ಕೊನೆಗಾಲದಲ್ಲಿ ಪತ್ನಿ, ಮಕ್ಕಳೇ ಅವರನ್ನು ದೂರವಿಟ್ಟರು…! ಇಂಥಾ ಕಲ್ಲು ಹೃದಯಿಗಳೂ ಇರ್ತಾರ…?

ತುಂಬು ಕುಟುಂಬದಲ್ಲಿ ಹುಟ್ಟಿದ ವ್ಯಕ್ತಿ ಕೊನೆಗಾಲದಲ್ಲಿ ಬೀದಿ ಹೆಣಕ್ಕೂ ಕಡೆಯಾದ ಕರುಣಾಜನಕ ಕತೆ ಇದು…!
ಚಿಕ್ಕಮಗಳೂರಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ವ್ಯಕ್ತಿ ವೆಂಕಪ್ಪ. ಇವರದ್ದು ಜಾಯಿಂಟ್ ಫ್ಯಾಮಿಲಿ. ಇವರ ತಂದೆ ಮುನಿಯಪ್ಪ ಗೌಡರೇ ಮನೆಗೆ ಹಿರಿಯರು. ಅಪ್ಪ, ಮೂವರು ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು , ಅವರ ಮಕ್ಕಳು ಎಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ರು.‌ ಅಷ್ಟೇ ಅಲ್ಲ ಹೆಚ್ಚು ಕಡಿಮೆ‌ 20 ಮಂದಿ ಕೆಲಸದವರೂ ಇವರ ಮನೆಯ ಸದಸ್ಯರೇ ಆಗಿದ್ದರು…!
ವೆಂಕಪ್ಪ ಆಗಿನ ಕಾಲದಲ್ಲಿ ಬಿಎಸ್ ಸಿ ಮಾಡಿದ್ದರು. ಮನೆಯಲ್ಲಿ ಸಾಕಷ್ಟು ಜಮೀನು ಇದ್ದಿದ್ದರಿಂದ ಕೆಲಸಕ್ಕೆ ಬೇರೆಕಡೆ ಹೋಗಿರಲಿಲ್ಲ.
24 ವರ್ಷದವರಿರುವಾಗ ಪಕ್ಕದ ಊರಿನ ನರಸಿಂಹ ಗೌಡರ ಮಗಳು ಸೀತಮ್ಮಳ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು. ಮೊದ ಮೊದಲು ಸೀತಮ್ಮ ಎಲ್ಲರ ಜೊತೆ ಹೊಂದಿಕೊಂಡವಳಂತೇ ಇದ್ದಳು. ಆದ್ರೆ, ಬರು ಬರುತ್ತಾ ಪತಿ ವೆಂಕಪ್ಪನ ಕಿವಿ ಹಿಂಡಲು ಶುರು‌ಮಾಡಿದಳು. ಮನೆಯಲ್ಲಿ, ಜಮೀನಿನಲ್ಲಿ ಕೆಲಸ ಮಾಡಿದ್ರೆ ನಮಗೇನು ಲಾಭ. ಅವರುಗಳು ಮಾಡಿಕೊಳ್ಳಲಿ. ನಾವು ನಮ್ಮ ಪಾಲನ್ನು ತೆಗೆದುಕೊಂಡು ದೂರ ಹೋಗೋಣ ಎಂದಳು.
ಮೊದಲು ವೆಂಕಪ್ಪ ಸೀತಮ್ಮಳ‌ ಮಾತು ಕೇಳಲಿಲ್ಲ. ಆದ್ರೆ, ಅವಳ ಹಠ ಹಾಗೂ ಕಿರಿಕಿರಿ ತಾಳಲಾಗದೆ ತಂದೆ ಮುನಿಯಪ್ಪ ನ ಎದುರು ಪ್ರಸ್ತಾಪ ಇಟ್ಟೇ ಬಿಟ್ಟ..!
ಆ ಕ್ಷಣ ಮುನಿಯಪ್ಪ ಮತ್ತು ಇಡೀ ಕುಟುಂಬದ ಸದಸ್ಯರಿಗೆಲ್ಲರಿಗೂ ಶಾಕ್…! ವೆಂಕಪ್ಪ ನ‌ ಮನಸ್ಸು ಬದಲಾಯಿಸೋ ಪ್ರಯತ್ನ ಸಫಲವಾಗಲಿಲ್ಲ. ಅನಿವಾರ್ಯವಾಗಿ ಮುನಿಯಪ್ಪ ವೆಂಕಪ್ಪನ ಆಸ್ತಿ ಪಾಲು ಮಾಡಿಕೊಟ್ಟರು…! ಇದೇ ವೇಳೆ ಉಳಿದವರ ಆಸ್ತಿಯನ್ನೂ ಅವರವರ ಹೆಸರಿಗೆ ಬರೆಸಿಯೇ ಬಿಟ್ಟರು..!
ತಮ್ಮ ಪಾಲಿನ‌ ಆಸ್ತಿ ತೆಗೆದುಕೊಂಡು ವೆಂಕಪ್ಪ ಮತ್ತು ಸೀತಮ್ಮ ಮನೆ ಬಿಟ್ಟರು. ಉಳಿದವರು ಅಲ್ಲೇ ಮೊದಲಿನಂತೆಯೇ ಉಳಿದುಕೊಂಡು‌ ಒಗ್ಗಟ್ಟಿನ ಜೀವನ‌ ಮುಂದುವರೆಸಿದರು.
ವೆಂಕಪ್ಪ-ಸೀತಮ್ಮ ಅವರ ಹೊಸ ಜೀವನ ಆರಂಭವಾಯ್ತು. ವರ್ಷಕ್ಕೆ ಒಂದರಂತೆ ಮೂರು ವರ್ಷ ಮೂರು ಹೆಣ್ಣು ಮಕ್ಕಳನ್ನು ಹೆತ್ತಳು ಸೀತಮ್ಮ.
ನಾಲ್ಕೈದು ವರ್ಷದ ಬಳಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದ್ರೆ ಆಗುತ್ತೆ. ನಾವು ಹಳ್ಳಿಯಲ್ಲಿ ಬೆಳೆದಂತೆ ,‌ನಮ್ ಮಕ್ಕಳು ಬೆಳೆಯೋಕೆ ಆಗಲ್ಲ ಎಂದು ವೆಂಕಪ್ಪನ ತಲೆ ತಿಂದು ಜಮೀನನ್ನೂ ಮಾರಾಟ ಮಾಡಿಸಿ ಜಿಲ್ಲಾಕೇಂದ್ರ ಚಿಕ್ಕಮಗಳೂರಿಗೆ ಬಂದು ನೆಲೆನಿಲ್ಲುವಂತೆ ಮಾಡಿದಳು ಸೀತಮ್ಮ.

ಈಕೆಯ ವರ್ತನೆ ಸಹಿಸಲಾಗದೇ ಇದ್ದರೂ ವೆಂಕಪ್ಪ ಸಾಧ್ಯವಾದಷ್ಟು ಸಮಾಧಾನದಿಂದ ಜೀವನ ಸಾಗಿಸಿದ. ಇವತ್ತು ಸರಿ ಹೋಗ್ತಾಳೆ, ನಾಳೆ ಸರಿ ಹೋಗ್ತಾಳೆ ಎಂದು ಸುಮ್ಮನಿದ್ದ. ನಾಯಿ ಬಾಲ ಡೊಂಕೇ‌ ಅಲ್ವೇ..? ವೆಂಕಪ್ಪನ ಪತ್ನಿ ಬದಲಾಗಲಿಲ್ಲ.
ವೆಂಕಪ್ಪ ಬರು ಬರುತ್ತಾ ಇಸ್ಪೀಟ್, ಮದ್ಯ ವ್ಯಸನಕ್ಕೆ ಜೋತು ಬಿದ್ದ.‌ ಜಮೀನು ಮಾರಿದ ಬಳಿಕ ಕುಟುಂಬ ನಿರ್ವಹಣೆಗೆ ಅಂತ ನಡೆಸುತ್ತಿದ್ದ ಅಂಗಡಿ ವ್ಯಾಪಾರದ ಕಡೆಗೂ ವೆಂಕಪ್ಪ ಗಮನ ಕೊಡಲಿಲ್ಲ.‌
ದಿನಗಳು ಉರುಳಿದಂತೆ ಸೀತಮ್ಮ ಅಂಗಡಿ ಜವಬ್ದಾರಿ ಹೊರಲೇ ಬೇಕಾಯಿತು.‌ ತಾನು ಮಾಡಿದ ತಪ್ಪಿಗೆ ಬೆಲೆ ಕಟ್ಟಿದಂತೆ ಸೀತಮ್ಮ ಅಂಗಡಿಯನ್ನು ತಾನೇ ನಡೆಸರಾಂಭಿಸಿದಳು.‌
ಹಾಗೋ ಹೀಗೋ ವರ್ಷಗಳು ಉರುಳಿದವು‌.‌ ಮಕ್ಕಳು ಕಾಲೇಜು ಮೆಟ್ಟಿಲು ಏರುವ ಹೊತ್ತಿಗೆ ವೆಂಕಪ್ಪ ದುಷ್ಚಟಗಳಿಂದ ಸ್ವಲ್ಪ‌ ದೂರ ಸರಿದು ಅವರ ಭವಿಷ್ಯದ ಬಗ್ಗೆ ಯೋಚಿಸಿದ.‌ ಅಂಗಡಿ ಜೊತೆ ಸಣ್ಣ ಕ್ಯಾಂಟೀನ್ ಮಾಡಿದರು.
ಮೂವರು ಮಕ್ಕಳ ಡಿಗ್ರಿ, ಮಾಸ್ಟರ್ ಡಿಗ್ರಿ ಮುಗಿಯಿತು‌. ಸಾಲ‌ಮಾಡಿ,‌ಕಷ್ಟಪಟ್ಟು ಮಕ್ಕಳನ್ನು ಓದಿಸಿದ್ರು ವೆಂಕಪ್ಪ.
ಒಳ್ಳೆಯ ದಿನಗಳು ಬಂದವು ಎನ್ನುವಷ್ಟರಲ್ಲಿ ವೆಂಕಪ್ಪ ಅನಾರೋಗ್ಯಕ್ಕೆ ತುತ್ತಾದರು. ಆಸ್ಪತ್ರೆ ಸೇರಿದರು.‌ ಹಾಸಿಗೆ ಹಿಡಿದು ನರಳುತ್ತಿದ್ದ ಅವರನ್ನು ನೋಡಿಕೊಳ್ಳಲು ಆಗಲ್ಲ ಅಂತ ಸೀತಮ್ಮ ಮತ್ತು ಮಕ್ಕಳು ಕೆಲಸದವರಿಗೆ ನೂರೋ ಇನ್ನೂರೋ ರೂ ಕೊಟ್ಟು ಆಸ್ಪತ್ರೆಯಲ್ಲಿ ಬಿಟ್ಟರು..! ವೆಂಕಪ್ಪನ ನೋಡಿಕೊಳ್ಳಲು ಇವರಾರು ಇರಲಿಲ್ಲ.
ದಿನ ಕಳೆದಂತೆ ವೆಂಕಪ್ಪ ಉಳಿಯುವುದಿಲ್ಲ ಎಂದು ಗೊತ್ತಾದಾಗ ದುಡ್ಡು ವೇಸ್ಟ್ ಅಂತ ಡಿಸ್ಚಾರ್ಜ್ ಮಾಡಿಸಿ ಮನೆಗೆ ತಂದು ಒಂದು‌ ಕೋಣೆಯಲ್ಲಿ ಹಾಕಿದರು.
ವೆಂಕಪ್ಪನನ್ನು ನೋಡಿದರೆ ಊಟ ಸೇರಲ್ಲ ಅಂತ ತೀರ ತಾತ್ಸಾರ ಮಾಡಿದರು. ಒಂದ್ ದಿನ ನೋವಿನಲ್ಲೇ ವೆಂಕಪ್ಪ ಕೊನೆಯುಸಿರೆಳೆದರು.
ಅವರ ಜಮೀನಿನಲ್ಲಿ ಮಣ್ಣುಮಾಡಲು ಅವರ ಕುಟುಂಬದವರು ಬಯಸಿದರೂ ಸೀತಮ್ಮ ಅಲ್ಲಿತನಕ ಶವ ತಗೊಂಡು ಹೋಗೋಕೆ ಆಗಲ್ಲ. ಇಲ್ಲೇ ವಿದ್ಯುತ್ ಚಿತಾಗಾರದಲ್ಲಿ ಬೂದಿ ಮಾಡೋದು ಅಂತ ಅಲ್ಲಿಯೂ ಅವರ ಹಠವನ್ನೇ ಸಾಧಿಸಿದರು…! ಮಕ್ಕಳೂ ಸಹ ತಂದೆ ಎಂಬ ಪ್ರೀತಿ, ಆಸೆ ಇಲ್ಲದಂತೆ ವರ್ತಿಸಿದರು…!
ಮೂವರು ಹೆಣ್ಣು ಮಕ್ಕಳಿಗೂ ಈಗ ಮದ್ವೆ ಆಗಿದೆ. ಸೀತಮ್ಮ ಒಬ್ಬೊಬ್ಬ ಹೆಣ್ಣುಮಕ್ಕಳ ಮನೆಯಲ್ಲಿ ಅಷ್ಟೋ ಇಷ್ಟೋ ದಿನ ಇರ್ತಿದ್ದಾರೆ. ಮಕ್ಕಳು ನಿರ್ಲಕ್ಷ್ಯ ಮಾಡ್ತಿದ್ದಾರೆ…ಮಾಡಿದ್ದಕ್ಕೆ ಅನುಭವಿಸಲೇ ಬೇಕಲ್ವೇ..?

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top