಾಂಬಿನೇಷನ್ ನಿಂದ್ಲೇ ದೊಡ್ಡ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಗೂಗ್ಲಿ ಅಂತಹ ಲವ್ಲಿ ಮೆಗಾ ಹಿಟ್ ಸಿನಿಮಾ ಕೊಟ್ಟು, ಸ್ಯಾಂಡಲ್ವುಡ್ ಅಂಗಳದಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿದ, ಸ್ಟೈಲಿಶ್ ಸಿನಿಮಾ ಡೈರೆಕ್ಟರ್ ಅನ್ನೋ ಖ್ಯಾತಿ ಪಡೆದ ನಿರ್ದೇಶಕ ಪವನ್ ಒಡೆಯರ್ ಇದೇ ಮತ್ತೆ ಅಂಥಹದೊಂದು ಸ್ಟೈಲಿಶ್, ಲವಿಶ್, ಮಾಸ್ ಫ್ಲೇವರ್ ಇರೋ ಮಸ್ತ್ ರಾಕ್ ಸಬ್ಜೆಕ್ಟ್ ನೊಂದಿಗೆ ಸೂಪರ್ ಹ್ಯಾಡ್ಸಂ ಹೀರೋ ಜೊತೆಗೆ ರೇಮೊ ಸಿನಿಮಾ ಮಾಡ್ತಿದ್ದಾರೆ.

ರೇಮೊ ನಿಮಗೆಲ್ಲಾ ಗೊತ್ತಿರೋ ಹಾಗೇ, ರೋಗ್ ಖ್ಯಾತಿಯಾ ಇಶಾನ್ ನಾಯಕನಟನಾಗಿ ಕಾಣಿಸಿಕೊಳ್ತಿರೋ ಸಿನಿಮಾ. ಖ್ಯಾತ ನಿರ್ಮಾಪಕ ಸಿ.ಆರ್ ಮನೋಹರ್ ಅವ್ರ ಪ್ರೀತಿಯ ಸಹೋದರ. ಇಶಾನ್ ಬಗ್ಗೆ ಎಲ್ಲಾರಿಗೂ ಗೊತ್ತಿರೋ ಹಾಗೇ, ಹೀ ಈಸ್ 100 ಪರ್ಸೆಂಟ್ ಹೀರೋ ಮೆಟಿರಿಯಲ್. ಯಾರಿಗೇನೂ ಕಮ್ಮಿಯಿಲ್ಲದಂತಹ ವರ್ಚ್ಚಸ್ಸು, ಟ್ಯಾಲೆಂಟು ಇರುವಂತಹ ಪ್ರತಿಭೆ. ಇಂತಹ ಪ್ರತಿಭೆಯ ಜೊತೆಗೆ ಅಶಿಕಾ ರಂಗನಾಥ್ ಅನ್ನೋ ಕನ್ನಡದ ಹಿಟ್ ಮತ್ತು ಬ್ಯೂಟಿಫುಲ್ ನಾಯಕಿ ಜೊತೆಯಾಗಿದ್ದಾರೆ.

ಪವನ್ ಒಡೆಯರ್ ಗೆ ಇಂತಹ ನ ಹೀರೋ ಹೀರೋಯಿನ್ ಮತ್ತು ಸಿ.ಆರ್ ಮನೋಹರ್ ಅಂತಹ ಪ್ಯಾಶನಬಲ್ ಪ್ರೊಡ್ಯೂಸರ್ ಜೊತೆಯಾದ್ರೆ, ಅದಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ರಾಗ ಸೇರಿದ್ರೆ, ವೈದಿಯಂತಹ ಕ್ಯಾಮೆರಾ ಕಣ್ಣು ಜೊತೆಯಾದ್ರೆ, ಅಬ್ಬಾ ಖಂಡಿತ ಎದೆ ತಟ್ಟಿಕೊಂಡು ಹೇಳಬಹುದು ಈ ಕಾಂಬಿನೇಷನ್ ನಲ್ಲೊಂದು ಅದ್ಭುತ ಸೃಷ್ಟಿಯಾಗುತ್ತೆ. ಮ್ಯಾಜಿಕ್ ಆಗುತ್ತೆ ಅಂತಹ. ಅಂತಹ ಸೂಪರ್ ಸಕ್ಸಕ್ ಸ್ಮೆಲ್ ರೇಮೊ ಟೀಮ್ ಕೊಡ್ತಿದೆ. ಮೊನ್ನೆಯಷ್ಟೇ ಸೌತ್ ಫ್ರೀಕಾ ಪೋರ್ಷನ್ ಶೂಟಿಂಗ್ ಮುಗಿಸಿಕೊಂಡು ಬಂದಿರೋ ಚಿತ್ರತಂಡ, ಇದೀಗ ಮೋಷನ್ ಪೋಸ್ಟರ್ ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ.

ಅದ್ರಂತೆ, ನಾಳೆ ಸಂಜೆ 4ಗಂಟೆಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಗ್ರ್ಯಾಂಡ್ ಆಗಿ ಲಾಂಚ್ ಮಾಡ್ತಿದೆ. ಈಗಾಗ್ಲೇ ಈ ಸಿನಿಮಾ ಮೇಲೆ, ಕನ್ಮನಡ ಸಿನಿಪ್ರಿಯರಲ್ಲಿ, ಚಿತ್ರೋದ್ಯಮದಲ್ಲಿ ವಿಶಿಷ್ಠ ಕುತೂಹಲ ಮೂಡಿದ್ದು, ಭರವಸೆ ಹೆಚ್ಚಿಸಿದೆ. ಅಂದ್ಹಾಗೆ ರೇಮೊ ಚಿತ್ರವನ್ನ ಜೈಯಾದಿತ್ಯ ಫಿಲಂಸ್ ಬ್ಯಾನರ್ ನಲ್ಲಿ ಅದ್ಧೂರಿ ಚಿತ್ರಗಳ ಸರದಾರ ಸಿ.ಆರ್ ಮನೋಹರ್ ಜೊತೆಗೆ ಸಿ.ಆರ್ ಗೋಪಿ ದುಬಾರಿ ನಿರ್ಮಾಣದಲ್ಲಿ ತಯಾರಾಗ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top