ಇವಳಂಥಾ ಹುಡ್ಗೀನ ನೋಡಿರೋಕೆ ಚಾನ್ಸೇ ಇಲ್ವೇನೋ…?!

ಅಂದು ಇದ್ದಕ್ಕಿದ್ದಂತೆ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಶುರುವಾಯ್ತು…! ನೋಡು ನೋಡುತಿದ್ದಂತೆ ಚರಂಡಿ ನೀರು ಉಕ್ಕಿ ರಸ್ತೆ ಮೇಲೆ ಹರಿಯಲಾರಂಭಿಸ್ತು. ಕೆಲವೇ ನಿಮಿಷಗಳಲ್ಲಿ ರಸ್ತೆ ಜಲಾವೃತ…!
ಗಾಳಿ , ಮಳೆ ಆರ್ಭಟಕ್ಕೆ ಜನ ಮನೆ ಸೇರಿಕೊಳ್ಳೋದು ಕಷ್ಟವಾಯ್ತು.‌
ಮಂಗಳೂರು ವಿವಿಗೆ ಎಂಎಸ್ಸಿ ಗೆ ಅಪ್ಲಿಕೇಶನ್ ಹಾಕಲು ಶಿವಮೊಗ್ಗದಿಂದ ಬಂದಿದ್ದ ಪ್ರತೀಕ್ ಮಳೆ ಬಿಡಲೆಂದು ಪ್ರಾರ್ಥಿಸುತ್ತಾ ಕ್ಯಾಂಪಸ್ ಬಳಿಯ ಬಸ್ ಸ್ಟಾಪ್ ನಲ್ಲಿ ನಿಂತ.‌ ಇವನ ಗ್ರಹಚಾರಕ್ಕೆ ಒಬ್ಬರೇ ಒಬ್ಬರು ಅಲ್ಲಿರಲಿಲ್ಲ.‌ ಮೋಡ ಕವಿಯುತ್ತಿದ್ದಂತೆ ಎಲ್ಲರೂ ಅವರವರ ಗಾಡಿ ತಗೊಂಡು ಗೂಡು ಸೇರಿದ್ದರು…!
ರಾತ್ರಿ 7.30, ಮಳೆ ನಿಲ್ಲಲೇ ಇಲ್ಲ. ಬಸ್ ಸಂಚಾರ ಸ್ಥಗಿತಗೊಂಡಿತ್ತು. ಪ್ರತೀಕ್ ಜಸ್ಟ್ ಅಪ್ಲಿಕೇಶನ್ ಹಾಕಿ‌ ಹೋಗುವುದು ಅಂತ ಹೆಚ್ಚಿಗೆ ದುಡ್ಡು ತಂದಿರಲಿಲ್ಲ…ಹೆಚ್ಚುವರಿ ಬಟ್ಟೆ ಕೂಡ ಇವನ ಬಳಿ ಇರಲಿಲ್ಲ..! ಲಾಡ್ಜ್ ಮಾಡಿಕೊಂಡು ಉಳಿಯುವುದು ಸಹ ಕಷ್ಟ…! ಅಕ್ಕನಿಗೆ ಫೋನ್ ಮಾಡಿ ಅಕೌಂಟ್ ಗೆ ದುಡ್ಡು ಹಾಕಿಸಿಕೊಂಡ ಮೇಲೆ ನೆನಪಾಯ್ತು ಎಟಿಎಂ ಕಾರ್ಡ್ ಮನೆಯಲ್ಲೇ ಮರೆತು ಬಿಟ್ಟಿದ್ದೀನಿ ಅಂತ‌.‌..!
ಆ ಜೋರು ಮಳೆಯಲ್ಲಿ ಎಲ್ಲಿಗೆ ಹೋಗುವುದು? ಏನ್ ಮಾಡೋದು? ತಲೆ ಮೇಲೆ ಕರ್ಚಿಫ್ ಹಾಕ್ಕೊಂಡು ,‌ಕೈ ಹೊತ್ತು ಬಸ್ಟ್ ಸ್ಟಾಪ್ ನಲ್ಲಿಯೇ ಕುಳಿತ…!
ರಾತ್ರಿ ಸುಮಾರು 9 ಗಂಟೆಗೆ ಮಳೆ ಕಡಿಮೆಯಾಯ್ತು. 10-10.30 ಹೊತ್ತಿಗೆ ರಸ್ತೆಯಲ್ಲಿ ತುಂಬಿದ್ದ ನೀರು ಕಡಿಮೆಯಾಗಿ ಸಹಜ ಸ್ಥಿತಿಯತ್ತ ಮರಳಿತು.
ಅಬ್ಬಾ….ಯಾವುದಾದರು ಗಾಡಿ ಬಂದರೆ ಅದರಲ್ಲಿ ಹತ್ಕೊಂಡು ಶಿವಮೊಗ್ಗ ತಲುಪುವುದು ಅಂತ ಕಾದು ನಿಂತ ಪ್ರತೀಕ್.
ಅಷ್ಟೊತ್ತಿಗೆ ಕ್ಯಾಂಪಸ್ ಕಡೆಯಿಂದ ಸ್ಕೂಟಿಯಲ್ಲಿ ಬಂದಳು ಪಾವನಿ. ಪ್ರತೀಕ್ ಗಾಡಿ ಅಡ್ಡ ಹಾಕಿದ , ಅವಳು ನಿಲ್ಲಿಸದೇ ಮುಂದೆ ಹೋದಳು…! ಅಷ್ಟೊತ್ತಿಗೆ ಯಾವ ಹುಡುಗಿ ತಾನೆ ಹುಡುಗನಿಗೆ ಡ್ರಾಪ್ ಕೊಡಲು ಗಾಡಿ ನಿಲ್ಲಿಸ್ತಾಳೆ ಹೇಳಿ..?

ಸ್ವಲ್ಪ ದೂರ ಹೋದ ಪಾವನಿಗೆ ಅದೇನನಿಸಿತೋ ಗೊತ್ತಿಲ್ಲ. ವಾಪಸ್ಸು ಬಂದಳು. ಪ್ರತೀಕ್ ನನ್ನು ನೋಡಿ ಎಲ್ಲಿಗೆ ಹೋಗ್ಬೇಕಿತ್ತು ಎಂದು ಕೇಳಿದ್ಲು…?‌ ಪ್ರತೀಕ್ ವಿವರವಾಗಿ ಹೇಳಿದ.
ಇಷ್ಟೊತ್ತಿಗೆ ಶಿವಮೊಗ್ಗಕ್ಕೆ ಹೇಗೆ ಹೋಗ್ತೀರಿ…? ಇಲ್ಲೇ ನಾಲ್ಕು ಕಿ.ಮೀ ದೂರದಲ್ಲಿ ನಮ್ ಮನೆಯಿದೆ. ನಾನು ಮಳೆ ಬಂದಿದ್ರಿಂದ ಇಷ್ಟೊತ್ತು ಕ್ಯಾಂಪಸ್ ನಲ್ಲೇ ಕಾದಿದ್ದೆ. ನಮ್ ಮನೆಗೆ ಹೋಗೋಣ ಅಂತ ಒತ್ತಾಯ ಮಾಡಿ ಕರೆದುಕೊಂಡು ಹೋದ್ಲು.
ಮನೆಗೆ ಹೋಗಿ ಅಪ್ಪ-ಅಮ್ಮ, ಅಣ್ಣನಿಗೆ ಎಲ್ಲಾ ವಿಷಯವನ್ನು ಹೇಳಿ ಪ್ರತೀಕ್ ಗೆ ಉಳಿಯಲು ಅವಕಾಶ ಮಾಡಿಕೊಟ್ಟಳು.
ಪ್ರತೀಕ್ ಬೆಳಗ್ಗೆ ಎದ್ದು ಶಿವಮೊಗ್ಗಕ್ಕೆ ಹೋದ…
ಮತ್ತೆ ಸುಮಾರು ಒಂದು ತಿಂಗಳ ನಂತರ ಅದೇ ಮಂಗಳೂರು ವಿವಿ ಕ್ಯಾಂಪಸ್ ನಲ್ಲಿ ಪ್ರತೀಕ್ ಮತ್ತು ಪಾವನಿ ಭೇಟಿ. ಇಬ್ಬರು ಒಂದೇ ಡಿಪಾರ್ಟ್ ಮೆಂಟ್…! ಅಂದು ಸಿಕ್ಕಾಗ ಯಾವ ಡಿಪಾರ್ಟ್ ಮೆಂಟ್ ? ಏನು?‌ ಎಂಥ ಎಂದು ಇಬ್ಬರೂ ಹೇಳಿಕೊಂಡಿರ್ಲಿಲ್ಲ.
ಸರಿ, ಮೊದಲೇ ಪರಿಚಯ ಇದ್ದಿದ್ರಿಂದ ಪ್ರತೀಕ್, ಪಾವನಿ ತುಂಬಾ ಕ್ಲೋಸ್ ಆದ್ರು.
ಮೊದಲ ವರ್ಷದ ಎಂಎಸ್ ಸಿ ಕೊನೆಯ ದಿನಗಳು..! ಆ ವೇಳೆ ಪ್ರತೀಕ್ ಗೆ ದೊಡ್ಡ ಆಘಾತ ಕಾದಿತ್ತು. ಅಪ್ಪ-ಅಮ್ಮ ಮತ್ತು ಮದುವೆ ಹೊಸ್ತಿನಲ್ಲಿದ್ದ ಅಕ್ಕ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರು…! ಪ್ರತೀಕ್ ಗೆ ಈ ದುಃಖ ತಡೆದುಕೊಳ್ಳಲು ಆಗಲೇ ಇಲ್ಲ.

ಪ್ರತೀಕ್ ಪೋಷಕರ ಕಾರ್ಯ ನಿಮಿತ್ತ ಕೆಲದಿನ ಶಿವಮೊಗ್ಗದಲ್ಲೇ ಇದ್ದ. ಪಾವನಿ ಧೈರ್ಯ ತುಂಬುವ ಕೆಲಸ ಮಾಡಿದಳು. ಅಷ್ಟೇ ಅಲ್ಲ…ಅವನ ಅಸೈನ್ಮೆಂಟ್, ಸೆಮಿನರ್ ಪೇಪರ್ ಎಲ್ಲವನ್ನೂ ಅವಳೇ ರೆಡಿ ಮಾಡಿದಳು. ವಾಪಸ್ಸು ಮಂಗಳೂರಿಗೆ ಬರಲ್ಲ ಎಂದು ಹಠ ಹಿಡಿದಿದ್ದ ಪ್ರತೀಕ್ ನನ್ನ ತನ್ನ ಅಪ್ಪ-ಅಮ್ಮನನ್ನು ಕಳುಹಿಸಿ ಕರೆಸಿಕೊಂಡಳು. ಪಾವನಿಯ ಅಪ್ಪ-ಅಮ್ಮನ ಮೂಲಕ ಧೈರ್ಯ ತುಂಬುವ, ಬುದ್ಧಿಮಾತು ಹೇಳಿಸಿದಳು. ವಾಪಸ್ಸು ಬಂದ ಪ್ರತೀಕ್ ಗೆ ರೆಡಿಯಿದ್ದ ಅಸೈನ್ಮೆಂಟ್ ಅನ್ನು ಸಂಬಂಧಿಸಿದ ಪ್ರಾಧ್ಯಾಪಕರಿಗೆ ಸಬ್ಮಿಟ್ ಮಾಡುವಂತೆ ಹೇಳಿದಳು.ಅವಳು ರೆಡಿ ಮಾಡಿಟ್ಟಿದ್ದ ಸೆಮಿನರ್ ಕಾಪಿ ನೋಡಿ ಪ್ರತೀಕ್ ಸೆಮಿನರ್ ಕೂಡ ಮಾಡ್ದ.‌ಪರೀಕ್ಷೆಯೂ ಮುಗಿಯಿತು. ಶಿವಮೊಗ್ಗಕ್ಕೆ ಹೋದ.
ಇವನಿಗೆ ತನ್ನವರು ಅಂತ ಯಾರೂ ಇರಲಿಲ್ಲ. ಹೈಸ್ಕೂಲ್ ಟೀಚರ್ಆಗಿದ್ದ ಅಪ್ಪ-ಅಮ್ಮ ಮಾಡಿದ್ದ ಮನೆ ಬಿಟ್ಟರೆ ಬೇರೇನು ಆಸ್ತಿಯೂ ಇಲ್ಲ…! ವಿದ್ಯಾಭ್ಯಾಸಕ್ಕೆ, ಅಕ್ಕನ ಮದ್ವೆಗೆ ಅಂತ ಅಪ್ಪ ಕೂಡಿಟ್ಟಿದ್ದ ಹಣವನ್ನು ತಕ್ಕಮಟ್ಟಿನ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡು ಮನೆಯನ್ನು ಬಾಡಿಗೆಗೆ ನೀಡಿ ಮಂಗಳೂರು ಸೇರಿದ. ಪಾರ್ಟ್ ಟೈಮ್ ಕೆಲಸ ಮಾಡ್ಕೊಂಡು ಎರಡನೇ ವರ್ಷದ ಎಂಎಸ್ಸಿ ಪೂರೈಸಲು ಮುಂದಾಗಿದ್ದ‌.
ಇವನು ಕೆಲಸ ಹುಡುಕೋದು ಪಾವನಿಗೆ ಗೊತ್ತಾಯ್ತು. ಬೇಡ, ಇರುವ ದುಡ್ಡಲ್ಲೇ ಏನಾದ್ರು ಮಾಡು, ಸಾಕಾಗುತ್ತೆ. ಮನೆ ಬಾಡಿಗೆ ಬರುತ್ತಲ್ಲ..ಸಾಕು…ಚೆನ್ನಾಗಿ ಓದು ಎಂದು ಬುದ್ಧಿ ಹೇಳಿದಳು. ಅವಳ‌ ಮಾತನ್ನು ಕೇಳಿದ ಪ್ರತೀಕ್.

ಅಂತೂ -ಇಂತೂ ಪಿಜಿ ಮುಗಿಯಿತು. ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ‌ ಪ್ರತೀಕ್ ಕೆಲಸಕ್ಕೆ ಸೇರಿದ. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಎರಡು ವರ್ಷದ ಬಳಿಕ ವಿಧಿ ಮತ್ತೆ ಪ್ರತೀಕ್ ಬಾಳಲ್ಲಿ ಆಟವಾಡಿತು. ಪ್ರತೀಕ್ ಆ್ಯಕ್ಸಿಡೆಂಟ್ ನಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡ. ಪ್ರತೀಕ್ ಆಸ್ಪತ್ರೆಗೆ ಸೇರಿದಾಗ ಪಾವನಿ ಬಂದು ಅವನ ಆರೈಕೆ ಮಾಡಿದಳು…! ಅವಳ ಅಪ್ಪ-ಅಪ್ಪ ಮೊದ ಮೊದಲು ಬೈದರೂ ಬಳಿಕ ಅವಳ ಪಾಡಿಗೆ ಅವಳನ್ನು ಬಿಟ್ಟರು.

ಅಷ್ಟೊತ್ತಿಗಾಗಲೇ ಗೊತ್ತೋ ಗೊತ್ತಾಗದಂತೆ ಪಾವನಿ ಪ್ರತೀಕ್ ನನ್ನು ಪ್ರೀತಿಸುತ್ತಿದ್ದಳು. ಪ್ರತೀಕ್ ಡಿಸ್ಚಾರ್ಜ್ ಆದಮೇಲೆ ಪ್ರೀತಿ ನೀವೇಧಿಸಿಕೊಂಡಳು. ಮದುವೆಯಾಗುವುದಾಗಿ ಹೇಳಿದಳು‌..!
ಕಾಲಿಲ್ಲದ ನನ್ನ ಏಕೆ ಮದ್ವೆ ಆಗ್ತೀಯ? ಒಳ್ಳೆಯ ಹುಡುಗ ಸಿಕ್ತಾನೆ ಎಂದು ಪ್ರತೀಕ್ ಎಷ್ಟು ಹೇಳಿದರೂ ಪಾವನಿ ಕೇಳಲಿಲ್ಲ. ಅಪ್ಪ-ಅಮ್ಮನ ಒಪ್ಪಿಸಿ ಪ್ರತೀಕ್ ನನ್ನು ಮದುವೆಯಾಗಿದ್ದಾಳೆ…! ಪ್ರತೀಕ್ ಮನೆಯಲ್ಲಿ ಟ್ಯೂಷನ್ ಮಾಡ್ತಿದ್ದಾನೆ. ಪಾವನಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ದಾಳೆ…!

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top