4 ವರ್ಷದಿಂದ ಹ್ಯಾಂಡ್ ಪಂಪ್ ಹೊಡೆಯದಿದ್ದರೂ ಸತತವಾಗಿ ನೀರು ಬರ್ತಾನೆ ಇದೆ ಈ ಬೋರ್‌ವೆಲ್‌ನಲ್ಲಿ..!

ಉತ್ತರ ಕರ್ನಾಟಕ ಅಂದ್ರೆ ಒಂದು ರೀತಿ ಬರಗಾಲದ ಛಾಯೇ ಇದ್ದೆ ಇರುತ್ತದೆ, ಇನ್ನು ನೀರಿಗಾಗಿ ಮೈಲುಗಟ್ಟಲೆ ನಡೆದುಕೊಂಡು ಹೋಗುವುದನ್ನು ನಾವು ನೋಡಿದ್ದೇವೆ, ಆದ್ರೆ ಇಲ್ಲೊಂದು ಬೋರ್‌ವೆಲ್‌ನಲ್ಲಿ ಮಾತ್ರ ಸತತ ನಾಲ್ಕು ವರ್ಷದಿಂದ ದಿನದ 24ಗಂಟೆಯೂ ತನ್ನಷ್ಟಕ್ಕೆ ತಾನೇ ನೀರು ಬರುತ್ತಿದೆ.

yadagiri borewell rahasya

ಹೌದು ಈ ರೀತಿಯ ವಿಸ್ಮಯ ನಡೀತದಿರೋದು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕಾಂಡಗೇರಾ ಗ್ರಾಮದಲ್ಲಿ, ಈ ವಿಸ್ಮಯ ಬೋರ್‌ವೆಲ್‌ನಲ್ಲಿ ಬೇಸಿಗೆ, ಮಳೆ, ಚಳಿಗಾಲ ಎನ್ನದೇ ಎಲ್ಲಾ ಕಾಲದಲ್ಲೂ ಕಳೆದ ನಾಲ್ಕು ವರ್ಷದಿಂದ ನೀರು ಸತತವಾಗಿ ಬರುತ್ತಲೇ ಇದೆ. ಇನ್ನು ಈ ಗ್ರಾಮದಲ್ಲಿ 9 ಹ್ಯಾಂಡ್‌ ಬೋರ್‌ವೆಲ್‌ಗಳಿದ್ದು ಯಾವುದರಲ್ಲೂ ನೀರಿಲ್ಲ, ಆದ್ರೆ ಈ ಹ್ಯಾಂಡ್‌ ಬೋರ್‌ವೆಲ್‌ ನಲ್ಲಿ ಮಾತ್ರ ದಿನದ 24 ಗಂಟೆಯೂ ನೀರು ಬರುತ್ತಿದ್ದು, ಇದು ಗ್ರಾಮಸ್ಥರಲ್ಲಿ ಆಶ್ವರ್ಯಕ್ಕೆ ಕಾರಣವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಿ

Similar Articles

Comments
Top