ಒಂದೇ ಪಂದ್ಯದಲ್ಲಿ ಪಾಂಡ್ಯ ಬ್ರದರ್ಸ್!

pandya brothers playing first match together

ಟೀಂ‌ ಇಂಡಿಯಾದ ಆಲ್‌ರೌಂಡರ್ ಬ್ರದರ್ಸ್ ಹಾರ್ದಿಕ್‌ ಪಾಂಡ್ಯ, ಕೃನಾಲ್ ಪಾಂಡ್ಯ ಈ ಇಬ್ಬರು ಆಟಗಾರರ ಬಹುದಿನದ ಕನಸು ಕೊನೆಗೂ ನನಸಾಗಿದೆ. ಹೌದು ಹಾರ್ದಿಕ್ ಮತ್ತು ಕೃನಾಲ್ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ‌ ಟಿ20 ಪಂದ್ಯದಲ್ಲಿ ಒಟ್ಟಿಗೆ ಪಂದ್ಯವನ್ನು ಆಡುವ ಮೂಲಕ ಪಠಾಣ್ ಬ್ರದರ್ಸ್ ನಂತರ ಟೀಂ‌ ಇಂಡಿಯಾದಲ್ಲಿ ಕಾಣಿಸಿಕೊಳ್ತಾ ಇರೋ ಸಹೋದರರಾಗಿದ್ದಾರೆ. ಈ ಹಿ‌ಂದೆ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಪಾಂಡ್ಯ ಬ್ರದರ್ಸ್‌ ಇದ್ದರು ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಪಂದ್ಯದಿಂದ‌ ಹೊರ ಉಳಿದಿದ್ದರು. ಆದ್ರೆ ಈ ಬಾರಿ ಇಬ್ಬರು ಒಂದೇ ಪಂದ್ಯದಲ್ಲಿ ಆಡುವ ಮೂಲಕ ದಾಖಲೆ ಬರೆದಿದ್ದಾರೆ. ಇನ್ನು ಈ ಸಹೋದರರು ಐಪಿಎಲ್ ನಲ್ಲಿ ಮುಂಬೈಇಂಡಿಯನ್ಸ್ ಪರ ಒಟ್ಟಿಗೆ ಆಡುವ ಮೂಲಕ ಐಪಿಎಲ್ ನಲ್ಲಿ ಸ್ಟಾರ್ ಆಟಗಾರರಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top