ಬೆಂಗಳೂರಿನ ಒಂದು ಪಾರ್ಕ್‍ನಲ್ಲಿ ಅವಳು ಬಂದು ಕೇಳಿದ್ದೇನು?

ಬೆಂಗಳೂರಿನ ಒಂದು ಪಾರ್ಕ್‍ನಲ್ಲಿ ಅವಳು ಬಂದು ಕೇಳಿದ್ದೇನು? ನಾನು ಹೇಳಿದ್ದೇನು? ಅಷ್ಟಕ್ಕೂ ಅವಳ್ಯಾರು?

ಆಫೀಸಲ್ಲಿ ಕೆಲಸ ಕೆಲಸ ಕೆಲಸ…! ಸಾಕಾಗಿ ಹೋಗಿರುತ್ತೆ. ಯಾವನಿಗೆ ಬೇಕಪ್ಪಾ ಈ ಬೆಂಗಳೂರು ಮೆಕಾನಿಕಲ್ ಲೈಫು ಅಂತ ತುಂಬಾನೇ ಬೇಜಾರಾದಾಗ. ಮನಸ್ಸಿಗೆ ರಿಲೀಫ್ ಬೇಕು ಅಂತ ಪಾರ್ಕ್ ನಲ್ಲಿ ಸುತ್ತೋದು ನನ್ನ ಅಭ್ಯಾಸ.
ಮೊನ್ನೆ ಹೀಗೆ ಆಫೀಸಿಂದ ಮನೆಗೆ ಬೇಗ ಬಂದೆ. ನನ್ನವಳು ಇನ್ನೂ ಮನೆಗೆ ಬಂದಿರಲಿಲ್ಲ. ಒಬ್ಬನೇ ಪಾರ್ಕ್‍ಗೆ ಹೋಗಿ ವಾಕ್ ಮಾಡುತ್ತಿದ್ದೆ .
ಏನೇನೋ ಯೋಚನೆಗಳು, ಭವಿಷ್ಯದ ಕನಸುಗಳಲ್ಲಿ ನಾನು ಕಳೆದು ಹೋಗಿದ್ದೆ. ಸುಮಾರು ಅರ್ಧ ಗಂಟೆ ಹಾಗೆ ವಾಕ್ ಮಾಡುತ್ತಿದ್ದೆ ಅಷ್ಟೊತ್ತಿಗೆ ಅಪರಿಚಿತ ಯುವತಿಯೊಬ್ಬಳು ಹತ್ತಿರ ಬಂದಳು. ಮುಖವನ್ನು ವೇಲ್ ನಿಂದ ಮುಚ್ಚಿಕೊಂಡಿದ್ದಳು. ನನ್ನ ಬಳಿ ಬಂದವಳೇ `ಎಕ್ಸ್ ಕ್ಯೂಸ್ ಮೀ’ ನಿಮ್ಮ ಜೊತೆ ಯಾರಾದರೂ ಇದಾರಾ ಎಂದು ಇಂಗ್ಲಿಷ್‍ನಲ್ಲಿ ಕೇಳಿದಳು. ಹ್ಞೂಂ ನನ್ನ ಹೆಂಡತಿ ಇದಾಳೆ ಅಂದೆ.

ಯಾಕೆ ಕೇಳ್ತಿದೀರಾ ಅಂದೆ, ಇಲ್ಲ ನೀವು ಸಿಂಗಲ್ ಅನ್ಕೊಂಡೆ ಅಂದ್ಲು, ಹೆಸರ ಕೇಳಿದಳು ಅದು ಹೇಳಿದೆ ನೀವು ನಾರ್ತ್ ಇಂಡಿಯನ್ ಕಡೆಯವರ ಅಂದಳು, ಇಲ್ಲ ಕರ್ನಾಟಕದವನೇ ,ಕನ್ನಡದವನು ಅಂದೆ,
ನೀವು ಸೌತ್ ಇಂಡಿಯನ್ ರೀತಿ ಕಾಣಲ್ಲ ಎಂದಳು. ನಾನು ಹ್ಞೂಂ ಎಂದೆ…! ಅಷ್ಟೇ.. ನಾನು ಯಾಕೋ ಇವಳು ಹಿಂಗ್ಯಾಕೆ ಕೇಳ್ತಿದಾಳೆ ಅಂತ ನನ್ ಪಾಡಿಗೆ ನಾನು ವಾಕ್ ಮುಂದುವರಿಸಿದೆ. ಅವಳು ಬಹಳ ಹೊತ್ತು ಅನುಮಾನಸ್ಪದವಾಗಿ ತಿರುಗುತ್ತಿದ್ದಳು.
ನಂತರ ಹೆಚ್ಚು ಕಮ್ಮಿ ಅರ್ಧಗಂಟೆಗಳ ಕಾಲ ಅವಳು ಅದೇ ಪಾರ್ಕ್ ನಲ್ಲಿ ಸುತ್ತುತ್ತಾ ಇದ್ದಳು…! ಕೆಲವರನ್ನು ಮಾತಾಡಿಸಿದಳು…! ಅವರ ಬಳಿ ಏನು ಮಾತಾಡಿದಳೆಂದು ನಂಗೆ ಗೊತ್ತಿಲ್ಲ.
ಸ್ವಲ್ಪ ಹೊತ್ತಿಗೆ ನನ್ನ ಹೆಂಡತಿ ಬಂದಳು. ಹೇ, ಅವಳನ್ನು ಗಮನಿಸು. ನನ್ನ ಜೊತೆ ಹೀಗೆ ಮಾತಾಡಿ ಹೋದಳು ಎಂದು ವಿವರಿಸಿದೆ. ನನ್ನಾಕೆ ಸೂಕ್ಷ್ಮವಾಗಿ ಅವಳನ್ನು ಗಮನಿಸಿದಳು.
ಆ ಅಪರಿಚಿತ ಯುವತಿ ಪಾರ್ಕ್ ನಿಂದ ಆಚೆ ಹೋಗುವಾಗ ಅವಳನ್ನು ನನ್ನಾಕೆ ಹಿಂಬಾಲಿಸಿದಳು. ಅವಳು ಮುಖಕ್ಕೆ ಕಟ್ಟಿದ್ದ ಬಟ್ಟೆಯನ್ನು ತೆಗೆದು ಸ್ಕೂಟಿ ಹತ್ತಿ ಹೋದಳು..!
ನೋಡಲು ತುಂಬಾ ಚೆನ್ನಾಗಿದ್ದಳು. ನಾರ್ತ್ ಇಂಡಿಯಾ ಕಡೆಯವಳು ಅಂತ ಅನಿಸುತ್ತೆ ಎಂದು ನನ್ನಾಕೆ ಹೇಳಿದಳು.
ಅಷ್ಟಕ್ಕೂ ಆಕೆ ಯಾರು? ಆ ವೇಳೆ ನನ್ನ ಜೊತೆ ಯಾರದರೂ ಸ್ನೇಹಿತರಿದ್ದಿದ್ದರೆ ಅವಳನ್ನು ಹಿಂಬಾಲಿಸಿ ತಿಳಿಯಬಹುದಿತ್ತೇನೋ?
ಆಕೆ ಕಾಲ್ ಗರ್ಲ್ ಅಂತ ಒಮ್ಮೆ ಅನಿಸುತ್ತೆ? ಅವಳು ಕಾಲ್ ಗರ್ಲಾ? ಗಿರಾಕಿ ಹುಡ್ಕೊಂಡು ಬಂದಿದ್ದಳೋ? ಅಥವಾ ಹಣದ ಅನಿವಾರ್ಯತೆ ಅವಳನ್ನು ಅಡ್ಡ ದಾರಿಗೆ ನೂಕುವಂತೆ ಪ್ರೇರೇಪಿಸಿತ್ತೇ? ಅಥವಾ ಡ್ರಗ್ಸ್ ಜಾಲವೇ? ಅವಳ ಮೂಲಕ ಯುವಕರನ್ನು ಬುಟ್ಟಿಗೆ ಹಾಕಿಕೊಂಡು ದಾರಿತಪ್ಪಿಸುವ ಕೆಲಸ ಆಗುತ್ತಿದೆಯೇ? ಹನಿಟ್ರ್ಯಾಪ್ ಮಾಡಲಾಗುತ್ತದೆಯೇ? ಇತ್ಯಾದಿ ಇತ್ಯಾದಿ ಅನುಮಾನಗಳು ಮೂಡ ತೊಡಗಿವೆ.
ಸ್ನೇಹಿತರೇ ಯಾವುದಕ್ಕೂ ಸ್ವಲ್ಪ ಹುಷಾರಾಗಿರಿ. ನಿಮಗೂ ಇಂಥಾ ಯಾವುದಾದರು ಅನುಭವಗಳಾಗಿದ್ದಲ್ಲಿ ಇಲ್ಲಿ ಹಂಚಿಕೊಳ್ಳಿ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top