`ಪೈಲ್ವಾನ್-2′ ಚಿತ್ರಕ್ಕೆ ಕಿಚ್ಚ ಸುದೀಪ್ ರೆಡಿ- ಆದ್ರೆ ಕಂಡೀಷನ್ ಅಪ್ಲೈ.!

pailwan 2

ಪೈರಸಿಯ ಕಾಟದ ನಡುವೆಯೂ ಬಾಕ್ಸಾಫಿಸ್‍ನಲ್ಲಿ ಧೂಳೇಬ್ಬಿಸಿದ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ದಾಖಲೆಯ ಕಲೆಕ್ಷನ್ ಜೊತೆ ಥಿಯೇಟರ್ ನಲ್ಲಿ ಮುನ್ನುಗ್ಗುತ್ತಿದೆ, ಈ ನಡುವೇ ಈಗ ಕಿಚ್ಚ ಸುದೀಪ್ ಪೈಲ್ವಾನ್ ಸೀಕ್ಷೆಲ್‍ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. Read : TVಯಲ್ಲಿ ಬರ್ತಾ ಇದೆ ದರ್ಶನ್ ಸಿನಿಮಾ ಕುರುಕ್ಷೇತ್ರ.!
ಪೈಲ್ವಾನ್ ಚಿತ್ರದ ಟೈಂನಲ್ಲೇ ಪೈಲ್ವಾನ್ 2 ಚಿತ್ರದ ಸ್ಕ್ರಿಪ್ಟ್ ವರ್ಕ್ ಮುಗಿಸಿದ್ದ ನಿರ್ದೇಶಕ ಕೃಷ್ಣ ಈಗಾಗಲೇ ಸುದೀಪ್ ಅವರಿಗೆ ಕಥೆಯನ್ನು ಹೇಳಿದ್ದಾರೆ, ಕಥೆ ಕೇಳಿದ ಕಿಚ್ಚ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇನ್ನು ಈ ಬಗ್ಗೆ ಕೆಲವು ದಿನಗಳ ಹಿಂದೆ ಬನ್ನಿ ಕೃಷ್ಣ ಮತ್ತೆ ಸಿನಿಮಾ ಮಾಡೋಣ’ ಅಂತ ಟ್ವೀಟ್ ಮಾಡಿದ್ರು, ಆದ್ರೆ ಪೈಲ್ವಾನ್ ಸಿನಿಮಾದ ಕಥೆ ಕೇಳಿ ಓಕೆ ಎಂದಿರೋ ಕಿಚ್ಚ ಮಾತ್ರ ಡೈರೆಕ್ಟರ್ ಕೃಷ್ಣ ಅವರಿಗೆ ಒಂದು ಕಂಡೀಷನ್ ಹಾಕಿದ್ದಾರಂತೆ, ಪೈಲ್ವಾನ್ 2 ಚಿತ್ರದಲ್ಲಿ ನಾನು ಪೈಲ್ವಾನ್ ಆಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಕಂಡೀಷನ್ ಹಾಕಿದ್ದಾರಂತೆ, ಈ ಹಿಂದೆ ಪೈಲ್ವಾನ್ ಸಿನಿಮಾ ರಿಲೀಸ್ ಆದ ಸಂಧರ್ಭದಲ್ಲಿ ಮತ್ತೆ ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಅಂತ ಹೇಳಿದ್ದ ಕಿಚ್ಚಪೈಲ್ವಾನ್ 2′ ಚಿತ್ರದಲ್ಲಿ ಗುರುವಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. Read : ಅಕ್ಟೋಬರ್ 13ರಿಂದ ಬಿಗ್‍ಬಾಸ್ ಶುರು.. ಯಾರೆಲ್ಲಾ ಇರ್ತಾರೆ ಗೊತ್ತಾ..?

ಪೈಲ್ವಾನ್ ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಕಿಚ್ಚ ಬಾಕ್ಸಿಂಗ್‍ನಲ್ಲಿ ಗೆಲ್ಲುತ್ತಾರೆ ಅಲ್ಲಿ ಪೈಲ್ವಾನ್ 2 ಸೀಕ್ವೆಲ್ ಸುಳಿವು ನೀಡಿದ್ದ ನಿರ್ದೇಶಕರು ಪೈಲ್ವಾನ್ 2ನಲ್ಲಿ ಕಿಚ್ಚನನ್ನು ಬಾಕ್ಸರ್ ಕೋಚ್ ಆಗಿ ಮಾಡುತ್ತಾರೆ ಅನ್ನೋ ಮಾತುಗಳಿವೆ, ಅದೇನೆ ಇದ್ರು ಸದ್ಯ ಕೋಟಿಗೊಬ್ಬ 3 ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿ ಇರೋ ಕಿಚ್ಚ ಚಿತ್ರೀಕರಣ ಮುಗಿಸಿ, ನಂತರ ಅನೂಪ್ ಭಂಡಾರಿ ನಿರ್ದೇಶನದ ಬಿಗ್‍ಬಜೆಟ್ ಸಿನಿಮಾದ ಕೆಲಸ ಮುಗಿದ ನಂತರವಷ್ಟೇ `ಪೈಲ್ವಾನ್ 2′ ಸಿನಿಮಾ ಶುರುವಾಗಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top