ಯೂಟ್ಯೂಬ್ ನಲ್ಲಿ ಟ್ರೆಂಡ್ ಆಗ್ಬೇಕು ಅಂತ ಟೀಸರ್ ರಿಲೀಸ್ ಮಾಡಿಲ್ಲ..ಅಭಿಮಾನಿಗಳೇ ಟ್ರೆಂಡ್ ಮಾಡ್ತಾರೆ..!

ಚಾಲೆಂಜಿಂಗ್ ಸ್ಟಾರ್..ಡಿ ಬಾಸ್.. ಬಾಕ್ಸಾಫಿಸ್ ಸುಲ್ತಾನ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ಟೀಸರ್ ರಿಲೀಸ್ ಆಗುತ್ತೆ ಅನ್ನೋ ಸುದ್ದಿ ಕೇಳಿನೇ..ಸಿನಿಮಾದ ಟೈಟಲ್ ಭಾರೀ ಟ್ರೆಂಡ್ ಆಗಿತ್ತು.. ಇಂದು ಒಡೆಯ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ..ಟೀಸರ್ ನಲ್ಲಿ ಇರೋ ಡೈಲಾಗ್ ಗೆ ಡಿ ಬಾಸ್ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ. ಇನ್ನು ಯೂಟ್ಯೂಬ್‌ನಲ್ಲಿ ಟೀಸರ್ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ 6 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದ್ದು ಸದ್ಯ ಸ್ಯಾಂಡಲ್ವುಡ್ ನ ಎಲ್ಲಾ ದಾಖಲೆಗಳು ಉಡೀಸ್ ಆಗೋ ಎಲ್ಲಾ ಲಕ್ಷಣಗಳು ಕಾಣ್ತಾ ಇದೆ. ಅಧಿಕಾರದ ಆಸೆ ಇಂದ ಬಂದಿಲ್ಲ..ಅಧಿಕಾರನೇ ಆಸೆ ಪಟ್ಟು ಇಲ್ಲಿ ಕರೆಸಿಕೊಂಡಿದೆ..ಇನ್ಮುಂದೆ ಅಧಿಕಾರನೂ ನಂದೇನೆ ಆಜ್ಞೆನೂ ನಂದೆನೇ..ನನ್ ಫೇಸ್ ಮಾಡ್ಬೇಕು ಅಂದ್ರೆ ಗುಂಡಿಗೇಲಿ‌ ಧಮ್ ಇರ್ಬೇಕು..ಅಂತ ಯೂಟ್ಯೂಬ್ ನಲ್ಲೂ ಹವಾ ಕ್ರಿಯೇಟ್ ಮಾಡ್ತಿದ್ದಾರೆ ಡಿ ಬಾಸ್..

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top