ಮಾಡಲಿಂಗ್ ಕ್ಷೇತ್ರದಲ್ಲಿ ಕನ್ನಡದ ಕುವರ ಓಂ ಜೈಕಾರ…!

ಮಾಡೆಲಿಂಗ್ ಕ್ಷೇತ್ರದಲ್ಲಿ ಕನ್ನಡದ ಕುವರನೊಬ್ಬ ಸದ್ದಿಲ್ಲದೆ ತನ್ನ ಛಾಪು ಮೂಡಿಸುತ್ತಿದ್ದಾನೆ. ಈ ಯುವ ಮಾಡೆಲ್ ಹೆಸರು ಓಂ ಅಂತ. ಸದ್ಯ ಮಾಡೆಲಿಂಗ್ ಕ್ಷೇತ್ರದಲ್ಲಿ ಈತನದ್ದೇ ಝೇಂಕಾರ.
ದಕ್ಷಿಣ ಭಾರತದ ಫ್ಯಾಷನ್ ಕ್ಷೇತ್ರದಲ್ಲಿ ನಮ್ಮ ಕನ್ನಡದ ಈ ಓಂನೇ ಟಾಪ್ ಒನ್..! ಮಾಡೆಲಿಂಗ್ ಮಾತ್ರವಲ್ಲದೆ ಸಿನಿಮಾ ರಂಗದಲ್ಲೂ ಓಂ ಭರವಸೆ ಮೂಡಿಸಿದ್ದಾನೆ.
ಸೌತ್ ಇಂಡಿಯಾ ಸೂಪರ್ ಕಿಡ್ ಮಾಡೆಲ್ ಓಂ ಇಂಟರ್ ನ್ಯಾಷನಲ್ ಮಾಡೆಲಿಂಗ್ ಕ್ಷೇತ್ರದಲ್ಲೂ‌ ಮಿಂಚಿರುವ ಹುಡುಗ. ಈತನ ಮುಡಿಗೆ ಮತ್ತೊಂದು ಕಿರೀಟ ಅಲಂಕರಿಸಿದೆ.
ಬೆಂಗಳೂರಿನ ಎಲಿಮೆಂಟ್ಸ್ ಮಾಲ್ ನಲ್ಲಿನಡೆದ ಕರ್ನಾಟಕ ಫ್ಯಾಷನ್ ವೀಕ್ ಫೆಸ್ಟಿವಲ್ ನಲ್ಲಿ ಸೀಸನ್ 4 ನಲ್ಲಿ ಸ್ಯಾಂಡಲ್ ವುಡ್ ಬಾಲ ನಟ ಮಾಸ್ಟರ್ ಓಂ ಸೆಲೆಬ್ರಿಟಿ ಬ್ರಾಂಡ್ ಅಂಬಾಸಡರ್ ಆಗಿ ಕೋ ಮಾಡೆಲ್ ರೆಷಲ್ ಜೊತೆ ರ್ಯಾಂಪ್ ವಾಕ್ ಮಾಡಿದರು. ಈ ಸಂದರ್ಭದಲ್ಲಿ ಮಾಸ್ಟರ್ ಓಂಗೆ ಮಿಸೆಸ್ ಸೌತ್ ಇಂಡಿಯಾ ಕ್ವೀನ್, ಫಿಟ್ನೆಸ್ ದಿವಾ ಹಾಗೂ ಕಿಡ್ಸ್ ಗ್ರೂಮಿಂಗ್ ಸ್ಪೆಷಲಿಸ್ಟ್ ಜ್ಯೋತ್ಸ್ನಾ ಅವರು ಸೌತ್ ಇಂಡಿಯಾ ಮಾಡೆಲಿಂಗ್ ಕ್ಷೇತ್ರದಲ್ಲಿ ನಂಬರ್ ಓನ್ ಸ್ಥಾನ ಅಲಂಕರಿಸಿದ್ದಕ್ಕೆ ಫಲಕ ಹಾಗೂ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top