ರಾಜ್ಯದಲ್ಲಿ ಈಗ ಈರುಳ್ಳಿಗೆ ಟೈಟ್ ಸೆಕ್ಯೂರಿಟಿ..!

ದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೆ ಏರುತ್ತಾ ಇದ್ದು, ಜನ ಸಾಮಾನ್ಯರಿಗೆ ಕೊಂಡು ಕೊಳ್ಳುವುದೇ ಕಷ್ಟದ ವಿಚಾರವಾಗಿ ಹೋಗಿದೆ.. ಈ ನಡುವೆ ಈಗ ಈರುಳ್ಳಿಗೆ ಕಳ್ಳರ ಕಾಟ ಕೂಟ ಶುರುವಾಗಿದ್ದು, ಕಳ್ಳರು ಚಿನ್ನ,ಒಡವೆ,ಹಣ ಕದಿಯುವುದನ್ನು ಬಿಟ್ಟು ಈಗ ಈರುಳ್ಳಿ ಕದಿಯಲು ಶುರುಮಾಡಿದ್ದಾರೆ, ಹೀಗಾಗಿ ಈಗ ಈರುಳ್ಳಿಗೆ ಟೈಟ್ ಸೆಕ್ಯೂರಿಟಿ ನೀಡಲು ರೈತರು ಮುಂದಾಗಿದ್ದು,ತಮ್ಮ ಹೊಲಗಳಲ್ಲಿ ರಾತ್ರೋ ರಾತ್ರಿ ಈರುಳ್ಳಿ ಕಳವಾಗುತ್ತಿರುವುದರಿಂದ ಮನೆಮಂದಿಯೆಲ್ಲಾ ಈಗ ಹೊಲದಲ್ಲಿ ಈರುಳ್ಳಿ ರಕ್ಷಣೆಗೆ ಮುಂದಾಗಿದ್ದಾರೆ.ಇನ್ನು ಎಪಿಎಂಸಿಗಳಲ್ಲಿ ತಾವು ಮಾರಾಟಕ್ಕೆ ತಂದ ಈರುಳ್ಳಿ ಮಾರಾಟವಾಗುವವರೆಗೂ ಈರುಳ್ಳಿ ಮೂಟೆಯಿಂದ ಎಲ್ಲೂ ಕದಲದ ರೀತಿ ನಿಂತು ಈರುಳ್ಳಿಯನ್ನು ಕಾಯುತ್ತಿದ್ದಾರಂತೆ.

ಒಟ್ಟಿನಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿದ್ದು ಈಗ ಚಿನ್ನಕ್ಕೆ ಸಿಕ್ಕ ಬೆಲೆ ಈರುಳ್ಳಿಗೂ ಸಿಗುವಂತಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top