ಕಿಚ್ಚನ ಪೈಲ್ವಾನ್‌ ಸಿನಿಮಾಗೆ ಬಂಡವಾಳ ಹಾಕಿದ್ದು ನಟ ಯಶ್‌ ಮತ್ತು ನಿಖಿಲ್‌..!

ಪೈಲ್ವಾನ್‌ ಸಿನಿಮಾ ರಿಲೀಸ್‌ ಆಗಿ 50 ದಿನಗಳನ್ನು ಪೂರೈಸಿದೆ.. 50 ದಿನ ಪೂರೈಸಿದ ಖುಷಿಯನ್ನು ನಿರ್ಮಾಪಕಿ ಸ್ವಪ್ನ ಕೃಷ್ಣ ಹಂಚಿಕೊಂಡಿದ್ದು, ಇದೇ ವೇಳೆ ಪೈಲ್ವಾನ್‌ ಸಿನಿಮಾದ ಇನ್ನೊಂದು ಸೀಕ್ರೆಟ್‌ ಕೂಡ ಹೇಳಿದ್ದಾರೆ. ಪೈಲ್ವಾನ್‌ ಸಿನಿಮಾ ಹಣಕಾಸಿನ ತೊಂದರೆ ಎದುರಿಸುತ್ತಿದ್ದಾಗ ಸ್ಯಾಂಡಲ್‌ವುಡ್‌ನ ಆ ಎರಡು ನಟರು ಪೈಲ್ವಾನ್‌ ಸಿನಿಮಾಗೆ ಹಣದ ಸಹಾಯ ಮಾಡಿದ್ದಾರಂತೆ. ಹೌದು ಈ ವಿಚಾರವನ್ನು ಸ್ವತಃ ಪೈಲ್ವಾನ್‌ ಸಿನಿಮಾದ ನಿರ್ಮಾಪಕಿ ಹೇಳಿಕೊಂಡಿದ್ದಾರೆ. ಪೈಲ್ವಾನ್‌ ಸಿನಿಮಾ ಬಿಡುಗಡೆ ಹಂತದಲ್ಲಿ ಇದ್ದಾಗ ಬಿಡುಗಡೆಗೆ ಹಣದ ಕೊರತೆ ಉಂಟಾದ ನಟ ಯಶ್‌ ಮತ್ತು ನಿಖಿಲ್‌ ಕುಮಾರಸ್ವಾಮಿ ʻಪೈಲ್ವಾನ್ʼ ಸಿನಿಮಾಗೆ ಹಣಕಾಸಿನ ಸಹಾಯ ಮಾಡಿದ್ದರು ಎಂದು ತಮ್ಮ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಸಿನಿಮಾಗೆ ಹಣಕಾಸಿನ ತೊಂದರ ಬಂದಾಗ ಕೃಷ್ಣ ಜೊತೆ ಈ ಇಬ್ಬರು ನಟರು ನಿಂತರು. ಇವರು ನೀಡಿದ ಹಣಕಾಸಿನ ಸಹಕಾರದಿಂದ ಚಿತ್ರ ಸರಿಯಾದ ಸಮಯದಲ್ಲಿ ಬಿಡುಗಡೆಯಾಯ್ತು ಅಂತ ಹೇಳಿದ್ದಾರೆ.

ಒಬ್ಬ ತಂತ್ರಜ್ಞನನ್ನು ನಂಬಿ ಸಿನಿಮಾಗೆ ದುಡ್ಡಿನ ಸಹಾಯ ಮಾಡಿದ ಯಶ್‌ ಮತ್ತು ನಿಖಿಲ್‌ಗೆ ನಿರ್ಮಾಪಕಿ ಸ್ವಪ್ನ ಕೃಷ್ಣ ಟ್ವಿಟರ್‌ ಮೂಲಕ ಧನ್ಯವಾದ ಹೇಳಿದ್ದಾರೆ. ಇನ್ನು ಒಬ್ಬ ಸ್ಟಾರ್‌ ನಟನ ಸಿನಿಮಾಗೆ ಮತ್ತೊಬ್ಬ ನಟ ಹಣಕಾಸಿನ ಸಹಾಯ ಮಾಡುವುದು ಸ್ಯಾಂಡಲ್‌ವುಡ್‌ನಲ್ಲಿ ನಿಜಕ್ಕೂ ಒಂದೊಳ್ಳೆ ಬೆಳವಣಿಗೆ ಅಂತಾನೇ ಹೇಳಬಹುದು.

ಇನ್ನು ನಿರ್ದೇಶಕ ಕೃಷ್ಣ ನಟ ಯಶ್‌ ಅವರಿಗೆ ಗಜಕೇಸರಿ ಸಿನಿಮಾ ಮಾಡುವ ಮೂಲಕ ಕ್ಯಾಮರಮನ್‌ನಿಂದ ಡೈರೆಕ್ಟರ್‌ ಕ್ಯಾಪ್‌ ತೊಟ್ಟರು, ಸತತ ಮೂರು ಹಿಟ್‌ ಸಿನಿಮಾಗಳನ್ನು ನೀಡಿರೋ ಕೃಷ್ಣ ನಿಖಿಲ್‌ ಕುಮಾರಸ್ವಾಮಿ ಜೊತೆ ಸೇರಿ ಸಿನಿಮಾ ಮಾಡುತ್ತಿದ್ದು ಸದ್ಯದರಲ್ಲೇ ಸಿನಿಮಾ ಸೆಟ್ಟೇರಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top